ವಿಜಯಪುರ: ಜಿಲ್ಲಾ ಆಸ್ಪತ್ರೆ ವಿಜಯಪುರದಲ್ಲಿ ೪೦ ವರ್ಷದ ಮದುಮೇಹ ರೋಗದಿಂದ ಬಲಳುತ್ತಿರುವ ರೋಗಿಗೆ ಇನಸಿಜನಲ್ ಹರ್ನಿಯಾ ಹೊಟ್ಟೆಯ ದೊಡ್ಡ ಪ್ರಮಾಣದ ಹರಣಿಯಾಅನ್ನು ಉದರ ದರ್ಶಕ ವಿಧಾನದಿಂದ ಅತ್ಯಂತ ಚಿಕ್ಕ ರಂದ್ರಗಳ ಮೂಲಕ ಐಪಾಮ್‌ಪ್ಲಸ್ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ. ಆನಂದ ಝಳಕಿ, ಡಾ.ರಿಹಾನ ಬಾಂಗಿ ಹಾಗೂ ಅವರ ತಂಡ ಮತ್ತು ಅರವಳಿಕೆಯನ್ನು ಡಾ. ಗುರುಲಿಂಗಪ್ಪ ಉಪಾಸೆ ಅವರು ಈ ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ರೋಗಿಗೆ ಮದುಮೇಹ ಇರುವುದರಿಂದ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾದ ಹಿನ್ನಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿರುವುದರಿಂದ ಪ್ರಯೋಜನಕಾರಿಯಾಗಿದೆ. ಈ ಶಸ್ತ್ರಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿದರೆ ಅಂದಾಜು ರೂ.೩ಲಕ್ಷ ಖರ್ಚು ವೆಚ್ಚವಾಗುತ್ತಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಈ ಸೇವೆ ಉಚಿತವಾಗಿ ದೊರೆಯುವುದರೊಂದಿಗೆ ರೋಗಿಯು ಆರೋಗ್ಯವಾಗಿ ಚೆತರಿಸಿಕೊಳ್ಳುತ್ತಿದ್ದಾರೆ. ಈ ಯಶಸ್ವಿ ಕಾರ್ಯ ಕೈಗೊಂಡಿರುವ ತಂಡಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
