Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಎಸ್. ಎಸ್. ಎಲ್. ಸಿ. ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಹಾಗೂ ಉತ್ತಮ ಅಂಕಗಳನ್ನು ಗಳಿಸಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನಾನು ಪಾಸ್ ಆಗುವೆ ಎನ್ನುವ ಶೀರ್ಷಿಕೆ ಅಡಿಯಲ್ಲಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಅನುಕೂಲವಾಗುವಂತೆ, ನಾನೇ ಓದುವೇ ಎನ್ನುವ ಶೀರ್ಷಿಕೆ ಅಡಿಯಲ್ಲಿ ವಿಜಯಪುರ ಗ್ರಾಮೀಣ ವಲಯದ ವಿಷಯ ಸಂಪನ್ಮೂಲ ಶಿಕ್ಷಕರು ಸೇರಿ ರಚಿಸಿರುವ ಪ್ರಶ್ನೆ ಕೋಟಿಯನ್ನು ವಿಜಯಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗ ಕೆ. ಹೊಂಗಯ್ಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಅವರು ಹಾಗೂ ಸಂಪನ್ಮೂಲ ಶಿಕ್ಷಕರೊಂದಿಗೆ ಪ್ರಶ್ನೆ ಭಂಡಾರವನ್ನು ಬಿಡುಗಡೆಗೊಳಿಸಿದರು.ಈ ಪ್ರಶ್ನೆಗಳ ಸಂಗ್ರಹವನ್ನು ವಲಯದ ಎಲ್ಲಾ ಪ್ರೌಢಶಾಲೆಯ ಮುಖ್ಯ ಗುರುಗಳು ಮಕ್ಕಳಿಗೆ ತಲುಪುವಂತೆ ಕ್ರಮ ವಹಿಸಲು ಕೆ. ಹೊಂಗಯ್ಯ ಅವರು ತಿಳಿಸಿದರು.
ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕು ವಿಜಯಪುರ ಜಿಲ್ಲೆಯಲ್ಲಿಯೇ ಯಥಾಸ್ಥಿತಿಯಲ್ಲಿ ಇರಲಿ ಇಲ್ಲವೇ ನೂತನ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ, ಯಾವುದೇ ಕಾರಣಕ್ಕೂ ನೂತನ ಸಂಭಾವ್ಯ ಜಿಲ್ಲೆಗೆ ಬೇಡ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಂಗನಗೌಡ ಹರನಾಳ ತಿಳಿಸಿದ್ದಾರೆ.ದೇವರಹಿಪ್ಪರಗಿ ಪಟ್ಟಣವು ಭೌಗೋಳಿಕವಾಗಿ ಮದ್ಯವರ್ತಿ ಸ್ಥಳವಾಗಿದ್ದು, ಎರಡು ಹೆದ್ದಾರಿಗಳನ್ನು ಒಳಗೊಂಡಿದೆ. ಕಲಬುರಗಿ-ವಿಜಯಪುರ ಮಧ್ಯೆದ ರಾಷ್ಟ್ರೀಯ ಹೆದ್ದಾರಿ-೫೦ ಹಾಗೂ ಲಿಂಗಸಗೂರು-ಶಿರಾಡೋಣ ರಾಜ್ಯಹೆದ್ದಾರಿ-೪೧ ರ ಮೂಲಕ ಸಿಂದಗಿ ಇಂಡಿ, ವಿಜಯಪುರ ಪಟ್ಟಣಗಳೊಂದಿಗೆ ನೇರ ಸಂಪರ್ಕ ಹೊಂದಿದೆ. ಜೊತೆಗೆ ಬಸವನ ಬಾಗೇವಾಡಿ, ತಾಳಿಕೋಟೆ ತಾಲ್ಲೂಕುಗಳೊಂದಿಗೆ ಗಡಿ ಹಂಚಿಕೊಂಡಿದ್ದು, ಅಲ್ಲದೇ ನೂತನ ವಿಜಯಪುರ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಸಾರ್ವಜನಿಕರ ಪ್ರಯಾಣಕ್ಕೆ ಉತ್ತಮ ರಸ್ತೆ, ಸಾಕಷ್ಟು ಸೌಲಭ್ಯಗಳನ್ನು ಹೊಂದಿದೆ.