: ಫೌಂಡೇಶನ್ ಗಳು ಮತ್ತು ಸಂಘ-ಸಂಸ್ಥೆಗಳು ಸದಾ ಸಮಾಜಮುಖಿ ಕಾರ್ಯಗಳತ್ತ ಮುನ್ನುಗ್ಗುತ್ತಿರಬೇಕು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಹೇಳಿದರು.
ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿರುವ ಶ್ರೀ ಖಾಸ್ಗತೇಶ್ವರ ಮಠದಲ್ಲಿ ತ್ರಿವಿಧ ದಾಸೋಹಿ ಲಿಂ.ಡಾ.ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆ, ದಿ.ಶರಣು ಬೂದಿಹಾಳ ಫೌಂಡೇಶನ್ ಇವರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಕೆಲವು ಫೌಂಡೇಶನ್‌ಗಳು ಸಮಾಜ ಸುಧಾರಿಸಲು ಸಾಕಷ್ಟು ಶ್ರಮಿಸುತ್ತಿವೆ. ಸಧ್ಯದ ಪರೀಸ್ಥಿತಿಯಲ್ಲಿ ದೇಶದಲ್ಲಿ ಬದಲಾವಣೆ ತರಲು ಅವುಗಳು ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭೂಮಿಯಲ್ಲಿ ಮಾನವರ ಪಯಣ ದೇಹದಲ್ಲಿ ಆತ್ಮವಿರುವವರೆಗೆ ಮಾತ್ರ. ಉಸಿರು ದೇಹವನ್ನು ಬಿಟ್ಟ ನಂತರವೂ ನಮ್ಮ ಹೆಸರು ಶಾಶ್ವತವಾಗಿ ಇರಬೇಕಾದರೆ ತನಗಾಗಿ ಬದುಕದೇ ಇತರರಿಗಾಗಿ ಬದುಕಬೇಕು. ಆ ರೀತಿ ಬದುಕಿದವರು ದಿ.ಶರಣು ಬೂದಿಹಾಳಮಠ ಅವರು ಎಂದರು.
ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದ ಬಂಧುಗಳ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಜಂಗಮ ಸಮಾಜದ ಪ್ರಮುಖರಾದ ರಾಚಯ್ಯ ಹಿರೇಮಠ, ರಾಜ್ಯ ಪ್ರಶಸ್ತಿ ಪಡೆದ ಯುವ ಕಾಂಗ್ರೇಸ್ ಅಧ್ಯಕ್ಷ ರಫೀಕ ಶಿರೋಳ, ಬಾಗವಾನ ಬ್ಯಾಂಕ್ ನ ನೂತನ ಅಧ್ಯಕ್ಷ ಪಿಂಟು ಸಾಲಿಮನಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಪಿಂಟು ಸಾಲಿಮನಿ ಮಾತನಾಡಿದರು.
ಖಾಸ್ಗತೇಶ್ವರ ಮಠದ ಸಂಗಯ್ಯ ವಿರಕ್ತಮಠ, ಮಹಾದೇವ ಶಾಸ್ತ್ರಿ, ಕವಡಿಮಟ್ಟಿಯ ಬಸವಪ್ರಭು ಹಿರೇಮಠ, ಸಂಗಯ್ಯ ಶಾಸ್ತ್ರಿ, ಲೊಟಗೇರಿಯ ಗುರುಮೂರ್ತಿ ದೇವರು ಸಾನಿಧ್ಯ ವಹಿಸಿದ್ದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಪ್ರ.ಕಾರ್ಯದರ್ಶಿ ಮಲ್ಲಿಕಾರ್ಜುನ ಮಲ್ಲಿಕಾರ್ಜುನ ಮದರಿ, ಸಾಧನಾ ಮಹಿಳಾ ಒಕ್ಕೂಟದ ಶಶಿಕಲಾ ಕೆಂಧೂಳಿ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಹಿರಿಯ ಸಾಹಿತಿ ಬಸವರಾಜ ನಾಲತವಾಡ, ಫೌಂಡೇಶನ್ ನ ಪ್ರಮುಖರಾದ ಪ್ರಭು ದೇಸಾಯಿ(ಮನಿಕಂಠ), ನಿಕೇಶ ಓಸ್ವಾಲ, ಹುಸೇನ ನಾಗೂರ, ಆಸೀಪ ನಾಯ್ಕೋಡಿ, ಶ್ರೀಕಾಂತ ಹಿರೇಮಠ ಸೇರಿದಂತೆ ಸೇರಿದಂತೆ ಮತ್ತೀತರರು ಇದ್ದರು.
ಶಿಕ್ಷಕ ಟಿ.ಡಿ.ಲಮಾಣಿ ನಿರ್ವಹಿಸಿದರು. ಹೋರಾಟಗಾರ ಬಸವರಾಜ ನಂದಿಕೇಶ್ವರಮಠ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

