ವಿಜಯಪುರ: ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ, ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರ ನಿರ್ದೇಶನದಂತೆ ಅತ್ಯಂತ ವಿಜೃಂಭಣೆಯಿಂದ ರಾಮೋತ್ಸವ ಜರುಗಿತು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ, ಬೆಳಿಗ್ಗೆ ಸಿದ್ದೇಶ್ವರ ದೇವಸ್ಥಾನದಲ್ಲಿ ಹೋಮ, ಹವನ ಮತ್ತು ವಿಶೇಷ ಪೂಜೆ ನೇರವೇರಿಸಿ, ನಾಡಿಗೆ ಸು:ಖ, ಶಾಂತಿ, ಸಮೃದ್ಧಿ ಕರುಣಿಸಲೆಂದು ಪ್ರಾರ್ಥಿಸಲಾಯಿತು. ನಂತರ ಸಿಹಿ ವಿತರಿಸಿ, ಸಂಭ್ರಮಿಸಲಾಯಿತು.
ಸಂಜೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ಮತ್ತು ಸಿದ್ಧಸಿರಿ ಸೌಹಾರ್ದದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ಅವರ ನೇತೃತ್ವದಲ್ಲಿ, ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ವಿಶೇಷ ದೀಪೋತ್ಸವದಲ್ಲಿ, 1,200 ದೀಪಗಳಲ್ಲಿ ಅರಳಿದ ಶ್ರೀರಾಮಚಂದ್ರ ರೂಪಕ ನೆರೆದ ಸಾವಿರಾರು ಶ್ರೀರಾಮ ಭಕ್ತರ ಕಣ್ಮನ ಸೆಳೆಯಿತು.
ನಂತರ ನಡೆದ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ ಉತ್ಸವದ ಮೆರಗು ಹೆಚ್ಚಿಸಿತು.
ಎಲ್ಲಿ ನೋಡಿದರಲ್ಲಿ ಭಗವಾ ಧ್ವಜಗಳು, ಶ್ರೀರಾಮ, ಹನುಮಾನ ಧ್ವಜಗಳು ಕಂಡು ಬಂದವು. ಜೈ ಶ್ರೀರಾಮ, ಬೋಲೋ ಭಾರತ್ ಮಾತಾ ಕೀ ಜೈ, ಜೈ ಮೋದಿ, ಜೈ ಬಿ.ಆರ್.ಪಿ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಹಾಲಿ, ಮಾಜಿ ಸದಸ್ಯರು, ಮುಖಂಡರುಗಳು, ಹಿತೈಷಿಗಳು ಅಭಿಮಾನಿಗಳು, ತಾಯಂದಿರು, ಸಿದ್ದೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿಯ ಪದಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿ, ರಾಮೋತ್ಸವಕ್ಕೆ ಮೆರಗು ತಂದರು.
Subscribe to Updates
Get the latest creative news from FooBar about art, design and business.
Related Posts
Add A Comment