ರಾಜ್ಯ ಸರಕಾರ ನೂತನ ಜಿಲ್ಲಾ ಕೇಂದ್ರ ಸೃಜಿಸಲು ಮುಂದಾದರೆ ದಯವಿಟ್ಟು ದೇವರಹಿಪ್ಪರಗಿಯನ್ನು ಪರಿಗಣಿಸಬೇಕು. ಅದನ್ನು ಜಿಲ್ಲಾ ಕೇಂದ್ರ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಡಳಿತ ಹಾಗೂ ಇಂಡಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬಸವನಬಾಗೇವಾಡಿ: ಎಸ್‌ಟಿಪಿ/ಟಿಎಸ್‌ಪಿ ಯೋಜನೆಯಲ್ಲಿ ಬರುವ ಅನುದಾನವನ್ನು ಬಳಸಿಕೊಂಡು ಮಾದಿಗ ಸಮಾಜದ ಯುವಕರು ಉದ್ಯೋಗಸ್ಥರಾಗಿ ಸುಂದರ ಜೀವನವನ್ನು ನಡೆಸಬೇಕೆಂದು ನಿವೃತ್ತ ಪ್ರಿನ್ಸಿಪಲ್ ಭಾರತ ಸರ್ಕಾರದ ನಾಗಪುರ ವಲಯದ ಕೇಂದ್ರೀಯ ಹಣಕಾಸು ಆದಾಯ ತೆರಿಗೆ ಕಮಿಷನರ್ ಎಚ್.ಆರ್.ಭೀಮಾಶಂಕರ ಆಯ್‌ಆರ್‌ಎಸ್ ಹೇಳಿದರು.ಪಟ್ಟಣದ ಗಣೇಶ ನಗರದ ಮಸಬಿನಾಳ ರಸ್ತೆಯಲ್ಲಿರುವ ಯಲ್ಲಾಂಗಮಠದಲ್ಲಿ ಜಿಲ್ಲಾ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬಸವನಬಾಗೆವಾಡಿ ತಾಲೂಕಾ ಘಟಕದ ನೇತೃತ್ವದಲ್ಲಿ ೨೦೨೨-೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿ.ಯು.ಸಿ, ಹಾಗೂ ೨೦೨೩-೨೪ನೇ ಸಾಲಿನಲ್ಲಿ ವೈದ್ಯಕೀಯ ಹಾಗೂ ಇಂಜಿನೀಯರಿಂಗ್ ಕೋರ್ಸ್ಗೆ ಆಯ್ಕೆಯಾದದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಪುರಸಭೆ, ಪಪಂ,ಗ್ರಾಪಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಹಾಗೂ ಹೊಸದಾಗಿ ಸರ್ಕಾರಿ ನೌಕರಿಗೆ ಸೇರಿದ ಹಾಗೂ ನಿವೃತ್ತಿ ಹೊಂದಿದ ಸಮಾಜದ ನೌಕರರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾದಿಗ ನೌಕರರ ಕ್ಷೇಮಾಭಿವೃದ್ಧಿಯಿಂದ ಸಮಾಜದಲ್ಲಿರುವ ಬಡ-ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ, ನಾವು ಸ್ವಾಭಿಮಾನದಿಂದ ಬದುಕುವ ಮಂದಿ, ಸಮಾಜಕ್ಕೆ ಬಡತನವೇ ಮೂಲ ಕಾರಣವಾಗಿದೆ, ಇದನ್ನು ಮೆಟ್ಟಿನಿಂತು…
ಕಾರಜೊಳ & ತೊನಶ್ಯಾಳದಲ್ಲಿ ಜೆಜೆಎಂ ಯೋಜನೆಗೆ ಚಾಲನೆ ನೀಡಿದ ಎಂಎಲ್ಸಿ ಸುನೀಲಗೌಡ ಪಾಟೀಲ ಸ್ಪಷ್ಠನೆ ವಿಜಯಪುರ: ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಪರವಾಗಿ ನಾನು ಹೋರಾಟ ಮಾಡಿದರ ಫಲವಾಗಿ ಜಲಜೀವನ ಮಿಷನ್(ಜೆಜೆಎಂ) ಯೋಜನೆಗೆ ಗ್ರಾ. ಪಂ. ಗಳ ವತಿಯಿಂದ ನೀಡಬೇಕಿದ್ದ ಸಮುದಾಯ ವಂತಿಗೆಯನ್ನು ರದ್ದು ಪಡಿಸಲಾಗಿದೆ. ಈಗ ಸರಕಾರವೇ ಈ ಹಣವನ್ನು ಭರಿಸುತ್ತಿದ್ದು, ಈ ದುಡ್ಡಿನಲ್ಲಿ ಗ್ರಾ. ಪಂ. ಗಳು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಸೋಮವಾರ ಬಬಲೇಶ್ವರ ತಾಲೂಕಿನ ಕಾರಜೊಳ ಗ್ರಾಮದಲ್ಲಿ ತೊನಶ್ಯಾಳ ಗ್ರಾಮದಲ್ಲಿ ರೂ.1.47 ಕೋ. ಮತ್ತು ಕಾರಜೋಳ ಗ್ರಾಮದಲ್ಲಿ ರೂ.1.22 ಕೋ. ವೆಚ್ಚದಲ್ಲಿ ಮನೆಮನೆಗಳಿಗೆ ನೀರು ಪೂರೈಸುವ ಜೆಜೆಎಂ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಈ ಮುಂಚೆ ಜೆಜೆಎಂ ಯೋಜನೆ ಕಾಮಗಾರಿಗಳಿಗೆ ಪ್ರತಿಯೊಂದು ಗ್ರಾ. ಪಂ. ಗಳು 15ನೇ ಹಣಕಾಸಿನಡಿ ಮತ್ತು ಫಲಾನುಭವಿಗಳಿಂದ ಸಮುದಾಯ ವಂತಿಗೆಯನ್ನು ನೀಡಬೇಕಿತ್ತು. ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಗ್ರಾಮಸ್ಥರು ನಮಗೆ ನಳಗಳೇ ಬೇಡ ಎಂದು…
ವ್ಯಂಗೋತ್ಸವ*- ಶ್ರೀನಿವಾಸ ಜಾಲವಾದಿ,* ಸಾಹಿತಿ ಸುರಪುರ ‘ಮದ್ಯಮುಕ್ತ ರಾಜ್ಯ ಮಾಡ್ತಾರಂತಪಾ’ ಅಂದ ಶೌರಿ’ಏನ್ ಮಾಡ್ತಾರಲೇ, ಮೊನ್ನಿ ಹೊಸ ವರ್ಸದ ಹಿಂದಿನ ರಾತ್ರಿ ಇನ್ನೂರು ಕೋಟಿ ಕುಡ್ದಾವ್ರು’ ನಕ್ಕ ಜಬರಿ’ಮತ್ತ ಅವತ್ತ ಕೋವಿಡ್ ತಳಿ ಎಲ್ಲಿ ಹೋಗಿತ್ತ?’ ಕೇಳಿದಳು ರಾಣಿ’ಅದು ಮದ್ಯಮುಕ್ತ ಇಲ್ಲಿ ಅಲ್ಲಪಾ, ಅದು ಛತ್ತಿಸಗಢದಾಗ ಜನೇವರಿ 22 ಕ್ಕ ಮಾಡಕತ್ತಾರ’ ಅಂದ ಶೌರಿ’ಯಾಕ?”ಏ ಅದು ರಾಮನ ತಾಯಿ ಊರು ಐತಿ, ಅವತ್ತ ಅಯೋಧ್ಯದಾಗ ರಾಮಲಲ್ಲಾನ ಕುಂದ್ರಸ್ತಾರ, ಅದಕ್ಕs ಅಂದ ಮದ್ಯ ಬಂದ್’ ಅಂದ ಶೌರಿ’ ಮತ್ತs ಗೋದ್ರಾ ಮರಕಳಿಸ್ತೈತಿ ಅಂತ ಹರಿ ಹೇಳೇತಿ’ ಅಂದಳು ರಾಣಿ’ಆ ಪ್ರಸಾದ ಮತ್ತ ಅಂದೇತಿ, ನಿತ್ಯಾನಂದಗ ಭಾಳ ಭಕ್ತರ ಇದ್ದಂಗ ಸಿದ್ರಾಮಯ್ಯಗೂ ಭಕ್ತರ ಭಾಳ ಅದಾರಂತ’ ಅಂದ ಜಬರಿ’ ಮತ್ತ ನಮ್ಮ ಇಜಾಪುರದ ಹುಲಿ ಗಪ್ಪ ಆಗೇತಲಾ?’ ಕೇಳಿದ ಶೌರಿ’ಅಸಂತೋಸ ಜರಾ ತಡಿ ಗಡಬಡ ಮಾಡಬ್ಯಾಡ ಅಂದಿರಬೇಕು’ ನಕ್ಕಳು ರಾಣಿ’ ಮತ್ತs ಜ್ಯೂನಿಯರ್ ಕುಸ್ತಿಪಟುಗಳು ಸಾಕ್ಷಿ ಪೂನಿಯಾ ಪೋಗಾಟ ವಿರುದ್ಧ ತಿರಿಗಿ ಬಿದ್ದಾರಂತಲಾ?’ ಕೇಳಿದ…
ಆಕ್ಸಫರ್ಡ್ ಐಐಟಿ ಒಲಿಂಪಿಯಾಡ್ ಶಾಲೆಯ ಕ್ರೀಡಾಕೂಟದಲ್ಲಿ ಬಸವರಾಜ ಕೌಲಗಿ ಅಭಿಮತ ವಿಜಯಪುರ: ಆರೋಗ್ಯಪೂರ್ಣವಾದ ದೇಹದಲ್ಲಿ ಮಾತ್ರ ಆರೋಗ್ಯಪೂರ್ಣವಾದ ಮನಸ್ಸು ಅರಳಲು ಸಾಧ್ಯ. ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಾಸಕ್ಕಾಗಿ ನಾವು ಅವರ ಆಸಕ್ತಿಗಳನ್ನು ಪೋಷಿಸಬೇಕಾಗಿದೆ, ಮಕ್ಕಳ ಕ್ರೀಡಾಸಕ್ತಿಗೆ ನೀರೆರೆದು ಪೋಷಿಸಿದಾಗ ಮಾತ್ರ ಆರೋಗ್ಯ ಪೂರ್ಣ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.ನಗರದ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಆಕ್ಸ್ಫರ್ಡ್ ಐ ಐ ಟಿ ಒಲಿಂಪಿಯಾಡ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕ್ರೀಡಾಕೂಟವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ ವಿಜಯಕುಮಾರ ಆಜುರು ಮಾತನಾಡಿ “ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ. ಒತ್ತಡದ ಜೀವನಕ್ರಮ ಅನುಸರಿಸುತ್ತಿರುವ ನಾವೆಲ್ಲರೂ ರೋಗ ಮುಕ್ತ ಜೀವನ ನಡೆಸಲು ಮಕ್ಕಳನ್ನು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಬೇಕು, ಆ ಕೆಲಸವನ್ನು ಆಕ್ಸ್ಫರ್ಡ್ ಸಂಸ್ಥೆ ಅತ್ಯಂತ ಶ್ರದ್ದೆಯಿಂದ ಮಾಡುತ್ತಿದೆ, ಪಾಲಕರು ಕೂಡ…
Udayarashmi kannada daily newspaper
ಆದಿತ್ಯ ಯಾನ ಕೈಗೊಂಡಿದ್ದ ಇಸ್ರೋ ಮಿಷನ್ ಯಶಸ್ವಿ | ಪ್ರಧಾನಿ ಮೋದಿ ಮೆಚ್ಚುಗೆ | ಸೂರ್ಯನ ಅಧ್ಯಯನದ ಮೊದಲ ನೌಕೆ ನವದೆಹಲಿ: ಆದಿತ್ಯ ಯಾನ ಕೈಗೊಂಡಿದ್ದ ಇಸ್ರೋ ಮಿಷನ್ ಯಶಸ್ವಿಯಾಗಿದೆ. ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಯಾಗಿದ್ದ ಆದಿತ್ಯ ನೌಕೆ ನಿಗದಿತ ಎಲ್-1 ಪಾಯಿಂಟ್ ತಲುಪುವಲ್ಲಿ ಯಶಸ್ವಿಯಾಗಿದೆ.ಚಂದ್ರಯಾನ-3 ರ ಬಳಿಕ ಇಸ್ರೋ ಮಹತ್ವದ ಸಾಧನೆ ಮಾಡಿದ್ದು, ಆದಿತ್ಯ ನೌಕೆ ಸೂರ್ಯನ ಅಧ್ಯಯನ ಆರಂಭಿಸಲಿರುವ ಮೊದಲ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಂದ್ರಯಾನ-3 ಯಶಸ್ವಿಯಾದ 10 ದಿನಗಳಲ್ಲಿ ಆದಿತ್ಯ ಎಲ್-1 ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಸುದೀರ್ಘ 126 ದಿನಗಳ ಬಳಿಕ ಆದತ್ಯ ನೌಕೆ ತನ್ನ ಗಮ್ಯ ತಲುಪಿದೆ.ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಭಾರತದ ಮೊದಲ ಆದಿತ್ಯ ಅಧ್ಯಯನ ನೌಕೆ ಎಲ್-1 ಪಾಯಿಂಟ್ ತಲುಪಿದೆ. ಇದು ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣಾ ಮನೋಭಾವಕ್ಕೆ ಸಾಕ್ಷಿಯಾಗಿದೆ.ಇದು ಅತ್ಯಂತ ಸಂಕೀರ್ಣ ಮತ್ತು ಸಂಕೀರ್ಣವಾದ ಬಾಹ್ಯಾಕಾಶ…
ವಿಜಯಪುರ: ಜಿಲ್ಲಾ ಆಸ್ಪತ್ರೆ ವಿಜಯಪುರದಲ್ಲಿ ೪೦ ವರ್ಷದ ಮದುಮೇಹ ರೋಗದಿಂದ ಬಲಳುತ್ತಿರುವ ರೋಗಿಗೆ ಇನಸಿಜನಲ್ ಹರ್ನಿಯಾ ಹೊಟ್ಟೆಯ ದೊಡ್ಡ ಪ್ರಮಾಣದ ಹರಣಿಯಾಅನ್ನು ಉದರ ದರ್ಶಕ ವಿಧಾನದಿಂದ ಅತ್ಯಂತ ಚಿಕ್ಕ ರಂದ್ರಗಳ ಮೂಲಕ ಐಪಾಮ್‌ಪ್ಲಸ್ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ. ಆನಂದ ಝಳಕಿ, ಡಾ.ರಿಹಾನ ಬಾಂಗಿ ಹಾಗೂ ಅವರ ತಂಡ ಮತ್ತು ಅರವಳಿಕೆಯನ್ನು ಡಾ. ಗುರುಲಿಂಗಪ್ಪ ಉಪಾಸೆ ಅವರು ಈ ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.ರೋಗಿಗೆ ಮದುಮೇಹ ಇರುವುದರಿಂದ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾದ ಹಿನ್ನಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿರುವುದರಿಂದ ಪ್ರಯೋಜನಕಾರಿಯಾಗಿದೆ. ಈ ಶಸ್ತ್ರಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿದರೆ ಅಂದಾಜು ರೂ.೩ಲಕ್ಷ ಖರ್ಚು ವೆಚ್ಚವಾಗುತ್ತಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಈ ಸೇವೆ ಉಚಿತವಾಗಿ ದೊರೆಯುವುದರೊಂದಿಗೆ ರೋಗಿಯು ಆರೋಗ್ಯವಾಗಿ ಚೆತರಿಸಿಕೊಳ್ಳುತ್ತಿದ್ದಾರೆ. ಈ ಯಶಸ್ವಿ ಕಾರ್ಯ ಕೈಗೊಂಡಿರುವ ತಂಡಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುದ್ದೇಬಿಹಾಳ: ಪಟ್ಟಣದ ಮುಖ್ಯ ಬಜಾರನಲ್ಲಿರುವ ಕೆಬಿಎಂಪಿಎಸ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯ ಒಟ್ಟು ೭೪ ವಿಕಲಚೇತನ ಮಕ್ಕಳಿಗೆ ಸರ್ಕಾರದ ಸಾಧನಗಳ ಸಲಕರಣೆಗಳನ್ನು ವಿತರಿಸಲಾಯಿತು.ಈ ವೇಳೆ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಬಿಇಓ ಬಸವರಾಜ ಸಾವಳಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ತಾಲೂಕು ಪಂಚಾಯತನ ಯೋಜನಾಧಿಕಾರಿ ಖೂಬಾಸಿಂಗ್ ಜಾಧವ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ಎಂ.ಎಸ್.ಕವಡಿಮಟ್ಟಿ, ಬಿಆಯ್‌ಇಆರ್ ಟಿ.ಎಸ್.ರಾಮಥಾಳ, ವಿಕಲಚೇತನರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಘಾಟಿ, ತಾಲೂಕು ಅಧ್ಯಕ್ಷ ನಾಗೇಶ ಸೇರಿದಂತೆ ಮತ್ತೀತರರು ಇದ್ದರು.
