ಕಲಕೇರಿ: ಸಿಡಿಲ ಮರಿ, ವೀರ ಸನ್ಯಾಸಿ, ಸಂತ ಶ್ರೇಷ್ಟರಾದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಇಂದಿನ ಯುವಕರು ಮೈಗೂಡಿಸಿಕೊಂಡು ಸಮರ್ಥ ಜೀವನ ಕಟ್ಟಿಕೊಳ್ಳುವುದರ ಜೊತೆಗೆ ಸುಭದ್ರ ರಾಷ್ಟ್ರ ನಿರ್ಮಾಣ ತಮ್ಮ ಗುರಿಯಾಗಿಸಿಕೊಳ್ಳಬೇಕೆಂದು ಪ್ರಾಚಾರ್ಯ ಎಸ್ ಎಮ್ ಸಜ್ಜನ ಹೇಳಿದರು.
ಗ್ರಾಮದ ಆದರ್ಶ ಪ್ರಥಮ ದರ್ಜೆ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿ ಕಲ್ಯಾಣ ಘಟಕದ ಅಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಯುವಕರು ಶಿಕ್ಷಣದ ಜೊತೆಗೆ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಉದಾತ್ತವಾದ ವಿಚಾರಧಾರೆಗಳನ್ನು ಅವಲೋಕಿಸಿ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನದ ಸಮಾಜ ನಿರ್ಮಿಸಲು ಮುಂದಾಗಬೇಕಿದೆ ಎಂದು ಹೇಳಿದರು.
ಈ ವೇಳೆ ಉಪನ್ಯಾಸಕರಾದ ಪ್ರವೀಣ ಪಾಕಿ, ಯುವಪ್ರತಿನಿಧಿ ಕುಮಾರಿ ವಿದ್ಯಾಶ್ರೀ ಬಿರಾದಾರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರೊ.ಆಬಿದಅಲಿ ಸಾಲೋಡಗಿ, ವಿದ್ಯಾರ್ಥಿ ಕಲ್ಯಾಣ ಘಟಕದ ಸಂಯೋಜಕರಾದ ಪ್ರೊ.ಶ್ರೀದೇವಿ ಹೂಲಿ, ಪ್ರೊ.ರುಕ್ಷಾನಾಬೇಗಂ ಬೇಪಾರಿ, ಪ್ರೊ.ಮಲ್ಲಿಕಾರ್ಜುನ ಸಜ್ಜನ, ಪ್ರೊ.ಸಂಗೀತಾ ಟೆಂಗಳಿ, ಪ್ರೊ.ಝರೀನಾ ಕುಕನೂರ, ಪ್ರೊ.ಮಹಾಂತೇಶ ಲಂಗೋಟಿ, ಪ್ರೊ.ಹುಸೇನಬಾಶಾ ಹಿಪ್ಪರಗಿ, ಪ್ರೊ.ಸವಿತಾ ಇಂಗಳೇಶ್ವರ, ಪ್ರೊ.ಜಾವೀದ ಜರ್ದಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

