Author: editor.udayarashmi@gmail.com

– ಸಂಪದಾ ಹಿರೇಮಠಆಲಮಟ್ಟಿ: ಶ್ರೀ ರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಯಲ್ಲಿ ಸೋಮವಾರ ನವ್ಯೋತ್ತರದ ಭವ್ಯೋತ್ತರ ಐತಿಹ ಕನಸಿನ ರಾಮ ಮಂದಿರ ತಲೆ ಎತ್ತಿದೆ. ವೈವಿಧ್ಯಮಯ ರಾಮ ದೇಗುಲ ಲೋಕಾರ್ಪಣೆಗೊಂಡು ರಾಮನ ಪಟ್ಟಾಭಿಷೇಕದ ಸಂಭ್ರಮ ದೇಶದೆಲ್ಲೆಡೆ ಮೊಳಗಿದೆ. ಆ ನಿಮಿತ್ಯ ಈ ಭಕ್ತಿಭಾವದ ಸಂತಸ,ಸಡಗರ ಇಲ್ಲಿ ಪುಟ್ಟ ಬಾಲ ಜೀವಭಾವದಲ್ಲಿ ಪೂಜ್ಯನೀಯವಾಗಿ ಮೂಡಿಬಂದಿದೆ.ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಪುಟ್ಟ ಬಾಲಕರು ರಾಮ, ಲಕ್ಷ್ಮಣನ ಹಾಗೂ ಬಾಲೆಯೊಬ್ಬಳು ಸೀತೆಯ ರೂಪ ಸಾಂಗತ್ಯದಲ್ಲಿ ಮಿನುಗಿ ಗಮನ ಸೆಳೆದರು.ರಾಮೋತ್ಸವಕ್ಕೆ ಬಾಲೋತ್ಸವದ ಕಲರಫುಲ್ ಮೆರುಗು ನೀಡಿ ಸಂಭ್ರಮಿಸಿದರು. ಜೈ ಸಿಯಾರಾಮ ಸ್ಮರಣೆಯಲ್ಲಿ ಮಿಂದೆದ್ದರು. ರಾಮನಾಮ ಆದರ್ಶಕ್ಕೆ ಸಾಕ್ಷಿಯಾದರು. ರಾಮ,ಸೀತೆ,ಲಕ್ಷ್ಮಣ ಕಾಡಿನಲ್ಲಿನ ವನವಾಸದ ದೃಶ್ಯ ಕಾವ್ಯದಲ್ಲಿ ಈ ಚಿಣ್ಣರು ಗೋಚರಿಸಿ ಜನಮನ ಸೆಳೆದರು. ಮನೋಜ್ಞ ಭಾವಭಂಗಿಯಲ್ಲಿ ಹಾವಭಾವ ಬೀರಿ ನೋಡುಗರ ಹೃನ್ಮನ ಗೆದ್ದರು.ಅಖಿಲ ಮುಳವಾಡ, ರಾಜೇಶ್ವರಿ ಮುಳವಾಡ, ಸ್ವಾತಿಕ ಬೂದಿಹಾಳ, ಹೇಮಂತ ಒನಕ್ಯಾಳ, ಸಾನ್ವಿ ರಾಠೋಡ, ಲಕ್ಷ್ಮೀ ಕುಂದರಗಿ ಮೊದಲಾದ ಚಿಣ್ಣರು ರಾಮನಾಮದಲ್ಲಿ ವೇಷಭೂಷಣ ಧರಿಸಿ ಎಲ್ಲರ…

