– ಸಂಪದಾ ಹಿರೇಮಠ
ಆಲಮಟ್ಟಿ: ಶ್ರೀ ರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಯಲ್ಲಿ ಸೋಮವಾರ ನವ್ಯೋತ್ತರದ ಭವ್ಯೋತ್ತರ ಐತಿಹ ಕನಸಿನ ರಾಮ ಮಂದಿರ ತಲೆ ಎತ್ತಿದೆ. ವೈವಿಧ್ಯಮಯ ರಾಮ ದೇಗುಲ ಲೋಕಾರ್ಪಣೆಗೊಂಡು ರಾಮನ ಪಟ್ಟಾಭಿಷೇಕದ ಸಂಭ್ರಮ ದೇಶದೆಲ್ಲೆಡೆ ಮೊಳಗಿದೆ. ಆ ನಿಮಿತ್ಯ ಈ ಭಕ್ತಿಭಾವದ ಸಂತಸ,ಸಡಗರ ಇಲ್ಲಿ ಪುಟ್ಟ ಬಾಲ ಜೀವಭಾವದಲ್ಲಿ ಪೂಜ್ಯನೀಯವಾಗಿ ಮೂಡಿಬಂದಿದೆ.
ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಪುಟ್ಟ ಬಾಲಕರು ರಾಮ, ಲಕ್ಷ್ಮಣನ ಹಾಗೂ ಬಾಲೆಯೊಬ್ಬಳು ಸೀತೆಯ ರೂಪ ಸಾಂಗತ್ಯದಲ್ಲಿ ಮಿನುಗಿ ಗಮನ ಸೆಳೆದರು.
ರಾಮೋತ್ಸವಕ್ಕೆ ಬಾಲೋತ್ಸವದ ಕಲರಫುಲ್ ಮೆರುಗು ನೀಡಿ ಸಂಭ್ರಮಿಸಿದರು. ಜೈ ಸಿಯಾರಾಮ ಸ್ಮರಣೆಯಲ್ಲಿ ಮಿಂದೆದ್ದರು. ರಾಮನಾಮ ಆದರ್ಶಕ್ಕೆ ಸಾಕ್ಷಿಯಾದರು. ರಾಮ,ಸೀತೆ,ಲಕ್ಷ್ಮಣ ಕಾಡಿನಲ್ಲಿನ ವನವಾಸದ ದೃಶ್ಯ ಕಾವ್ಯದಲ್ಲಿ ಈ ಚಿಣ್ಣರು ಗೋಚರಿಸಿ ಜನಮನ ಸೆಳೆದರು. ಮನೋಜ್ಞ ಭಾವಭಂಗಿಯಲ್ಲಿ ಹಾವಭಾವ ಬೀರಿ ನೋಡುಗರ ಹೃನ್ಮನ ಗೆದ್ದರು.
ಅಖಿಲ ಮುಳವಾಡ, ರಾಜೇಶ್ವರಿ ಮುಳವಾಡ, ಸ್ವಾತಿಕ ಬೂದಿಹಾಳ, ಹೇಮಂತ ಒನಕ್ಯಾಳ, ಸಾನ್ವಿ ರಾಠೋಡ, ಲಕ್ಷ್ಮೀ ಕುಂದರಗಿ ಮೊದಲಾದ ಚಿಣ್ಣರು ರಾಮನಾಮದಲ್ಲಿ ವೇಷಭೂಷಣ ಧರಿಸಿ ಎಲ್ಲರ ಕಣ್ಮನ ತಮ್ಮತ್ತ ನೆಟ್ಟಿಸಿಕೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment

