Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅರಣ್ಯ ಕಾರ್ಮಿಕರಿಗೆ ಪಿಎಫ್, ವಿಮೆ ಒದಗಿಸಲು ಕ್ರಮ :ಮಹೇಶ

ಗ್ರಾಮೀಣ ಜನತೆ ಕಾನೂನಿನ ಜ್ಞಾನ ಹೊಂದಬೇಕು :ನ್ಯಾ. ನಾಗೇಶ

ನಿಷ್ಕಳಂಕ ಸೇವೆ ಸಲ್ಲಿಸುವುದು ಇತರರಿಗೆ ಮಾದರಿ :ಮಹಾಂತೇಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಸವನಾಡಿನೆಲ್ಲೆಡೆ ರಾಮೋತ್ಸವ ಸಂಭ್ರಮ
(ರಾಜ್ಯ ) ಜಿಲ್ಲೆ

ಬಸವನಾಡಿನೆಲ್ಲೆಡೆ ರಾಮೋತ್ಸವ ಸಂಭ್ರಮ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎಲ್ಲ ಗ್ರಾಮಗಳಲ್ಲಿರುವ ಹನುಮಂತ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಂಗವಾಗಿ ಸೋಮವಾರ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ರಾಮನ ಜಪ, ಘೋಷಣೆ ಕೇಳಿಬಂದಿತ್ತು. ಎಲ್ಲೆಡೆ ಪ್ರಸಾದ ವ್ಯವಸ್ಥೆ ಮಾಡಿದ್ದು ಕಂಡುಬಂದಿತ್ತು.
ಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಅಂಭಾಭವಾನಿ ದೇವಸ್ಥಾನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಸೌಹಾರ್ದ ಬ್ಯಾಂಕಿನ ನಿರ್ದೇಶಕ ಜಟ್ಟಿಂಗರಾಯ ಮಾಲಗಾರ ಮಾತನಾಡಿ, ಕಳೆದ ಐದು ಶತಮಾನಗಳ ಹೋರಾಟ ಮತ್ತು ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾನಗೊಂಡು ಪ್ರಾಣ ಪ್ರತಿಷ್ಠಾಪನೆವಾಗುತ್ತಿರುವುದು ಸಮಸ್ತ ಹಿಂದು ಬಾಂಧವರಿಗೆ ಸಂತಸ, ಸಂಭ್ರಮ ಉಂಟು ಮಾಡಿದೆ. ಅಸಂಖ್ಯಾತ ಹಿಂದು ಭಕ್ತರ ತ್ಯಾಗ-ಬಲಿದಾನಕ್ಕೆ ಇದೀಗ ತಕ್ಕ ಪ್ರತಿಫಲ ಸಿಕ್ಕಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಮ,ಸೀತೆ, ಲಕ್ಷ್ಮಣ, ಹನುಮಂತ ವೇಷಧಾರಿ ಮಕ್ಕಳು ಗಮನ ಸೆಳೆದರು.
ಈ ಸಂದರ್ಭದಲ್ಲಿ ರಾಜು ಬಿಜಾಪುರ, ರಮೇಶ ಮೊರೆ, ಬಸವರಾಜ ಬಿಜಾಪುರ, ಅಶೋಕ ಬಿಜಾಪುರ, ಅಂಬೋಜಿ ಬಿದರಕುಂದಿ, ಶಿವಾಜಿ ಜಗತಾಪ, ಅಂಬೋಜಿ ಪವಾರ, ಶಶಿ ದೇವಕರ, ತುಕರಾಮ ಪವಾರ, ಶಿವು ಚವ್ಹಾಣ, ಶ್ರೀಕಾಂತ ಹಿಂಗೋಲಿ, ಶಕುಂತಲಾ ಬಿಜಾಪುರ, ಪ್ರಿಯಾ ರಜಪೂತ, ಲಕ್ಷ್ಮೀ ಘಾಟಗೆ, ಸುರೇಖಾ ಹುಣಶ್ಯಾಳ, ಭಾಗ್ಯಶ್ರೀ ಬಿದರಕುಂದಿ, ತುಳಸಾಬಾಯಿ ಬಿಜಾಪುರ ಇತರರು ಇದ್ದರು.
ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀರಾಮ ನಗರ