Read More

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎಲ್ಲ ಗ್ರಾಮಗಳಲ್ಲಿರುವ ಹನುಮಂತ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಂಗವಾಗಿ ಸೋಮವಾರ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ರಾಮನ ಜಪ, ಘೋಷಣೆ ಕೇಳಿಬಂದಿತ್ತು. ಎಲ್ಲೆಡೆ ಪ್ರಸಾದ ವ್ಯವಸ್ಥೆ ಮಾಡಿದ್ದು ಕಂಡುಬಂದಿತ್ತು.ಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಅಂಭಾಭವಾನಿ ದೇವಸ್ಥಾನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವಿಜಯಪುರ ಸೌಹಾರ್ದ ಬ್ಯಾಂಕಿನ ನಿರ್ದೇಶಕ ಜಟ್ಟಿಂಗರಾಯ ಮಾಲಗಾರ ಮಾತನಾಡಿ, ಕಳೆದ ಐದು ಶತಮಾನಗಳ ಹೋರಾಟ ಮತ್ತು ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾನಗೊಂಡು ಪ್ರಾಣ ಪ್ರತಿಷ್ಠಾಪನೆವಾಗುತ್ತಿರುವುದು ಸಮಸ್ತ ಹಿಂದು ಬಾಂಧವರಿಗೆ ಸಂತಸ, ಸಂಭ್ರಮ ಉಂಟು ಮಾಡಿದೆ. ಅಸಂಖ್ಯಾತ ಹಿಂದು ಭಕ್ತರ ತ್ಯಾಗ-ಬಲಿದಾನಕ್ಕೆ ಇದೀಗ ತಕ್ಕ ಪ್ರತಿಫಲ ಸಿಕ್ಕಂತಾಗಿದೆ ಎಂದರು.ಕಾರ್ಯಕ್ರಮದಲ್ಲಿ ರಾಮ,ಸೀತೆ, ಲಕ್ಷ್ಮಣ, ಹನುಮಂತ ವೇಷಧಾರಿ ಮಕ್ಕಳು ಗಮನ ಸೆಳೆದರು.ಈ ಸಂದರ್ಭದಲ್ಲಿ ರಾಜು ಬಿಜಾಪುರ, ರಮೇಶ ಮೊರೆ, ಬಸವರಾಜ ಬಿಜಾಪುರ, ಅಶೋಕ ಬಿಜಾಪುರ, ಅಂಬೋಜಿ ಬಿದರಕುಂದಿ,…

Read More

ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ರಾಜ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಕಾಲೇಜಿನ ವಿಧ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಸುಮಾರು ೨ ಗಂಟೆಗಳ ಕಾಲ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಪಾಟೀಲ, ರಾಜಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ. ಸಾರಿಗೆ, ಮೂಲಭೂತ ಸೌಕರ್ಯಗಳ ಕುರಿತು ಕೇಳಿದ ಹತ್ತು ಹಲವು ಪ್ರಶ್ನೆಗಳಿಗೆ ಶಾಂತ ರೀತಿಯಿಂದ ವಿಧ್ಯಾರ್ಥಿಗಳಿಗೆ ಉತ್ತರ ನೀಡಿದರು,ಸಂವಾದದ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಸಕ ರಾಜುಗೌಡ ಕುದರಿಸಾಲೋಡಗಿ ಅವರು, ಇಂದಿನ ವಿಧ್ಯಾರ್ಥಿಗಳು ಮುಖ್ಯವಾಗಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಗುರು ಹಿರಿಯರನ್ನು ಗೌರವಿಸುವ, ಮಾತಾಪಿತರನ್ನು ಪೂಜ್ಯನೀಯ ಬಾವದಿಂದ ಕಾಣುವುದನ್ನು ಕಲಿಯಬೇಕು. ಇದರಿಂದ ಎಂತಹುದೇ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಆಗಬೇಕಿದೆ. ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡುತ್ತೇನೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ, ಪ್ರಾಚಾರ್ಯ ಸಿ ಎಸ್ ಹಿರೇಮಠ, ಬಸವಂತಪ್ಪ ಚನಗೊಂಡ,…

