ಆಕ್ಸಫರ್ಡ್ ಐಐಟಿ ಒಲಿಂಪಿಯಾಡ್ ಶಾಲೆಯ ಕ್ರೀಡಾಕೂಟದಲ್ಲಿ ಬಸವರಾಜ ಕೌಲಗಿ ಅಭಿಮತ
ವಿಜಯಪುರ: ಆರೋಗ್ಯಪೂರ್ಣವಾದ ದೇಹದಲ್ಲಿ ಮಾತ್ರ ಆರೋಗ್ಯಪೂರ್ಣವಾದ ಮನಸ್ಸು ಅರಳಲು ಸಾಧ್ಯ. ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಾಸಕ್ಕಾಗಿ ನಾವು ಅವರ ಆಸಕ್ತಿಗಳನ್ನು ಪೋಷಿಸಬೇಕಾಗಿದೆ, ಮಕ್ಕಳ ಕ್ರೀಡಾಸಕ್ತಿಗೆ ನೀರೆರೆದು ಪೋಷಿಸಿದಾಗ ಮಾತ್ರ ಆರೋಗ್ಯ ಪೂರ್ಣ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.
ನಗರದ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಆಕ್ಸ್ಫರ್ಡ್ ಐ ಐ ಟಿ ಒಲಿಂಪಿಯಾಡ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ ವಿಜಯಕುಮಾರ ಆಜುರು ಮಾತನಾಡಿ “ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ. ಒತ್ತಡದ ಜೀವನಕ್ರಮ ಅನುಸರಿಸುತ್ತಿರುವ ನಾವೆಲ್ಲರೂ ರೋಗ ಮುಕ್ತ ಜೀವನ ನಡೆಸಲು ಮಕ್ಕಳನ್ನು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಬೇಕು, ಆ ಕೆಲಸವನ್ನು ಆಕ್ಸ್ಫರ್ಡ್ ಸಂಸ್ಥೆ ಅತ್ಯಂತ ಶ್ರದ್ದೆಯಿಂದ ಮಾಡುತ್ತಿದೆ, ಪಾಲಕರು ಕೂಡ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು” ಎಂದರು. ಇನ್ನೋರ್ವ ಅತಿಥಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ, “ಆಕ್ಸ್ಫರ್ಡ್ ಶಾಲೆ ಪ್ರತಿ ವರ್ಷ ನಗರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ನೂರಕ್ಕೆ ನೂರು ಫಲಿತಾಂಶ ತರುವುದರ ಮೂಲಕ ಅತ್ಯಂತ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಒದಗಿಸುತ್ತಿರುವ ಆಕ್ಸ್ಫರ್ಡ್ ಸಂಸ್ಥೆಯ ಸಾಧನೆ ದೊಡ್ಡದು. ಮಕ್ಕಳ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ವಿಶೇಷ ಆದ್ಯತೆ ನೀಡುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದರು
“ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸಂಗಮೇಶ್ ಬಬಲೇಶ್ವರ ಮಾತನಾಡಿದರು.
ಎಕ್ಸಲೆಂಟ್ ಸಂಸ್ಥೆಯ ನಿರ್ದೇಶಕರುಗಳಾದ ರಾಜಶೇಖರ ಕೌಲಗಿ, ಮಂಜುನಾಥ ಕೌಲಗಿ, ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರದೀಪ ಲಿಂಗದಳ್ಳಿ ಅತಿಥಿಗಳಾಗಿ ಆಗಮಿಸಿದ್ದರು. ಹೈಸ್ಕೂಲ್ ವಿಭಾಗದ ಪ್ರಾಚಾರ್ಯ ಜೆ.ಎಂ ಇನಾಮದಾರ. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಅನಸೂಯ ಅಮರನ್ನವರ, ಪ್ರಾಥಮಿಕ ವಿಭಾಗದ ಆಡಳಿತಾಧಿಕಾರಿ ಜಿ ಎಮ್ ಕಟ್ಟಿ ಹಾಗೂ ಪಾಲಕರು, ಗುರುಗಳು ಗುರು ಮಾತೆಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


