Author: editor.udayarashmi@gmail.com

ಜನಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಡಿಸಿ ಟಿ.ಭೂಬಾಲನ್ ಚಾಲನೆ ವಿಜಯಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಜನಪ್ರಿಯ ಹಾಗೂ ಜನಪರ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಮತ್ತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ- ಜಾನಪದ ಕಲಾ ತಂಡಗಳ ಪ್ರದರ್ಶನ ಪರಿಣಾಮಕಾರಿ ಸಂವಹನವಾಗಿವೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ವಾದ್ಯ ನುಡಿಸುವ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕ್ಷೇತ್ರ ಪ್ರಚಾರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ,ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವ ನಿಧಿ ಯೋಜನೆಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದ್ದು, ಅರ್ಹ ನೈಜ ಫಲಾನುಭವಿಗಳಿಗೆ ಅವರ ಹಕ್ಕನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ ಯೋಜನೆಗಳನ್ನು ಜನರಲ್ಲಿಗೆ…

Read More

ಇಂಡಿ: ಮಕ್ಕಳಿಗೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೊಡಿಸಿ, ಸಾಧನೆ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡಲು ನಾಗರಿಕ ಸಮಾಜದ ಪ್ರತಿಯೊಬ್ಬರು ಮುಂದಾಗಬೇಕು ಎಂದು ಯುವ ಮುಖಂಡ ಪರಶುರಾಮ ಹೊಸಮನಿ ಹೇಳಿದರು.ಅವರು ಮಂಗಳವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯಿತಿ ವಿಜಯಪುರ,ತಾಲೂಕು ಪಂಚಾಯತ ಕಾರ್ಯಾಲಯ ಇಂಡಿ, ಸಪ್ತಗಿರಿ ಫೌಂಡೇಶನ್ ವಿಜಯಪುರ ಹಾಗೂ ಗ್ರಾಮ ಪಂಚಾಯಿತಿ ಹಿರೇರೂಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಡಾ.ಬಿ ಆರ್ ಅಂಬೇಡ್ಕರ್ ಅವರ ಜೀವನ ಮತ್ತು ವಿಚಾರಧಾರೆಯ ಕಾನೂನು ಅರಿವು ಮೂಡಿಸುವ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನಾದರ್ಶಗಳನ್ನು ಮಕ್ಕಳು ಬಾಲ್ಯದಿಂದಲೇ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನಾದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದರು.ಯುವ ಮುಖಂಡ ಸಂತೋಷ ಕೋಟಗೊಂಡ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವಿ ವೈ…

Read More

ಇಂಡಿ: ಪಟ್ಟಣದ ಪಟ್ಟಣದ ಆಪಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ಶ್ರೀರಾಮ, ಲಕ್ಷ್ಮಣ, ಸೀತೆ, ರಾವಣ ಹನುಮಂತ ವೇಷ ಭೂಷಣ ತೊಡಿಸಿ ರಾಮಾಯಣದ ಕಿರುನಾಟಕ, ನೃತ್ಯ, ಕಥೆ, ಕವನ ಪ್ರಬಂಧ, ಹೀಗೆ ಅನೇಕ ಚಟುವಟಿಕೆಗಳನ್ನು ಮಾಡಿಸಲಾಯಿತುಶ್ರೀ ರಾಮನ ಫೋಟೋ ಪೂಜೆ ಮಾಡಿ ಮಕ್ಕಳಿಗೆ ಶ್ರೀರಾಮನಲ್ಲಿ ಇರುವ ಮೌಲ್ಯಗಳ ಕುರಿತು ತಿಳಿಸಲಾಯಿತು.ಎಸ್.ಆರ್. ಬಗಲೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ದಿನಮಾನದಲ್ಲಿ ಮಕ್ಕಳಿಗೆ ನೈತಿಕ ಗುಣಮಟ್ಟ ಕಡಿಮೆ ಆಗುತ್ತಿದ್ದು ಅವರಲ್ಲಿ ತಂದೆ, ತಾಯಿ ಗುರು, ಹಿರಿಯರನ್ನು ಪೂಜಿಸುವ ಗುಣ ಬರಬೇಕಾದರೆ ಹೀಗೆ ಅನೇಕ ಆಚರಣೆಗಳು ಮಾಡಿ ತಿಳಿಸಬೇಕು ಎಂದರು.ಚಿದಾನಂದ ಬಿರಾದಾರ ಮಾತನಾಡಿದರು.ಶಹನವಾಜ ಚಡಚಣಕರ ಉಪಸ್ಥಿತರಿದ್ದರು.ವಿಜಯಕುಮಾರ ಇಮ್ಮನದ ನಿರೂಪಿಸಿದರು, ಸಲ್ಮಾ ಚಿಕ್ಕೇರಿ ವಂದಿಸಿದರು.

Read More

: ಫೌಂಡೇಶನ್ ಗಳು ಮತ್ತು ಸಂಘ-ಸಂಸ್ಥೆಗಳು ಸದಾ ಸಮಾಜಮುಖಿ ಕಾರ್ಯಗಳತ್ತ ಮುನ್ನುಗ್ಗುತ್ತಿರಬೇಕು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಹೇಳಿದರು.ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿರುವ ಶ್ರೀ ಖಾಸ್ಗತೇಶ್ವರ ಮಠದಲ್ಲಿ ತ್ರಿವಿಧ ದಾಸೋಹಿ ಲಿಂ.ಡಾ.ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆ, ದಿ.ಶರಣು ಬೂದಿಹಾಳ ಫೌಂಡೇಶನ್ ಇವರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ದೇಶದಲ್ಲಿ ಕೆಲವು ಫೌಂಡೇಶನ್‌ಗಳು ಸಮಾಜ ಸುಧಾರಿಸಲು ಸಾಕಷ್ಟು ಶ್ರಮಿಸುತ್ತಿವೆ. ಸಧ್ಯದ ಪರೀಸ್ಥಿತಿಯಲ್ಲಿ ದೇಶದಲ್ಲಿ ಬದಲಾವಣೆ ತರಲು ಅವುಗಳು ಪಾತ್ರ ಬಹಳ ಪ್ರಮುಖವಾಗಿದೆ ಎಂದರು.ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭೂಮಿಯಲ್ಲಿ ಮಾನವರ ಪಯಣ ದೇಹದಲ್ಲಿ ಆತ್ಮವಿರುವವರೆಗೆ ಮಾತ್ರ. ಉಸಿರು ದೇಹವನ್ನು ಬಿಟ್ಟ ನಂತರವೂ ನಮ್ಮ ಹೆಸರು ಶಾಶ್ವತವಾಗಿ ಇರಬೇಕಾದರೆ ತನಗಾಗಿ ಬದುಕದೇ ಇತರರಿಗಾಗಿ ಬದುಕಬೇಕು. ಆ ರೀತಿ ಬದುಕಿದವರು ದಿ.ಶರಣು ಬೂದಿಹಾಳಮಠ ಅವರು ಎಂದರು.ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ…

Read More

ಮುದ್ದೇಬಿಹಾಳ: ಗಣರಾಜ್ಯೋತ್ಸವದ ಪ್ರಯುಕ್ತ ಜ.೨೬ ರಂದು ಬೆಳಿಗ್ಗೆ ೧೦ಗಂಟೆಯಿಂದ ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಬಸವ ಅಂತರಾಷ್ಟ್ರೀಯ ಶಾಲೆಯಲ್ಲಿ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ವಿಜಯಪುರ, ಬಸವ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಇನ್ನರ್ ವೀಲ್ ಕ್ಲಬ್ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಕ್ತದಾನ ಮಾಡುವ ಫಲಾನುಭವಿಗಳು ಶಿಬಿರದಲ್ಲಿ ಹೆಸರು ನೊಂದಾಯಿಸಲು ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು. ೭೨೫೯೧೩೮೨೧೦, ೯೪೮೧೬೩೦೯೫೫, ೯೧೧೪೬೪೪೩೪, ೮೧೪೭೧ ೨೮೯೯೭, ೯೬೨೦೭೮೩೭೮೮

Read More

ವಿಜಯಪುರ: ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರು ಪ್ರಧಾನಿ ಮೋದಿ ಅವರ ಉಪವಾಸವನ್ನು ಲೇವಡಿ ಮಾಡಿರುವುದು ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರ ರಾಮ ಮಂದಿರ ಕುರಿತ ಹೇಳಿಕೆಯನ್ನು ಬಿಜೆಪಿ ಮುಖಂಡ ಡಾ.ಗೌತಮ್ ಆರ್.ಚೌಧರಿ ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಮಲಲ್ಲಾ ಪ್ರಾಣಪ್ರತಿಷ್ಠೆಯು ಅಯೋಧ್ಯೆಯಲ್ಲಿ ಸರಾಗವಾಗಿ ಸಂಪನ್ನವಾಗುವ ಮೂಲಕ ಕೋಟಿ ಕೋಟಿ ಹಿಂದೂಗಳ ಕನಸು ನೆರವೇರಿದೆ. ಇದನ್ನು ಸಂಭ್ರಮಿಸುವುದು ಬಿಟ್ಟು, ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರು ಮೋದಿ ಅವರ 11ದಿನದ ಉಪವಾಸ ವೃತವನ್ನು ಲೇವಡಿ ಮಾಡಿರುವುದು ಖಂಡನೀಯ. ಪ್ರಧಾನಿ ಮೋದಿಯವರು ಉಪವಾಸ ಮಾಡಿರುವುದು ಡೌಟ್ ಅಂತ ಹೇಳಿದ್ದಿರಲ್ಲಾ, ನಿಮ್ಮ ಪಕ್ಷದವರು ಯಾಕೆ ಅಯೋಧ್ಯೆ ರಾಮಮಂದಿರಕ್ಕೆ ಹೋಗಿ ಮೋದಿ ಏನು ಮಾಡುತ್ತಿದ್ದಾರೆ ಪರಿಶೀಲಿಸಲಿಲ್ಲ. ರಾಮಮಂದಿರದಲ್ಲಿ ರಾಜಕೀಯ ತರುವುದು ನಿಮಗೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಶೋಭೆ ತರುವುದಿಲ್ಲ. ಸಾಧಿಸುವ ಛಲ ಹಾಗೂ ಧೃಡ ಸಂಕಲ್ಪ ಇದ್ದರೆ, 11 ದಿನ ಉಪವಾಸ ಮಾಡುವುದು ಅಸಾಧ್ಯವೇನಲ್ಲ ಎಂಬುದು…

Read More

ಆದಿಶೇಷ ಸಂಸ್ಥಾನ ಹಿರೇಮಠದ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ಸಿಂದಗಿ: ಧರ್ಮಕ್ಷೇತ್ರಗಳು ಬೆಳೆದುಕೊಂಡು ಬಂದರೆ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಬಾಳೆಹೊನ್ನೂರು ರಂಬಾಪೂರಿ ಪೀಠದ ಶ್ರೀಮದ್ರಂಬಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರು ಹೇಳಿದರು.ಮಂಗಳವಾರದಂದು ಪಟ್ಟಣದ ಬಸ್‌ಡಿಪೋ ಬಳಿಯಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ ೨೮ನೆಯ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ಹಾಗೂ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಮಹಾ ಮಂಗಲೋತ್ಸವ ಕಾರ್ಯಕ್ರಮದ ದಿವು ಸಾನಿಧ್ಯ ವಹಿಸಿ ಮಾತನಾಡಿದ ಅವರು, ಧರ್ಮ ಎಂದರೆ ಹೇಳುವಂತಹದಲ್ಲ, ನಡೆದು ತೊರಿಸುವಂತಹದ್ದು ನಿಜವಾದ ಧರ್ಮ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಂಸ್ಕೃತಿ ಭಾರತ ದೇಶದ್ದು. ಈ ದೇಶದಲ್ಲಿ ಹಲವಾರು ಧರ್ಮ ಮತ್ತು ಆಚರಣೆಗಳು ಬೆಳೆದುಕೊಂಡು ಬಂದಿವೆ. ಧರ್ಮ ಬೇರೆ ಬೇರೆಯಾದರೂ ಆಚರಣೆ ಬೇರೆಯಾದರೂ ಎಲ್ಲ ಧರ್ಮಗಳ ಕೊನೆಯ ಗುರಿ ಮಾನವನ ಕಲ್ಯಾಣವನ್ನು ಬಯಸುತ್ತದೆ. ತಾಲೂಕಿನ ಜನತೆಯಲ್ಲಿ ಮಾನವ ಧರ್ಮ ಹಿರಿದಾಗಿದ್ದು, ಎಲ್ಲವನ್ನೂ ಗಮನಿಸಿ ಸಿಂದಗಿ ನಗರವು ಉತ್ತಮ ಧಾರ್ಮಿಕ ವಾತವರಣವನ್ನುಂಟು ಮಾಡುವ…

Read More

ದೇವರಹಿಪ್ಪರಗಿ: ಶೋಷಿತರ ಜಾಗೃತಿ ಸಮಾವೇಶದ ಅಂಗವಾಗಿ ವಿವಿಧ ಸಮುದಾಯಗಳ ಪ್ರಮುಖರ ಪೂರ್ವಭಾವಿ ಸಭೆ ಜರುಗಿತು.ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಧುರೀಣ ಎಸ್.ಎಮ್.ಪಾಟೀಲ(ಗಣಿಯಾರ) ಮಾತನಾಡಿ, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟಗಳ ಅಡಿಯಲ್ಲಿ ಚಿತ್ರದುರ್ಗದಲ್ಲಿ ಇದೇ ದಿ:೨೮ ಭಾನುವಾರದಂದು ಏರ್ಪಡಿಸಲಾಗಿರುವ ಸಮಾವೇಶದ ಕುರಿತು ಮಾಹಿತಿ ನೀಡಿ, ತಾಲ್ಲೂಕಿನ ಶೋಷಿತ ಸಮುದಾಯಗಳ ಪ್ರಮುಖರು ಅದರಲ್ಲೂ ದಲಿತ, ಹಿಂದುಳಿದ, ಅಲೆಮಾರಿ, ಅರೆಅಲೆಮಾರಿ, ಆದಿವಾಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.ಕಾಂಗ್ರೆಸ್ ಪಕ್ಷದ ಪ್ರಮುಖರಾದ ಗೌರಮ್ಮ ಮುತ್ತತ್ತಿ, ಸೋಮನಾಥ ಕಳ್ಳಿಮನಿ, ರಾಜಶ್ರೀ ಯರನಾಳ, ನಾಗರಾಜು ಲಂಬು, ಪ್ರಕಾಶ ಗುಡಿಮನಿ ಮಾತನಾಡಿದರು.ಸಭೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ ಪಾಟೀಲ, ಜಕ್ಕಪ್ಪ ಅಡವಿ, ರಾಜೇಶ ತೊರವಿ, ದೇವಾನಂದ ಲಚ್ಯಾಣ, ರಾಜಕುಮಾರ ಸಿಂದಗೇರಿ, ಮಹೇಶ ಮುರಾಳ, ಬಸವರಾಜ ಇಂಗಳಗಿ, ಶಿವು ವಾಲೀಕಾರ, ಹೂಯೋಗಿ ತಳ್ಳೋಳ್ಳಿ, ಭೀರು ಹಳ್ಳಿ,…