Read More

ವಿಜಯಪುರ: ಜಿಲ್ಲೆಯಲ್ಲಿ ನಡೆದ ವಾಣಿಜ್ಯ ತೆರಿಗೆ ಪರಿವೀಕ್ಷಕರ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿ ಪ್ರತಿಭಟನೆ ಮಾಡಿದ ಪ್ರಸಂಗ ಜರುಗಿದೆ.ಜ. 21 ರಂದು ಭಾನುವಾರ ನಡೆದ ವಾಣಿಜ್ಯ ತೆರಿಗೆ ಪರಿವೀಕ್ಷಕರ ಪರೀಕ್ಷೆಯು ವಿಜಯಪುರ ಜಿಲ್ಲೆಯ ಎಸ್ ಎಸ್ ಪ್ರೌಢಶಾಲೆಯಲ್ಲಿ ನಡೆದಿದ್ದು, ಅದು ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆ ಅಡಿಯಲ್ಲಿ ಬರುವ ಶಿಕ್ಷಣ ಸಂಸ್ಥೆಯಾಗಿದೆ.ಎಸ್ ಎಸ್ ಪ್ರೌಢಶಾಲೆಯ ಪರೀಕ್ಷಾ ಕೊಠಡಿ ಸಂಖ್ಯೆ 8 ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಕೊಠಡಿಗೆ ಬರುವ ಮುಂಚೆಯೇ ಪ್ರಶ್ನೆ ಪತ್ರಿಕೆಯ ಕವರ್ ತೆರೆಯಲಾಗಿದ್ದು ಇದು ವಿದ್ಯಾರ್ಥಿಗಳ ಗಮನಕ್ಕೆ ಬಂದಿದೆ. ಪರೀಕ್ಷಾ ಕೊಠಡಿಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಇದಕ್ಕೆ ವಿರೋಧಿಸಿದರೂ ಇದನ್ನು ಗಣನೆಗೆ ತೆಗೆದುಕೊಳ್ಳದ ಕೊಠಡಿ ಮೇಲ್ವಿಚಾರಕರು ಒತ್ತಾಯಪೂರ್ವಕ್ಕಾಗಿ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯ ಬಂಡಲ್ ಗೆ ಸಹಿ ಪಡೆಯಲು ಮುಂದಾದಾಗ ವಿದ್ಯಾರ್ಥಿಗಳು ಇದಕ್ಕೆ ನಿರಾಕರಿಸಿದ್ದಾರೆ. ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ ವರ್ಗದವರು ಮತ್ತು ಕೆಪಿಎಸ್‌ಸಿ ನೋಡಲ್ ಅಧಿಕಾರಿಗಳು ಬಂದು ಸಹಿ ಪಡೆಯದೆ…

Read More

ವಿಜಯಪುರ: ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ, ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರ ನಿರ್ದೇಶನದಂತೆ ಅತ್ಯಂತ ವಿಜೃಂಭಣೆಯಿಂದ ರಾಮೋತ್ಸವ ಜರುಗಿತು.ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ, ಬೆಳಿಗ್ಗೆ ಸಿದ್ದೇಶ್ವರ ದೇವಸ್ಥಾನದಲ್ಲಿ ಹೋಮ, ಹವನ ಮತ್ತು ವಿಶೇಷ ಪೂಜೆ ನೇರವೇರಿಸಿ, ನಾಡಿಗೆ ಸು:ಖ, ಶಾಂತಿ, ಸಮೃದ್ಧಿ ಕರುಣಿಸಲೆಂದು ಪ್ರಾರ್ಥಿಸಲಾಯಿತು. ನಂತರ ಸಿಹಿ ವಿತರಿಸಿ, ಸಂಭ್ರಮಿಸಲಾಯಿತು.ಸಂಜೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ಮತ್ತು ಸಿದ್ಧಸಿರಿ ಸೌಹಾರ್ದದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ಅವರ ನೇತೃತ್ವದಲ್ಲಿ, ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ವಿಶೇಷ ದೀಪೋತ್ಸವದಲ್ಲಿ, 1,200 ದೀಪಗಳಲ್ಲಿ ಅರಳಿದ ಶ್ರೀರಾಮಚಂದ್ರ ರೂಪಕ ನೆರೆದ ಸಾವಿರಾರು ಶ್ರೀರಾಮ ಭಕ್ತರ ಕಣ್ಮನ ಸೆಳೆಯಿತು.ನಂತರ ನಡೆದ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ ಉತ್ಸವದ ಮೆರಗು ಹೆಚ್ಚಿಸಿತು.ಎಲ್ಲಿ ನೋಡಿದರಲ್ಲಿ…

