Author: editor.udayarashmi@gmail.com

ಕಲಕೇರಿ: ಸಿಡಿಲ ಮರಿ, ವೀರ ಸನ್ಯಾಸಿ, ಸಂತ ಶ್ರೇಷ್ಟರಾದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಇಂದಿನ ಯುವಕರು ಮೈಗೂಡಿಸಿಕೊಂಡು ಸಮರ್ಥ ಜೀವನ ಕಟ್ಟಿಕೊಳ್ಳುವುದರ ಜೊತೆಗೆ ಸುಭದ್ರ ರಾಷ್ಟ್ರ ನಿರ್ಮಾಣ ತಮ್ಮ ಗುರಿಯಾಗಿಸಿಕೊಳ್ಳಬೇಕೆಂದು ಪ್ರಾಚಾರ್ಯ ಎಸ್ ಎಮ್ ಸಜ್ಜನ ಹೇಳಿದರು.ಗ್ರಾಮದ ಆದರ್ಶ ಪ್ರಥಮ ದರ್ಜೆ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿ ಕಲ್ಯಾಣ ಘಟಕದ ಅಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದಿನ ಯುವಕರು ಶಿಕ್ಷಣದ ಜೊತೆಗೆ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಉದಾತ್ತವಾದ ವಿಚಾರಧಾರೆಗಳನ್ನು ಅವಲೋಕಿಸಿ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನದ ಸಮಾಜ ನಿರ್ಮಿಸಲು ಮುಂದಾಗಬೇಕಿದೆ ಎಂದು ಹೇಳಿದರು.ಈ ವೇಳೆ ಉಪನ್ಯಾಸಕರಾದ ಪ್ರವೀಣ ಪಾಕಿ, ಯುವಪ್ರತಿನಿಧಿ ಕುಮಾರಿ ವಿದ್ಯಾಶ್ರೀ ಬಿರಾದಾರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರೊ.ಆಬಿದಅಲಿ ಸಾಲೋಡಗಿ, ವಿದ್ಯಾರ್ಥಿ ಕಲ್ಯಾಣ ಘಟಕದ ಸಂಯೋಜಕರಾದ ಪ್ರೊ.ಶ್ರೀದೇವಿ ಹೂಲಿ, ಪ್ರೊ.ರುಕ್ಷಾನಾಬೇಗಂ ಬೇಪಾರಿ, ಪ್ರೊ.ಮಲ್ಲಿಕಾರ್ಜುನ ಸಜ್ಜನ, ಪ್ರೊ.ಸಂಗೀತಾ ಟೆಂಗಳಿ, ಪ್ರೊ.ಝರೀನಾ ಕುಕನೂರ, ಪ್ರೊ.ಮಹಾಂತೇಶ ಲಂಗೋಟಿ, ಪ್ರೊ.ಹುಸೇನಬಾಶಾ ಹಿಪ್ಪರಗಿ, ಪ್ರೊ.ಸವಿತಾ…