Read More

ದೇವರಹಿಪ್ಪರಗಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪಡಗಾನೂರ ಗ್ರಾಮದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಮೆರವಣಿಗೆ ಮಾಡಲಾಯಿತು.ತಾಲ್ಲೂಕಿನ ಪಡಗಾನೂರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಯಿತು. ನಂತರ ಶ್ರೀರಾಮನ ಭಾವಚಿತ್ರಕ್ಕೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ನಂತರ ಟ್ರಾö್ಯಕ್ಟರ್ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿಸಲಾಯಿತು.ಗ್ರಾಮ ಪಂಚಾಯಿತಿ ಸದಸ್ಯ ಭೀರು ಹಳ್ಳಿ, ಆಕಾಶ ಕಬ್ಬಿನ, ಸಿದ್ಧು ಪಾಟೀಲ, ಪ್ರವೀಣ ಕಬ್ಬಿನ, ಸಿದ್ಧು ಹದರಿ, ಸಂತೋಷ ಧೋತ್ರೆ, ವಿನಾಯಕ ಹಿರೇಮಠ, ಪ್ರದೀಪ್ ಬಾಗೇವಾಡಿ, ಸೋಮು ಹುಗ್ಗಿ, ಸಂಗಮೇಶ ವಡಗೇರಿ ಭಾಗವಹಿಸಿದ್ದರು.

Read More

ದೇವರಹಿಪ್ಪರಗಿ: ಜೀವನದಲ್ಲಿ ಯಶಸ್ಸಿನ ಸಾಧನೆಗೆ ಮುಂದೆ ಗುರಿ, ಹಿಂದೆ ಗುರು ಇರಬೇಕು ಎಂದು ಕುಮಸಗಿ ಶ್ರೀಕಲ್ಲಾಲಿಂಗೇಶ್ವರ ಮಠದ ಶಿವಾನಂದ ಶ್ರೀಗಳು ಹೇಳಿದರು.ತಾಲ್ಲೂಕಿನ ಗಂಗನಳ್ಳಿ ಗ್ರಾಮದಲ್ಲಿ ಮಂಗಳವಾರ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಯಂತ್ಯುತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.೧೨ನೇ ಶತಮಾನದ ವಚನ ಚಳುವಳಿಯು ಧಾರ್ಮಿಕ ಚಳುವಳಿಯಂತೆ ಕಂಡು ಬಂದರು ಅದೊಂದು ಜಾತಿ ಕುಲಗಳ ಎಲ್ಲೆ ಮೀರಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹಾ ಕ್ರಾಂತಿಯಾಗಿ ಇತಿಹಾಸದಲ್ಲಿ ಗುರುತಿಸಲ್ಪಟ್ಟಿದೆ. ಹಾಗೆಯೇ ಈ ಚಾರಿತ್ರಿಕ ಮಹಾ ಆಂದೋಲನದ ರೂವಾರಿ ಅಣ್ಣ ಬಸವಣ್ಣನೊಂದಿಗೆ ನೂರಾರು ಶರಣರು ಹೆಗಲಿಗೆ ಹೆಗಲಾಗಿ ದುಡಿದರು ಅಂತಹ ಶರಣರ ಪೈಕಿ ಅಂಬಿಗರ ಚೌಡಯ್ಯನವರು ಪ್ರಮುಖರು ಎಂದರು.ಕಾರ್ಯಕ್ರಮದಲ್ಲಿ ಸುರೇಶಗೌಡ ಪಾಟೀಲ(ಸಾಸನೂರ), ಮಲ್ಲಪ್ಪ ದುದ್ದಗಿ, ದಯಾನಂದ ದೊಡಮನಿ, ಮಲ್ಲಪ್ಪ ಬೇನೂರ, ರಾಮ ಸೊನ್ನಳ್ಳಿ, ಪರಶುರಾಮ ಟಕ್ಕಳಕಿ, ಸಿದ್ರಾಮಯ್ಯ ಮಠ, ಮಲ್ಲನಗೌಡ ಪಾಟೀಲ, ಸಂಘದ ಅಧ್ಯಕ್ಷ ಚಿದಾನಂದ ಕನ್ನೋಳ್ಳಿ, ಈರಣ್ಣ ಶಾಸ್ತ್ರಿ ( ಚಿಕ್ಕರೂಗಿ), ಸದಾಶಿವ ದೇಶಪಾಂಡೆ, ಬಸವರಾಜ ಈಶ್ವರಪ್ಪಗೋಳ, ರಾಜಶೇಖರ ನಾಯಕ ಈರಣ್ಣ…

Read More