ಮೋರಟಗಿ ಕಲ್ಪವೃಕ್ಷ ಕಾಲೇಜಿನ ಸಮಾರಂಭದಲ್ಲಿ ಇಸ್ರೋ ವಿಜ್ಞಾನಿ ಸಂಜೀವ್ ಗೌರ ಅಭಿಮತ
ಮೋರಟಗಿ: ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ ಹೇಗೆ ಬದುಕಿದ್ದಾನೆ ಎನ್ನುವುದು ಮುಖ್ಯ, ಸಾಧನೆಯ ಹಾದಿ ಹಿಡಿದಾಗ ಸಮಸ್ಯೆಗಳು ಬರುವುದು ಸಹಜ, ಸಮಸ್ಸೆಗಳಿಗೆ ಎದೆ ಕೊಟ್ಟು ನಿಂತು ಸಾಧನೆಗೆ ಮುಂದಾಗಬೇಕು, ವಿದ್ಯಾರ್ಥಿಗಳ ಮನಸ್ಸು ಹತೋಟಿಯಲ್ಲಿ ಇದ್ದಾಗ ಮಾತ್ರ ಶಿಕ್ಷಣ ವಶೀಕರಣವಾಗುತ್ತದೆ ಎಂದು ಹಿರಿಯ ವಿಜ್ಞಾನಿ ಸಂಜೀವ್ ಗೌರ ಅಭಿಮತ ವ್ಯಕ್ತಪಡಿಸಿದರು.
ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಹಮ್ಮಿಕೊಂಡ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶುಭಕೋರುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಚಲನಚಿತ್ರ ನೋಡಿದ ಒಬ್ಬ ಸಾಮಾನ್ಯ ವಿದ್ಯಾರ್ಥಿ ಅದರಲ್ಲಿ ಬರುವಂತಹ ಎಲ್ಲ ಸನ್ನಿವೇಶಗಳನ್ನು ಮದ್ಯರಾತ್ರಿ ಎಬ್ಬಿಸಿ ಕೇಳಿ ಅದನ್ನು ತಡ ಮಾಡದೆ ಉತ್ತರಿಸುತ್ತಾನೆ, ಅದೇ ವಿದ್ಯಾರ್ಥಿಗೆ ಇಂದು ಹೇಳಿದ ಪಾಠ ಎರಡು ಗಂಟೆ ಬಳಿಕ ಕೇಳಿದರೆ ನನಗೆ ವಿದ್ಯೆ ತೆಲೆಗೆ ಹತ್ತುತ್ತಿಲ್ಲ ಎನ್ನುತ್ತಾನೆ. ಮನಸಿದ್ದರೆ ಎಲ್ಲ ಮಾರ್ಗವೂ ಸರಳ ಎನ್ನುವಂತೆ ಇಚ್ಛಾಶಕ್ತಿಯಿಂದ ವಿದ್ಯಾಭ್ಯಾಸ ಮಾಡಿ ಸರಸ್ವತಿ ನಿಮ್ಮನ್ನು ಯಾವತ್ತೂ ಕೈ ಬಿಡುವುದಿಲ್ಲ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಸಿ. ಎಂ. ಬಂಡಗಾರ ಮಾತನಾಡಿದರು.
ಸಾನಿಧ್ಯ ವಹಿಸಿದ ಶ್ರೀ ಸದ್ಗುರು ಶಂಕರಾನಂದ ಸ್ವಾಮಿಗಳು ಆರೂಢ ಮಠ ಅಸಂಗಿಹಾಳ ಆಶೀರ್ವಚನ ನೀಡಿದರು.
ಇದೇ ವೇಳೆ ಇಸ್ರೋ ಹಿರಿಯ ವಿಜ್ಞಾನ ಚಂದ್ರಯಾನ ರೂವಾರಿ ಸಂಜೀವ್ ಗೌರ ಅವರನ್ನು ಸಂಸ್ಥೆಯ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಲ್ಪವೃಕ್ಷ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಮಾತನಾಡಿದರು.
ಪಿಯುಸಿ ದ್ವಿತೀಯ ವಿದ್ಯಾರ್ಥಿನಿ ಕಾವೇರಿ ಹೂಗಾರ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ೨೦೨೨-೨೩ ರ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ೬೦೦ ಅಂಕಗಳಿಗೆ ೫೯೧ ಅಂಕ ಪಡೆದು ರಾಜ್ಯಕ್ಕೆ ೬ ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಗುರುರಾಜಾ ಗೌನಳ್ಳಿ ಜೊತೆಗೆ ವಾಣಿಜ್ಯ ಕಲಾ ವಿಭಾಗದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಿ ಗೌರವಿಸಲಾಯಿತು.
ಡಾ, ಪಿ. ಕೆ. ಹೊಸಮನಿ ಪಿಯು ಡಿಡಿಪಿಐ ವಿಜಯಪುರ, ಬಿ. ಟಿ. ಗೊಂಗಡಿ, ಎಸ್. ಕೆ. ಬಿರಾದಾರ, ಪಾಲಕರ ಪ್ರತಿನಿಧಿಯಾಗಿ ಎಸ್. ಎಸ್. ಪೂಜಾರಿ, ಆಡಳಿತ ಅಧಿಕಾರಿ ಎಸ್. ಎಚ್. ದುಳಬಾ, ಸಮನ್ವಯ ಅಧಿಕಾರಿ ಎಸ್. ವ್ಹಿ. ಬಿರಾದಾರ, ಪ್ರಾಚಾರ್ಯ ಡಾ, ಎ. ಬಿ. ಸಿಂದಗಿ, ಎಲ್. ಎಸ್. ಸುಲ್ತಾನಪುರ, ಪ್ರಾಚಾರ್ಯ ಎಸ್. ಬಿ. ಬಿರಾದಾರ, ವಿದ್ಯಾರ್ಥಿಗಳ ಪ್ರತಿನಿಧಿಗಳಾದ ಪಲ್ಲವಿ ಪಾರಗೊಂಡ, ದಾವಲಮಲಿಕ ಪಟೇಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

