ಬಸವನಬಾಗೇವಾಡಿ: ಎಸ್‌ಟಿಪಿ/ಟಿಎಸ್‌ಪಿ ಯೋಜನೆಯಲ್ಲಿ ಬರುವ ಅನುದಾನವನ್ನು ಬಳಸಿಕೊಂಡು ಮಾದಿಗ ಸಮಾಜದ ಯುವಕರು ಉದ್ಯೋಗಸ್ಥರಾಗಿ ಸುಂದರ ಜೀವನವನ್ನು ನಡೆಸಬೇಕೆಂದು ನಿವೃತ್ತ ಪ್ರಿನ್ಸಿಪಲ್ ಭಾರತ ಸರ್ಕಾರದ ನಾಗಪುರ ವಲಯದ ಕೇಂದ್ರೀಯ ಹಣಕಾಸು ಆದಾಯ ತೆರಿಗೆ ಕಮಿಷನರ್ ಎಚ್.ಆರ್.ಭೀಮಾಶಂಕರ ಆಯ್‌ಆರ್‌ಎಸ್ ಹೇಳಿದರು.
ಪಟ್ಟಣದ ಗಣೇಶ ನಗರದ ಮಸಬಿನಾಳ ರಸ್ತೆಯಲ್ಲಿರುವ ಯಲ್ಲಾಂಗಮಠದಲ್ಲಿ ಜಿಲ್ಲಾ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬಸವನಬಾಗೆವಾಡಿ ತಾಲೂಕಾ ಘಟಕದ ನೇತೃತ್ವದಲ್ಲಿ ೨೦೨೨-೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿ.ಯು.ಸಿ, ಹಾಗೂ ೨೦೨೩-೨೪ನೇ ಸಾಲಿನಲ್ಲಿ ವೈದ್ಯಕೀಯ ಹಾಗೂ ಇಂಜಿನೀಯರಿಂಗ್ ಕೋರ್ಸ್ಗೆ ಆಯ್ಕೆಯಾದದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಪುರಸಭೆ, ಪಪಂ,ಗ್ರಾಪಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಹಾಗೂ ಹೊಸದಾಗಿ ಸರ್ಕಾರಿ ನೌಕರಿಗೆ ಸೇರಿದ ಹಾಗೂ ನಿವೃತ್ತಿ ಹೊಂದಿದ ಸಮಾಜದ ನೌಕರರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾದಿಗ ನೌಕರರ ಕ್ಷೇಮಾಭಿವೃದ್ಧಿಯಿಂದ ಸಮಾಜದಲ್ಲಿರುವ ಬಡ-ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ, ನಾವು ಸ್ವಾಭಿಮಾನದಿಂದ ಬದುಕುವ ಮಂದಿ, ಸಮಾಜಕ್ಕೆ ಬಡತನವೇ ಮೂಲ ಕಾರಣವಾಗಿದೆ, ಇದನ್ನು ಮೆಟ್ಟಿನಿಂತು ಸಮಾಜದ ಶ್ರೇಯೋಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು, ಸಮಾಜಕ್ಕೆ ಸಿಗುವ ಪಾಲು ಮತ್ತೊಬ್ಬರು ಪಾಲಾಗುತ್ತಿದೆ, ನಾವು ಒಗ್ಗಟಾಗಿ ಸಂಘಟಿತರಾದಾಗ ಮಾತ್ರ ಸಮಾಜಕ್ಕೆ ಬರುವ ಪಾಲು ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕೂಡಗಿ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಪೂಜಾರಿ ಮಾತನಾಡಿದರು.
ತಾಲೂಕಾ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಕೆ.ಎಂ.ಬೇಲಿ, ಅನ್ನಪೂರ್ಣ ಕಲ್ಯಾಣಿ, ಶರಣು ದೊಡಮನಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಶ್ರೀಶೈಲ ದೊಡಮನಿ, ವಸಂತ ಕಲ್ಯಾಣಿ, ರಾಜು ಬಸರಕೋಡ, ಬಸವರಾಜ ಕಲ್ಯಾಣಿ, ಶರಣಪ್ಪ ಮಾದರ, ಎಸ್.ಎಲ್.ಓಂಕಾರ, ಮುತ್ತುರಾಜ ಹೆಬ್ಬಾಳ, ಎಂ.ವಾಯ್.ಕಳ್ಳಿಮನಿ, ಅರ್ಜುನ ಗಂಗಾಧರ, ವಾಯ್.ಬಿ.ಧರ್ಮಗಿರಿ, ಬಸಗೊಂಡಪ್ಪ ಹಾದಿಮನಿ, ಅಶೋಕ ಕರೆಕಲ್ಲ, ರೇಣುಕಾ ಭಾವಿಕಟ್ಟಿ, ಜಿ.ಬಿ.ಕಲ್ಯಾಣಿ ಸೇರಿದಂತೆ ಇತರರು ಇದ್ದರು.
ಸಿ.ಟಿ.ಮಾದರ ಪ್ರಾಸ್ತಾವಿಕ ಮಾತನಾಡಿದರು. ಪವಿತ್ರಾ ಮುಕಾರ್ತಿಹಾಳ ನಿರೂಪಿಸಿದರು, ಶರಣು ದೊಡಮನಿ ಸ್ವಾಗತಿಸಿದರು. ಪಿ.ಬಿ.ದೊಡಮನಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

