ದೇವರಹಿಪ್ಪರಗಿ: ಶೋಷಿತರ ಜಾಗೃತಿ ಸಮಾವೇಶದ ಅಂಗವಾಗಿ ವಿವಿಧ ಸಮುದಾಯಗಳ ಪ್ರಮುಖರ ಪೂರ್ವಭಾವಿ ಸಭೆ ಜರುಗಿತು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಧುರೀಣ ಎಸ್.ಎಮ್.ಪಾಟೀಲ(ಗಣಿಯಾರ) ಮಾತನಾಡಿ, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟಗಳ ಅಡಿಯಲ್ಲಿ ಚಿತ್ರದುರ್ಗದಲ್ಲಿ ಇದೇ ದಿ:೨೮ ಭಾನುವಾರದಂದು ಏರ್ಪಡಿಸಲಾಗಿರುವ ಸಮಾವೇಶದ ಕುರಿತು ಮಾಹಿತಿ ನೀಡಿ, ತಾಲ್ಲೂಕಿನ ಶೋಷಿತ ಸಮುದಾಯಗಳ ಪ್ರಮುಖರು ಅದರಲ್ಲೂ ದಲಿತ, ಹಿಂದುಳಿದ, ಅಲೆಮಾರಿ, ಅರೆಅಲೆಮಾರಿ, ಆದಿವಾಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷದ ಪ್ರಮುಖರಾದ ಗೌರಮ್ಮ ಮುತ್ತತ್ತಿ, ಸೋಮನಾಥ ಕಳ್ಳಿಮನಿ, ರಾಜಶ್ರೀ ಯರನಾಳ, ನಾಗರಾಜು ಲಂಬು, ಪ್ರಕಾಶ ಗುಡಿಮನಿ ಮಾತನಾಡಿದರು.
ಸಭೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ ಪಾಟೀಲ, ಜಕ್ಕಪ್ಪ ಅಡವಿ, ರಾಜೇಶ ತೊರವಿ, ದೇವಾನಂದ ಲಚ್ಯಾಣ, ರಾಜಕುಮಾರ ಸಿಂದಗೇರಿ, ಮಹೇಶ ಮುರಾಳ, ಬಸವರಾಜ ಇಂಗಳಗಿ, ಶಿವು ವಾಲೀಕಾರ, ಹೂಯೋಗಿ ತಳ್ಳೋಳ್ಳಿ, ಭೀರು ಹಳ್ಳಿ, ರಾಜು ರಾಠೋಡ, ಶರಣು ನಾಟೀಕಾರ, ಅಪ್ಪು ಮುಲ್ಲಾ, ರಾಘವೇಂದ್ರ ಪಡಗಾನೂರ, ರಾಘವೇಂದ್ರ ಗುಡಿಮನಿ, ಇಕ್ಬಾಲ್ ಬಿಜಾಪೂರ, ರಾವುತ ಮಾಸ್ತರ ತಳಕೇರಿ ಸೇರಿದಂತೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