Read More

ಆಲಮೇಲ: ಪಟ್ಟಣದಲ್ಲಿ ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಎಳ್ಳ ಅಮಾವಾಸ್ಯೆ ಚರಗ ಚಲ್ಲುವ ಹಬ್ಬವನ್ನು ಸಡಗರದಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.ರೈತರು ತಾವು ನಂಬಿರುವ ಮಣ್ಣನ್ನು ದೈವಭಾವದಿಂದ ಪೂಜಿಸುವ ಆಚರಣೆ ಇದಾಗಿದೆ. ಶ್ರಮಕ್ಕೆ ತಕ್ಕಂತೆ ಉತ್ತಮ ಫಸಲನ್ನು ಕೊಡುವ ಭೂಮಿ ತಾಯಿಯನ್ನು ಪೂಜಿಸಿ, ಹೊಲದ ತುಂಬೆಲ್ಲಾ ಚೀಲಗಳು ತುಂಬಿ ಹೊರಗೆ ಚೆಲ್ಲುವಷ್ಟು ಬೆಳೆ ನೀಡಲಿ ಎಂದು ಗ್ರಾಮೀಣ ಭಾಗಗಳಲ್ಲಿ ಆಚರಿಸುವ ಹಬ್ಬವೇ ಚರಗ ಚೆಲ್ಲುವ ಹಬ್ಬವಾಗಿದೆ.ಮಾರ್ಗಶಿರ ಮಾಸದಲ್ಲಿ ಬರುವ ಎಳ್ಳು ಅಮಾವಾಸ್ಯೆ ಅಪ್ಪಟ ರೈತರ ಹಬ್ಬ. ಹೊಲಗಳಲ್ಲಿ ಬೆಳೆದು ನಿಂತಿರುವ ಹಿಂಗಾರು ಪೈರುಗಳ ನಡುವೆ ಬನ್ನಿಕಂಟಿಗೆ ಸೀರೆ ಉಡಿಸಿ, ಐದು ಕಲ್ಲುಗಳನ್ನು ಇಟ್ಟು ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ಚರಗ ಚಲ್ಲುವ ಹಬ್ಬದ ವಿಶೇಷತೆ.ಅಮವಾಸ್ಯೆಯ ಮೂರ್ನಾಲ್ಕು ದಿನ ಮುಂಚಿತವಾಗಿ ರೈತರ ಮನೆಗಳಲ್ಲಿ ಹಬ್ಬದ ತಯಾರಿ ನಡೆಯುತ್ತದೆ. ಹಬ್ಬದ ವಿಶೇಷವಾಗಿ ಕಡಬ, ಸಜ್ಜೆ ರೊಟ್ಟಿ,ಜೋಳದ ರೊಟ್ಟಿ, ನಾನಾ ಬಗೆಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಮತ್ತು ಶೇಂಗಾದ ಹೋಳಿಗೆ…

Read More

ಆಲಮೇಲ: ಪಟ್ಟಣದ ಸ್ವಾಮಿ ವಿವೇಕಾನಂದ ಸಂಘ(ರಿ) ವತಿಯಿಂದ ಸ್ವಾಮಿವೇಕಾನಂದರ ೧೬೧ನೇ ಜಯಂತಿಯನ್ನು ಆಚರಿಸಲಾಯಿತು.ಈ ವೇಳೆ ಮಾತನಾಡಿದ ಸಂಘದ ಸದಸ್ಯ ರತನಟಾಟ ಒನಕುದರೆ ಸ್ವಾಮಿ ವಿವೇಕಾನಂದರು ಭಾರತ ನಿರ್ಮಿಸಿದ ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರು ಅವರ ಜೀವನದ ಕಥೆಯು ಸ್ಪೂರ್ತಿಯಾಗಿದೆ ಎಂದು ಹೇಳಿದರುಈಗಿನ ಯುವಪಿಳಿಗೆಯವರಾದ ನಾವುಗಳು ದುಷ್ಟಚಟಗಳ ದಾಸರಾಗದೆ ಧರ್ಮ ರಕ್ಷಣೆಯ ಕಡೆಗೆ ಮಹಾನ ನಾಯಕರು ಹಾಕಿಕೊಟ್ಟ ಉತ್ತಮವಾದ ಜೀವನದ ಕಡೆಗೆ ಸಾಗಬೇಕಿದೆಇದೆ ತಿಂಗಳ ಕೋನೆಯಲ್ಲಿ ನಮ್ಮ ಸಂಘದ ವತಿಯಿಂದ ಉಚಿತ ನೇತ್ರ ತಪಾಸಣ ಶಿಬಿರ ಮತ್ತು ರಕ್ತದಾನ ಶಿಬಿರ ಹಾಗೂ ಸ್ವಾಮಿ ವಿವೇಕಾನಂದರ ಉಪನ್ಯಾಸ ಕಾರ್ಯಕ್ರಮ ಮಾಡಲಿದ್ದವೆ ಎಂದರುವಿಶ್ವ ಅಮರಗೊಂಡ, ಮದನ ರಜಪೂತ, ವಿಶ್ವ ಕೊರಳ್ಳಿ, ಶರಣು ಗುರಕಾರ, ಕಮಲಾಕರ ಪತ್ತಾರ, ಅಶೋಕ ಪರಿಟ, ಅಜಯ ಬಂಟನೂರ ಮುಂತಾದವರು ಇದ್ದರು.