Read More

ಸಿಂದಗಿಯ ಶಾಂತವೀರ – ಶ್ವೇತಾ ಮಣೂರ ದಂಪತಿಯ ಪುತ್ರ ನೀಲ್ ಸಿಂದಗಿಯ ಬಸವೇಶ – ಮೇನಕಾ ಮಣೂರ ದಂಪತಿಯ ಅವಳಿ ಜವಳಿ ಪುತ್ರರಾದ ಸಿದ್ದಾಂತ ಮತ್ತು ರಾಜೀವ ಸಿಂದಗಿಯ ರಚಿತ ಚಾಗಶೆಟ್ಟಿ ಮಹಾಂತೇಶ ಶೆಟ್ಟರ್ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆ ಸಿಂದಗಿ

Read More

ಸಿಂದಗಿ: ಅಯೋಧ್ಯೆ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ನಿಮಿತ್ಯವಾಗಿ ಸೋಮವಾರ ಸಿಂದಗಿ ಸಾರಂಗಮಠದಲ್ಲಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಸಮ್ಮುಖದಲ್ಲಿ ರಾಜಸ್ಥಾನದ ವ್ಯಾಪಾರಸ್ಥರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಕೈಗೊಂಡಿದ್ದರು.ಈ ವೇಳೆ ರಾಮು ಭೀಕಾರಾಮ್, ಶರ್ಮಾ, ಗ್ರೇವ್ ರಾಮ್, ಶಂಕರ್‌ಸುತಾರ್ ಮಹೇಂದ್ರಸಿಂಗ್, ಮಹೇಂದ್ರ ಸೋಲಂಕಿ, ವಿಷ್ಣು ರಾಮ್ ಸೇರಿದಂತೆ ಶ್ರೀಮಠದ ಭಕ್ತ ಮಂಡಳಿ ಪ್ರಸಾದ ಸ್ವೀಕರಿಸಿ ಪುನೀತರಾದರು.ಬಸವೇಶ್ವರ ವೃತ್ತ: ಪಟ್ಟಣದ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಸಿಂದಗಿಯ ಶ್ರೀರಾಮನ ಸಮಸ್ತ ಭಕ್ತ ವೃಂದದ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪೂಜೆ ಹಾಗೂ ಪ್ರಸಾದ ಸೇವೆ ಹಾಗೂ ಬೆಳಿಗ್ಗೆ ೧೧ಗಂಟೆಯಿಂದ ಕಾರ್ಯಕ್ರಮದ ನೇರ ಪ್ರಸಾರ ಹಮ್ಮಿಕೊಂಡು ಸಾರ್ವಜನಿಕರಿಗೆ ವೀಕ್ಷಣೆ ಅವಕಾಶ ಕಲ್ಪಿಸಿತು.ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತ, ಆರ್.ಡಿ ಪಾಟೀಲ ಕಾಲೇಜಿನ ಎದುರುಗಡೆ, ಅಶೋಕ ಚೌಕ, ಸೋಮಲಿಂಗೇಶ್ವರ ಚೌಕ, ನೀಲಗಂಗಾದೇವಿ ದೇವಸ್ಥಾನ ಬಳಿ, ವಜ್ರಹನುಮಾನ ದೇವಸ್ಥಾನ, ಮಲ್ಲಿಕಾರ್ಜುನ ನಗರ, ನಾಗೂರ ಲೇವೌಟ್ ಶಿವನ ಗುಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಶ್ರೀರಾಮನ…