ಪಟ್ಟಣದ ಶ್ರೀರಾಮ ನಗರದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಮೋತ್ಸವ ಸಂಭ್ರಮವನ್ನು ಮನತುಂಬಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಪರಶುರಾಮ ಜಮಖಂಡಿ, ರಾಜು ಬಂಡಿವಡ್ಡರ, ನಾಗರಾಜ ಪಲ್ಲಾಪೂರ, ಪರಶುರಾಮ ಕುರಾಡೆ, ಸಂದೀಪ ಪಾತ್ರೋಟಿ, ಶಿವಾನಂದ ಬಂಡಿವಡ್ಡರ, ಪ್ರಕಾಶ ಪಾತ್ರೋಟಿ, ಅಭಿಷೇಕ ಜಮಖಂಡಿ ಇತರರು ಇದ್ದರು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ವಿವೇಕ ಬ್ರಿಗೇಡ್ ಸಂಘಟನೆ & ಗೆಳೆಯರ ಬಳಗ
ಪಟ್ಟಣದ ಬಸವೇಶ್ವರ ದೇವಸ್ಥಾನದ ಎದುರಿಗೆ ಇರುವ ಕಲ್ಲೂರ ವಾಣಿಜ್ಯ ಸಂಕೀರ್ಣ ಮುಂಭಾಗ ವಿವೇಕ ಬ್ರಿಗೇಡ್ ಸಂಘಟನೆ ಹಾಗೂ ಗೆಳೆಯರ ಬಳಗದಿಂದ ರಾಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕರಸೇವಕರಾಗಿ ತೆರಳಿದ್ದ ಸಂಗನಗೌಡ ಚಿಕ್ಕೊಂಡ, ಮುತ್ತು ಚಿಕ್ಕೊಂಡ, ರಾಜಶೇಖರ ಕಲ್ಲೂರ, ಈರಪ್ಪ ಚಿಕ್ಕೊಂಡ, ಸಂಗಮೇಶ ನಾಯ್ಕೋಡಿ, ಮಹಾದೇವ ಬಿರಾದಾರ, ಮಹಾದೇವ ಹೂಗಾರ ಅವರನ್ನು ಸನ್ಮಾನಿಸಲಾಯಿತು.
ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಬಿ.ಕೆ.ಕಲ್ಲೂರ, ಭರತು ಅಗರವಾಲ, ಬಸವರಾಜ ಗೊಳಸಂಗಿ, ಸಂಗಣ್ಣ ಕಲ್ಲೂರ, ಶೇಖರ ಗೊಳಸಂಗಿ, ಅಶೋಕ ಕಲ್ಲೂರ, ಬಬಲು ಅಗರವಾಲ, ಸಿ.ಎಸ್.ಪಾಟೀಲ, ಸಂಕನಗೌಡ ಪಾಟೀಲ, ಶಿವಾನಂದ ತೋಳನೂರ, ಧನರಾಜ ಪತ್ತಾರ, ಮುತ್ತು ಪತ್ತಾರ, ಆನಂದ ಪಿ., ಶಂಕರ ಮ್ಯಾಗೇರಿ, ಮಹೇಂದ್ರ ಕುಮಾವತ ಇತರರು ಇದ್ದರು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪಟ್ಟಣದ ನಂದಿ ಬಡಾವಣೆ, ಗಣಪತಿ ವೃತ್ತ, ಹಳೆ ಪಲ್ಲೆ ಕಟ್ಟಿ, ಹೃದಯ ಭಾಗದಲ್ಲಿರುವ ಹನುಮಂತ ದೇವಸ್ಥಾನ, ತೆಲಗಿ ರಸ್ತೆಯಲ್ಲಿರುವ ಹನುಮಂತನ ದೇವಸ್ಥಾನ, ಅರಳಿಕಟ್ಟಿ ಹತ್ತಿರದ ಹನುಮಂತ ದೇವಸ್ಥಾನ ಸೇರಿದಂತೆ ವಿವಿಧೆಡೆ ರಾಮೋತ್ಸವವನ್ನು ಸಂಭ್ರಮ ಸಡಗರದಿಂದ ಭಕ್ತರು ಆಚರಿಸಿ ಶ್ರೀರಾಮನಿಗೆ ಭಕ್ತಿಯನ್ನು ಸಮರ್ಪಿಸಿದರು.
ತಾಲೂಕಿನ ನಂದಿಹಾಳ ಪಿಯು ಗ್ರಾಮದಲ್ಲಿ ಹೋಮ-ಹವನ ಪೂಜೆ ನೆರವೇರಿಸಲಾಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅರಣ್ಯ ಕಾರ್ಮಿಕರಿಗೆ ಪಿಎಫ್, ವಿಮೆ ಒದಗಿಸಲು ಕ್ರಮ :ಮಹೇಶ