Read More

ಪಾಲಿಕೆಯ ಆಸ್ತಿ ಲೀಜ್ ಅಥವಾ ಮಾರಾಟಕ್ಕೆ ಶಾಸಕರು & ಪಾಲಿಕೆ ಸರ್ವ ಸದಸ್ಯರ ಒಪ್ಪಿಗೆ ಅಗತ್ಯ | ಶಾಸಕ ಯತ್ನಾಳ ಅಭಿಮತ ವಿಜಯಪುರ: ಮಹಾನಗರ ಪಾಲಿಕೆ ಒಡೆತನದಲ್ಲಿರುವ ಆಸ್ತಿಗಳನ್ನು ಸಾರ್ವಜನಿಕರ ಉದ್ದೇಶಕ್ಕಾಗಿ ಹಾಗೂ ಸರ್ಕಾರಿ ವಿವಿಧ ಯೋಜನೆಗಳಿಗಾಗಿ ಕಾಯ್ದಿರಿಸಬೇಕು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ಮಹಾನಗರ ಪಾಲಿಕೆ ಒಡೆತನದ ಕೊಟ್ಯಂತರ ಬೆಲೆ ಬಾಳುವ ನಗರ ಮಧ್ಯಭಾಗದಲ್ಲಿರುವ ಅಥವಾ ಹೊರ ಭಾಗದಲ್ಲಿರುವ ಪಾಲಿಕೆ ಆಸ್ತಿಗಳನ್ನು ಸಾರ್ವಜನಿಕರ ಉದ್ದೇಶಕ್ಕಾಗಿ ಹಾಗೂ ಸರ್ಕಾರದ ವಿವಿಧ ಯೋಜನೆಗಳಾದ ವಸತಿ, ಸಮುದಾಯ ಭವನಗಳು, ಒಳಾಂಗಣ ಕ್ರೀಡಾಂಗಣ, ಮಳಿಗೆಗಳು, ನಿರ್ಗತಿಕರ ಭವನ, ಶಾಲಾ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು ಮತ್ತಿತರೆ ಉದ್ದೇಶಕ್ಕಾಗಿ ಕಾಯ್ದಿರಿಸಬೇಕಾದುದ್ದನ್ನು, ಕೆಲ ಅಧಿಕಾರಿಗಳು ಲೀಜ್ ನೆಪದಲ್ಲಿ ಖಾಸಗಿ ವ್ಯಕ್ತಿಗಳಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ನೀಡುವ ಹುನ್ನಾರದ ಬಗ್ಗೆ ತಿಳಿದು ಬಂದಿದೆ.ಒಂದು ವೇಳೆ ಖಾಸಗಿ ವ್ಯಕ್ತಿಗಳಿಗೆ ಅಥವಾ ನಕಲಿ ಸಂಸ್ಥೆಗಳಿಗೆ ಲೀಜ್ ನೆಪದಲ್ಲಿ ಮಾರಾಟ…

