ಸಿಂದಗಿ: ಅಯೋಧ್ಯೆ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ನಿಮಿತ್ಯವಾಗಿ ಸೋಮವಾರ ಸಿಂದಗಿ ಸಾರಂಗಮಠದಲ್ಲಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಸಮ್ಮುಖದಲ್ಲಿ ರಾಜಸ್ಥಾನದ ವ್ಯಾಪಾರಸ್ಥರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಕೈಗೊಂಡಿದ್ದರು.
ಈ ವೇಳೆ ರಾಮು ಭೀಕಾರಾಮ್, ಶರ್ಮಾ, ಗ್ರೇವ್ ರಾಮ್, ಶಂಕರ್‌ಸುತಾರ್ ಮಹೇಂದ್ರಸಿಂಗ್, ಮಹೇಂದ್ರ ಸೋಲಂಕಿ, ವಿಷ್ಣು ರಾಮ್ ಸೇರಿದಂತೆ ಶ್ರೀಮಠದ ಭಕ್ತ ಮಂಡಳಿ ಪ್ರಸಾದ ಸ್ವೀಕರಿಸಿ ಪುನೀತರಾದರು.
ಬಸವೇಶ್ವರ ವೃತ್ತ: ಪಟ್ಟಣದ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಸಿಂದಗಿಯ ಶ್ರೀರಾಮನ ಸಮಸ್ತ ಭಕ್ತ ವೃಂದದ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪೂಜೆ ಹಾಗೂ ಪ್ರಸಾದ ಸೇವೆ ಹಾಗೂ ಬೆಳಿಗ್ಗೆ ೧೧ಗಂಟೆಯಿಂದ ಕಾರ್ಯಕ್ರಮದ ನೇರ ಪ್ರಸಾರ ಹಮ್ಮಿಕೊಂಡು ಸಾರ್ವಜನಿಕರಿಗೆ ವೀಕ್ಷಣೆ ಅವಕಾಶ ಕಲ್ಪಿಸಿತು.
ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತ, ಆರ್.ಡಿ ಪಾಟೀಲ ಕಾಲೇಜಿನ ಎದುರುಗಡೆ, ಅಶೋಕ ಚೌಕ, ಸೋಮಲಿಂಗೇಶ್ವರ ಚೌಕ, ನೀಲಗಂಗಾದೇವಿ ದೇವಸ್ಥಾನ ಬಳಿ, ವಜ್ರಹನುಮಾನ ದೇವಸ್ಥಾನ, ಮಲ್ಲಿಕಾರ್ಜುನ ನಗರ, ನಾಗೂರ ಲೇವೌಟ್ ಶಿವನ ಗುಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಶ್ರೀರಾಮನ ಭವ್ಯ ಮೆರವಣಿಗೆ, ಪ್ರಸಾದ ಸೇವೆ ಜರುಗಿತು.
ಬೋರಗಿ-ಪುರದಾಳ: ಅಯೋಧ್ಯೆ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ನಿಮಿತ್ಯವಾಗಿ ತಾಲೂಕಿನ ಬೋರಗಿ ಗ್ರಾಮದ ತಪೋರ‍್ನ ಮಹಾಲಿಂಗೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಬೋರಗಿ ಗ್ರಾಮಸ್ಥರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವ್ಯವಸ್ಥೆ ಕೈಗೊಂಡಿದ್ದರು.
ಈ ವೇಳೆ ಮಲ್ಲು ಸಾವಳಸಂಗ, ನಿತ್ಯಾನಂದ ಕಟ್ಟಿಮನಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