ಗ್ರಾಮೀಣ ಜನತೆ ಕಾನೂನಿನ ಜ್ಞಾನ ಹೊಂದಬೇಕು :ನ್ಯಾ. ನಾಗೇಶ

ನಿಷ್ಕಳಂಕ ಸೇವೆ ಸಲ್ಲಿಸುವುದು ಇತರರಿಗೆ ಮಾದರಿ :ಮಹಾಂತೇಶ

ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಚನ್ನಪ್ಪ ಕಟ್ಟಿ ಕೊಡುಗೆ ಅನನ್ಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅರಣ್ಯ ಕಾರ್ಮಿಕರಿಗೆ ಪಿಎಫ್, ವಿಮೆ ಒದಗಿಸಲು ಕ್ರಮ :ಮಹೇಶ
    In (ರಾಜ್ಯ ) ಜಿಲ್ಲೆ
  • ಗ್ರಾಮೀಣ ಜನತೆ ಕಾನೂನಿನ ಜ್ಞಾನ ಹೊಂದಬೇಕು :ನ್ಯಾ. ನಾಗೇಶ
    In (ರಾಜ್ಯ ) ಜಿಲ್ಲೆ
  • ನಿಷ್ಕಳಂಕ ಸೇವೆ ಸಲ್ಲಿಸುವುದು ಇತರರಿಗೆ ಮಾದರಿ :ಮಹಾಂತೇಶ
    In (ರಾಜ್ಯ ) ಜಿಲ್ಲೆ
  • ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಚನ್ನಪ್ಪ ಕಟ್ಟಿ ಕೊಡುಗೆ ಅನನ್ಯ
    In (ರಾಜ್ಯ ) ಜಿಲ್ಲೆ
  • ಮೌಲ್ಯಮಾಪನ ಎಡವಟ್ಟು ಪಾಸ್‌ ಆಗಿದ್ದ ವಿದ್ಯಾರ್ಥಿನಿ ಫೇಲ್‌!
    In (ರಾಜ್ಯ ) ಜಿಲ್ಲೆ
  • ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳು ಬೇಗ ಪೂರ್ಣಗೊಳಿಸಲು ಸೂಚನೆ
    In (ರಾಜ್ಯ ) ಜಿಲ್ಲೆ
  • ಹಳ್ಳಗಳಿಗೆ ನೀರು ತುಂಬಿಸುವ ಯೋಜನೆ ಇಡೀ ದೇಶಕ್ಕೆ ಮಾದರಿ
    In (ರಾಜ್ಯ ) ಜಿಲ್ಲೆ
  • ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಸ್ಕೂಲ್ ಗೆ ಮೊದಲ ಮೂರು ರ‌್ಯಾಂಕ್
    In (ರಾಜ್ಯ ) ಜಿಲ್ಲೆ
  • ಬರಿದಾಗುತ್ತಿರುವ ಕೃಷ್ಣಾ ನದಿ :ಕೃಷಿಗೆ ತೀವ್ರ ಸಂಕಷ್ಟ
    In (ರಾಜ್ಯ ) ಜಿಲ್ಲೆ
  • ಭಕ್ತಿಸಾಗರದಲ್ಲಿ ತೇಲಿದ ಚಿಕ್ಕಪಡಸಲಗಿ ಭಕ್ತವೃಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.