Read More

ಮೋರಟಗಿ: ಸಾರ್ವಜನಿಕರು ಆನೇಕಾಲು ಮಾತ್ರೆ ತಿರಸ್ಕರಿಸುವುದರಿಂದ ಸಿಂದಗಿ ಹಾಗೂ ಆಲಮೇಲ ತಾಲೂಕಿನಲ್ಲೇ ಮೋರಟಗಿ ಸಮುದಾಯ ಆರೋಗ್ಯ ಕೇಂದ್ರದ ಹಳ್ಳಿಗಳಲ್ಲಿ ಆನೆಕಾಲು ರೋಗದ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿವೆ. ರೋಗ ಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಮುದಾಯ ಅರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ, ಶಶಿಕಾಂತ ಬಾಗೇವಾಡಿ ಹೇಳಿದರು.ಸಮುದಾಯ ಅರೋಗ್ಯ ಕೇಂದ್ರದಲ್ಲಿ ಆನೆಕಾಲು ರೋಗ ಮುಕ್ತಕ್ಕಾಗಿ ಕರೆದ ಸಾಮೂಹಿಕ ಔಷದಿ ಸೇವನೆ ಜಾಗೃತಿ ಕಾರ್ಯಕ್ರಮದ ಸಭೆಯಲ್ಲಿಸಭೆಯಲ್ಲಿ ಅವರು ಮಾತನಾಡಿದರು.ಆನೆಕಾಲು ರೋಗ ಇದೊಂದು ಸೋಂಕಿತ ಕ್ಯೂಲೆಕ್ಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಸಾಂಕ್ರಾಮಿಕವಾಗಿ ಹರಡುವ ರೋಗವಾಗಿದೆ, ಆ ಸೊಳ್ಳೆಯಿಂದ ಕಚ್ಚಿದರೆ ಒಬ್ಬರಿಂದ ಒಬ್ಬರಿಗೆ ರೋಗ ಅಂಟಿಕೊಳ್ಳುವ ಎಲ್ಲ ಸಾಧ್ಯತೆಗಳು ಇರುತ್ತದೆ ಸಾರ್ವಜನಿಕರು ಮುಂಜಾಗ್ರತವಾಗಿ ಮಾತ್ರೆ ತೆಗೆದುಕೊಂಡರೆ ಮಾತ್ರ ರೋಗ ಅಂಟಿಕೊಳ್ಳುವುದಿಲ್ಲ, ಮಾತ್ರೆ ತಿರಸ್ಕರಿಸಿದರೆ ಸೊಂಕಿತನಿಗೆ ಕಚ್ಚಿದ ಸೊಳ್ಳೆ ಸಾಮಾನ್ಯ ಇನ್ನೊಬ್ಬರಿಗೆ ಕಚ್ಚುವುದರಿಂದ ಆನೆಕಾಲು ರೋಗ ಉತ್ಪತ್ತಿ ಆಗುತ್ತದೆ. ಇದನ್ನು ತಡೆಗಟ್ಟುಲು ಸರಕಾರ ನಿಮ್ಮ ಮನೆ ಬಾಗಿಲಿಗೆ ಅರೋಗ್ಯ ಸಿಬ್ಬಂದಿ ಆಶಾ ಕಾರ್ಯಕರ್ತರು ಮಾತ್ರೆ ಕೊಡಲು…

Read More

ವಿಜಯಪುರ: ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಪ್ರಸ್ತಾವನೆಯಂತೆ, ವಿಜಯಪುರ ಮಹಾನಗರ ಪಾಲಿಕೆಯ ನಗರ ಆಶ್ರಯ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀ ಭಾಗಪ್ಪ ಕನ್ನೋಳ್ಳಿ (ಸಾಮಾನ್ಯ ವರ್ಗ ಮಹಿಳೆ), ಬಸವರಾಜ ಮಾರುತಿ ಕಾಂಬಳೆ (ಪರಿಶಿಷ್ಟ ಜಾತಿ), ಸಂದೀಪ ನರಸಿಂಗ್ ಕಾಳೆ (ಹಿಂದುಳಿದ ವರ್ಗ), ಪಾರೀಸ್ ಶಿರಹಟ್ಟಿ (ಅಲ್ಪಸಂಖ್ಯಾತರ ವರ್ಗ) ಅವರನ್ನು ನೇಮಕ ಮಾಡಲಾಗಿದೆ.

Read More

ಇಂಡಿ: ಸ್ವಾಮಿ ವಿವೇಕಾನಂದರ ಜೀವನ ಮತ್ತು ವ್ಯಕ್ತಿತ್ವ ಕೋಟಿ ಕೋಟಿ ಯುವಕರಿಗೆ ಪ್ರೇರಣೆಯ ಚಿಲುಮೆಯಾಗಿದೆ. ಅವರು ಭಾರತ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ ಧೀಮಂತ ನಾಯಕರು. ೧೮೯೩ ರಲ್ಲಿ ಚಿಕ್ಯಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಭಾಷಣ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ ಶಿವಾನಂದ ವಾಲಿಕಾರ ಹೇಳಿದರು.ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್, ಯುತ್ ರೆಡ್‌ಕ್ರಾಸ್ ಹಾಗೂ ಸ್ಕೌಟ್ಸ್ & ಗೈಡ್ಸ್ ಘಟಕಗಳ ಅಡಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ, ಉಪನ್ಯಾಸಕ ಶ್ರೀ.ಬಿ.ಹೆಚ್.ಬಗಲಿ,ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ ರಾಠೋಡ, ಡಾ.ವಿಶ್ವಾಸ ಕೊರವಾರ, ಡಾ.ಸುರೇಂದ್ರ ಕೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಆನಂದ ನಡವಿನಮನಿ, ಶ್ರೀ.ಶ್ರೀಶೈಲ, ಡಾ.ಸಿ.ಎಸ್.ಬಿರಾದಾರ, ಡಾ.ಜಯಪ್ರಸಾದ ಡಿ ಶ್ರೀ.ಎಮ್.ಆರ್.ಕೋಣದೆ, ಶ್ರೀ.ಆರ್.ಪಿ.ಇಂಗನಾಳ ಮತ್ತಿತರಿದ್ದರು.

Read More

ವಿಜಯಪುರ: ವಿವೇಕಾನಂದರ ವಿಚಾರ ಧಾರೆಗಳು ವಿಶೇಷವಾಗಿ ಯುವಕರನ್ನು ಪ್ರೇರೇಪಿಸುತ್ತದೆ ಮತ್ತು ಅವರ ಜೀವನವನ್ನು ರೂಪಿಸಲು ಸಹಾಯ ಮಾಡುತ್ತದೆ. ಭಾರತೀಯ ಯುವ ಜನಾಂಗಕ್ಕೆ ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ವಿಚಾರ ಧಾರೆಗಳು ಸ್ಪೂರ್ತಿದಾಯಕವಾಗಲಿವೆ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಹೇಳಿದರು.ವಿಜಯಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ‘ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನೀಭೂತವಾಗಿದೆ. ಅದು ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ ಎಂದು ಸ್ವಾಮಿ ವಿವೇಕಾನಂದರು ಕೋಮುವಾದದ ಕಟ್ಟಾ ವಿರೋಧಿಯಾಗಿದ್ದರು ಎಂದು ಹೇಳಿದರು.ಶಿಕ್ಷಕ ಎಸ್.ವಿ.ದೇಶಪಾಂಡೆ ಪ್ರತಿಜ್ಞಾ ವಿಧಿ ಭೋಧಿಸಿದರು.ಈ ವೇಳೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರು ಸಂದೀಪ ರಾಠೋಡ, ಸೇರಿದಂತೆ ಕನ್ನಡ ಹಾಗೂ ಆಂಗ್ಲ…

