ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕು ವಿಜಯಪುರ ಜಿಲ್ಲೆಯಲ್ಲಿಯೇ ಯಥಾಸ್ಥಿತಿಯಲ್ಲಿ ಇರಲಿ ಇಲ್ಲವೇ ನೂತನ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ, ಯಾವುದೇ ಕಾರಣಕ್ಕೂ ನೂತನ ಸಂಭಾವ್ಯ ಜಿಲ್ಲೆಗೆ ಬೇಡ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಂಗನಗೌಡ ಹರನಾಳ ತಿಳಿಸಿದ್ದಾರೆ.
ದೇವರಹಿಪ್ಪರಗಿ ಪಟ್ಟಣವು ಭೌಗೋಳಿಕವಾಗಿ ಮದ್ಯವರ್ತಿ ಸ್ಥಳವಾಗಿದ್ದು, ಎರಡು ಹೆದ್ದಾರಿಗಳನ್ನು ಒಳಗೊಂಡಿದೆ. ಕಲಬುರಗಿ-ವಿಜಯಪುರ ಮಧ್ಯೆದ ರಾಷ್ಟ್ರೀಯ ಹೆದ್ದಾರಿ-೫೦ ಹಾಗೂ ಲಿಂಗಸಗೂರು-ಶಿರಾಡೋಣ ರಾಜ್ಯಹೆದ್ದಾರಿ-೪೧ ರ ಮೂಲಕ ಸಿಂದಗಿ ಇಂಡಿ, ವಿಜಯಪುರ ಪಟ್ಟಣಗಳೊಂದಿಗೆ ನೇರ ಸಂಪರ್ಕ ಹೊಂದಿದೆ. ಜೊತೆಗೆ ಬಸವನ ಬಾಗೇವಾಡಿ, ತಾಳಿಕೋಟೆ ತಾಲ್ಲೂಕುಗಳೊಂದಿಗೆ ಗಡಿ ಹಂಚಿಕೊಂಡಿದ್ದು, ಅಲ್ಲದೇ ನೂತನ ವಿಜಯಪುರ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಸಾರ್ವಜನಿಕರ ಪ್ರಯಾಣಕ್ಕೆ ಉತ್ತಮ ರಸ್ತೆ, ಸಾಕಷ್ಟು ಸೌಲಭ್ಯಗಳನ್ನು ಹೊಂದಿದೆ.
ರಾಜ್ಯ ಸರಕಾರ ನೂತನ ಜಿಲ್ಲಾ ಕೇಂದ್ರ ಸೃಜಿಸಲು ಮುಂದಾದರೆ ದಯವಿಟ್ಟು ದೇವರಹಿಪ್ಪರಗಿಯನ್ನು ಪರಿಗಣಿಸಬೇಕು. ಅದನ್ನು ಜಿಲ್ಲಾ ಕೇಂದ್ರ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಡಳಿತ ಹಾಗೂ ಇಂಡಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