Read More

ಮೋರಟಗಿ ಕಲ್ಪವೃಕ್ಷ ಕಾಲೇಜಿನ ಸಮಾರಂಭದಲ್ಲಿ ಇಸ್ರೋ ವಿಜ್ಞಾನಿ ಸಂಜೀವ್ ಗೌರ ಅಭಿಮತ ಮೋರಟಗಿ: ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ ಹೇಗೆ ಬದುಕಿದ್ದಾನೆ ಎನ್ನುವುದು ಮುಖ್ಯ, ಸಾಧನೆಯ ಹಾದಿ ಹಿಡಿದಾಗ ಸಮಸ್ಯೆಗಳು ಬರುವುದು ಸಹಜ, ಸಮಸ್ಸೆಗಳಿಗೆ ಎದೆ ಕೊಟ್ಟು ನಿಂತು ಸಾಧನೆಗೆ ಮುಂದಾಗಬೇಕು, ವಿದ್ಯಾರ್ಥಿಗಳ ಮನಸ್ಸು ಹತೋಟಿಯಲ್ಲಿ ಇದ್ದಾಗ ಮಾತ್ರ ಶಿಕ್ಷಣ ವಶೀಕರಣವಾಗುತ್ತದೆ ಎಂದು ಹಿರಿಯ ವಿಜ್ಞಾನಿ ಸಂಜೀವ್ ಗೌರ ಅಭಿಮತ ವ್ಯಕ್ತಪಡಿಸಿದರು.ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಹಮ್ಮಿಕೊಂಡ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶುಭಕೋರುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಒಂದು ಚಲನಚಿತ್ರ ನೋಡಿದ ಒಬ್ಬ ಸಾಮಾನ್ಯ ವಿದ್ಯಾರ್ಥಿ ಅದರಲ್ಲಿ ಬರುವಂತಹ ಎಲ್ಲ ಸನ್ನಿವೇಶಗಳನ್ನು ಮದ್ಯರಾತ್ರಿ ಎಬ್ಬಿಸಿ ಕೇಳಿ ಅದನ್ನು ತಡ ಮಾಡದೆ ಉತ್ತರಿಸುತ್ತಾನೆ, ಅದೇ ವಿದ್ಯಾರ್ಥಿಗೆ ಇಂದು ಹೇಳಿದ ಪಾಠ ಎರಡು ಗಂಟೆ ಬಳಿಕ ಕೇಳಿದರೆ ನನಗೆ ವಿದ್ಯೆ ತೆಲೆಗೆ ಹತ್ತುತ್ತಿಲ್ಲ ಎನ್ನುತ್ತಾನೆ. ಮನಸಿದ್ದರೆ ಎಲ್ಲ ಮಾರ್ಗವೂ ಸರಳ ಎನ್ನುವಂತೆ ಇಚ್ಛಾಶಕ್ತಿಯಿಂದ ವಿದ್ಯಾಭ್ಯಾಸ ಮಾಡಿ ಸರಸ್ವತಿ ನಿಮ್ಮನ್ನು ಯಾವತ್ತೂ…

Read More

ವಿಜಯಪುರ: ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕ ವಿಜಯಪುರ ಇವರು ಕೊಡಮಾಡುವ ಜಿಲ್ಲಾ ಅತ್ಯುತ್ತಮ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಪ್ರಶಸ್ತಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಲಿಯಾಬಾದ ಶಾಲೆಯ ಗುರುಗಳಾದ ಒ.ಅ.ಬೀಳುರ ಆಯ್ಕೆಯಾಗಿದ್ದಾರೆ.ಇವರಿಗೆ ವಿಜಯಪುರ ಗ್ರಾಮೀಣ ತಾಲೂಕಿನ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗ್ರಾಮೀಣ ಘಟಕ ಹಾಗೂ ಸದರಿ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಅಧ್ಯ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.

Read More

ವಿಜಯಪುರ: ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕ ವಿಜಯಪುರ ಇವರು ಕೊಡಮಾಡುವ ಜಿಲ್ಲಾ ಅತ್ಯುತ್ತಮ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಪ್ರಶಸ್ತಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿವಣಗಿ ಶಾಲೆಯ ಗುರು ಅನುಸೂಯಾ ಸ. ಲಂಬು ( ನಾಟೀಕಾರ) ಆಯ್ಕೆಯಾಗಿದ್ದಾರೆ.ಇವರಿಗೆ ವಿಜಯಪುರ ಗ್ರಾಮೀಣ ತಾಲೂಕಿನ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗ್ರಾಮೀಣ ಘಟಕ ಹಾಗೂ ಸದರಿ ಶಾಲೆಯ ಎಚ್ ಎಸ್ ಇಂಡಿ ಶಿಕ್ಷಕರು, ಎಸ್ಡಿಎಂಸಿ ಅಧ್ಯ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.

Read More