ಕೊಲ್ಹಾರ: ಮಕ್ಕಳಿಗೆ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ಆಗು ಹೋಗುಗಳ ಕುರಿತು ಮತ್ತು ಇಂದಿನ ರಾಜಕೀಯ ವ್ಯವಸ್ಥೆಯ ಪ್ರಚಲಿತ ವಿದ್ಯಮಾನಗಳ ವಿವರಣೆಯನ್ನು ಪಾಠದ ಜೊತೆಗೆ ಶಿಕ್ಷಕರು ಭೋದಿಸಿದರೆ ಮಕ್ಕಳು ಹೆಚ್ಚಿನ ಜ್ಞಾನಾರ್ಜನೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಾಗಲಕೋಟ ಬಸವೇಶ್ವರ ಅಂತರಾಷ್ಟ್ರೀಯ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಸುರೇಶ ಹೆಗಡೆ ಹೇಳಿದರು.
ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಯಲ್ಲಮ್ಮದೇವಿ ಸಿಬಿಎಸ್‌ಸಿ ಶಾಲೆಯ ಮಕ್ಕಳಿಂದ ನಡೆದ ಪಾದಪೂಜೆ ಕಾರ್ಯಕ್ರಮ, ವಿಷಯವಾರು ಹಾಗೂ ವಿಜ್ಞಾನ ತಂತ್ರಜ್ನಾನದ ಕುರಿತು ಮಕ್ಕಳು ರಚಿಸಿದ ವಸ್ತುಪ್ರದರ್ಶನದ ಉದ್ಘಾಟಣೆ ಸ್ವಾಮಿ ವಿವೇಕಾನಂದರ ಜಯಂತಿ ಯುವ ದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜನ್ಮ ಕೊಟ್ಟ ತಂದೆ ತಾಯಿಗಳ ಋಣವನ್ನು ತೀರಿಸಲು ಯಾವ ಕಾಲಕ್ಕೂ ಸಾಧ್ಯವಾಗದಂತಹ ಋಣಾನುಬಂಧದ ಬಂಧನವಾಗಿರುತ್ತದೆ ಅವರುಗಳ ಸೇವೆಯನ್ನು ಪಾದಪೂಜೆಯಂತಹ ಸಂಸ್ಕಾರಯುತ ಸಂಸ್ಕೃತಿಯನ್ನು ತೋರಿಸಿಕೊಡುವ ಇಂಥಹ ಕಾರ್ಯಕ್ರಮಗಳಿಂದ ಸ್ವಲ್ಪ ಮಟ್ಟಿಗಾದರೂ ಜನ್ಮದಾತರಿಗೆ ಕೃತಜ್ಞತೆ ಸಲ್ಲಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ಅನುಕೂಲಕರವಾಗುವ ವಿದ್ಯೆಯನ್ನು ಯಾರ ಮುಖಾಂತರವಾದರೂ ಕಲಿಯುವ ಸ್ವಾರ್ಥಿಗಳಾಗಿ ವಿಧ್ಯಾರ್ಥಿಗಳಿಗೆ ಭೋಧನೆ ಮಾಡುವ ಉತ್ತಮ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆಕೊಟ್ಟರು.
ರೋಣಿಹಾಳ ಹಿರೇಮಠದ ರಾಜಶೇಖರಯ್ಯ ಹಿರೇಮಠ, ಬಳೂತಿಯ ಶಂಕ್ರಯ್ಯ ಚಿಕ್ಕಮಠ ಸಾನಿಧ್ಯವನ್ನು ವಹಿಸಿದ್ದರು. ಅತಿಥಿಗಳಾಗಿ ಈರಪ್ಪ ಬಾಟಿ, ನೀಲಮ್ಮ ಮಲ್ಲಿಕಾರ್ಜುನ ಬೆಳ್ಳುಬ್ಬಿ, ಸವಿತಾ ಚಂದ್ರಶೇಖರ ಬೆಳ್ಳುಬ್ಬಿ, ಸಾವಿತ್ರಿ ಮೇತ್ರಿ, ಬಸವರಾಜ ಸಜ್ಜನ, ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್.ನಿಂಬಾಳ್ಕರ ಉಪಸ್ಥಿತರಿದ್ದರು.
ನಿರ್ಣಾಯಕರಾಗಿ ಶ್ರೀಶೈಲ ಯಡಹಳ್ಳಿ, ಸಲೀಂ ಡಾಂಗೆ ಶಿಕ್ಷಕರು ಭಾಗವಹಿಸಿದ್ದರು. ಪೂಜಾ ಬಾಟಿ ನಿರೂಪಿಸಿದರು.
ಸಂಸ್ಥೆಯ ಶಿಕ್ಷಕ ವೃಂದದವರು ಸಿಬ್ಬಂಧಿ ವರ್ಗದವರು ವಿಧ್ಯಾರ್ಥಿಗಳ ಪಾಲಕರು ಸಭೆಗೆ ಆಗಮಿಸಿದ್ದರು. ಮಕ್ಕಳಿಂದ ಪಾಲಕರಿಗೆ ಪಾದಪೂಜೆ ನೆರವೇರಿತು.
Subscribe to Updates
Get the latest creative news from FooBar about art, design and business.
Related Posts
Add A Comment