Read More

ಚಡಚಣ: ಸಮೀಪದ ರೇವತಗಾಂವ ಗ್ರಾಮದ ಶ್ರೀ ಸಿಂಹಗಢ ಮಹಾರಾಜರ ೫೪ ನೇ ಪುಣ್ಯಾರಾಧನೆಯ ನಿಮಿತ್ತ ಗುರುವಾರ ರಾತ್ರಿ ಎಳ್ಳ ಅಮವಾಸ್ಯೆಯ ನಿಮಿತ್ತ ರಾತ್ರಿ ೯ ಗಂಟೆಗೆ ‘ವೀಣೆ ನಿಲ್ಲಿಸುವ’ ಹಾಗೂ ಮರಾಠಾ ಭಜನಾ ಕಾರ್ಯಕ್ರಮಗಳೊಂದಿಗೆ ಪುಣ್ಯಾರಾಧನೆಯ ಕಾರ್ಯಕ್ರಮಗಳು ಪ್ರಾರಂಭವಾದವು.

Read More

ಕೊಲ್ಹಾರ: ಮಕ್ಕಳಿಗೆ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ಆಗು ಹೋಗುಗಳ ಕುರಿತು ಮತ್ತು ಇಂದಿನ ರಾಜಕೀಯ ವ್ಯವಸ್ಥೆಯ ಪ್ರಚಲಿತ ವಿದ್ಯಮಾನಗಳ ವಿವರಣೆಯನ್ನು ಪಾಠದ ಜೊತೆಗೆ ಶಿಕ್ಷಕರು ಭೋದಿಸಿದರೆ ಮಕ್ಕಳು ಹೆಚ್ಚಿನ ಜ್ಞಾನಾರ್ಜನೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಾಗಲಕೋಟ ಬಸವೇಶ್ವರ ಅಂತರಾಷ್ಟ್ರೀಯ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಸುರೇಶ ಹೆಗಡೆ ಹೇಳಿದರು.ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಯಲ್ಲಮ್ಮದೇವಿ ಸಿಬಿಎಸ್‌ಸಿ ಶಾಲೆಯ ಮಕ್ಕಳಿಂದ ನಡೆದ ಪಾದಪೂಜೆ ಕಾರ್ಯಕ್ರಮ, ವಿಷಯವಾರು ಹಾಗೂ ವಿಜ್ಞಾನ ತಂತ್ರಜ್ನಾನದ ಕುರಿತು ಮಕ್ಕಳು ರಚಿಸಿದ ವಸ್ತುಪ್ರದರ್ಶನದ ಉದ್ಘಾಟಣೆ ಸ್ವಾಮಿ ವಿವೇಕಾನಂದರ ಜಯಂತಿ ಯುವ ದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಜನ್ಮ ಕೊಟ್ಟ ತಂದೆ ತಾಯಿಗಳ ಋಣವನ್ನು ತೀರಿಸಲು ಯಾವ ಕಾಲಕ್ಕೂ ಸಾಧ್ಯವಾಗದಂತಹ ಋಣಾನುಬಂಧದ ಬಂಧನವಾಗಿರುತ್ತದೆ ಅವರುಗಳ ಸೇವೆಯನ್ನು ಪಾದಪೂಜೆಯಂತಹ ಸಂಸ್ಕಾರಯುತ ಸಂಸ್ಕೃತಿಯನ್ನು ತೋರಿಸಿಕೊಡುವ ಇಂಥಹ ಕಾರ್ಯಕ್ರಮಗಳಿಂದ ಸ್ವಲ್ಪ ಮಟ್ಟಿಗಾದರೂ ಜನ್ಮದಾತರಿಗೆ ಕೃತಜ್ಞತೆ ಸಲ್ಲಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ಅನುಕೂಲಕರವಾಗುವ ವಿದ್ಯೆಯನ್ನು ಯಾರ ಮುಖಾಂತರವಾದರೂ ಕಲಿಯುವ ಸ್ವಾರ್ಥಿಗಳಾಗಿ ವಿಧ್ಯಾರ್ಥಿಗಳಿಗೆ ಭೋಧನೆ ಮಾಡುವ ಉತ್ತಮ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು…

Read More