ವಿಜಯಪುರ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಯ ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ ೨೬, ೨೦೨೩ರಿಂದ ಆರಂಭಗೊಂಡಿದೆ. ೨೦೨೨-೨೩ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ ೨೦೨೩ರಲ್ಲಿ ತೇರ್ಗಡೆಯಾಗಿ ಫಲಿತಾಂಶ ಪ್ರಕಟಗೊಂಡ ೧೮೦ ದಿವಸದ ಒಳಗಡೆ ಕೆಲಸ ದೊರೆಯದ ಪದವಿಧರ ಹಾಗೂ ಡಿಪ್ಲೋಮಾ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಈ ಯೋಜನೆಯಡಿ ಅರ್ಹ ಪದವಿಧರರಿಗೆ ಮಾಸಿಕ ೩,೦೦೦ರೂ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ ೧,೫೦೦ ಮಾಸಿಕ ಭತ್ಯೆ ಸಿಗಲಿದೆ. ಹಾಗಾಗಿ ೨೦೨೨-೨೩ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗ ಯುವಕ/ಯುವತಿಯರು ನೋಂದಾಯಿಸಿಕೊಳ್ಲಬಹುದಾಗಿದೆ. ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ, ಸ್ವಯಂ ಉದ್ಯೋಗ ಮಾಡುತ್ತಿರುವ ಹಾಗೂ ಪದವಿ/ಡಿಪ್ಲೋಮಾ ಮುಗಿದ ನಂತರ ಮುಂದಿನ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಹರಿರುವುದಿಲ್ಲ.
ಅರ್ಹ ಅಭ್ಯರ್ಥಿಗಳು sevasindhugs.karnataka.gov.in ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಪದವಿ/ಡಿಪ್ಲೋಮಾ ತೇರ್ಗಡೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರವನ್ನು ಓಂಆ ಪೋರ್ಟಲ್‌ನಲ್ಲಿ ಸಂಬಂಧಪಟ್ಟ ವಿಶ್ವ ವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ಮಂಡಳಿಗಳು ಇಂದೀಕರಿಸಿರುವುದನ್ನು ಖಚಿತಪಡಿಸಿಕೊಳ್ಳಲು nad.karntaka.gov.in/#/Yuvnidhi ಜಾಲತಾಣದಲ್ಲಿ ಲಾಗಿನ್ ಆಗಬೇಕು. ತಮ್ಮ ಪದವಿ, ಡಿಪ್ಲೋಮಾ ಪ್ರಮಾಣಪತ್ರದಲ್ಲಿ ನೀಡಿರುವ ನೋಂದಣಿ ಸಂಖ್ಯೆಯನ್ನು ದಾಖಲಿಸಿ ಪರಿಶೀಲಿಸಿಕೊಳ್ಳಬಹುದು.
ಅರ್ಹ ಅಭ್ಯರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೆಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್‌ನಲ್ಲಿ ಲಾಗಿನ್ ಮಾಡಿಕೊಂಡು ಯುವನಿಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಲ್ಲಿಕಾರ್ಜುನ ಸದನ ಸ್ಟೇಶನ್ ರಸ್ತೆ ವಿಜಯಪುರ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ ೦೮೩೫೨-೨೫೦೩೮೩ ಮೊಬೈಲ್ ಸಂಖ್ಯೆ ೮೧೨೩೮೮೦೦೮೪ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಉದ್ಯೋಗಾಧಿಕಾರಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಯುವನಿಧಿ: ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೆಂದ್ರಗಳಲ್ಲಿ ನೋಂದಣಿಗೆ ಅವಕಾಶ
Related Posts
Add A Comment
