ಆದಿಶೇಷ ಸಂಸ್ಥಾನ ಹಿರೇಮಠದ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ
ಸಿಂದಗಿ: ಧರ್ಮಕ್ಷೇತ್ರಗಳು ಬೆಳೆದುಕೊಂಡು ಬಂದರೆ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಬಾಳೆಹೊನ್ನೂರು ರಂಬಾಪೂರಿ ಪೀಠದ ಶ್ರೀಮದ್ರಂಬಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರು ಹೇಳಿದರು.
ಮಂಗಳವಾರದಂದು ಪಟ್ಟಣದ ಬಸ್‌ಡಿಪೋ ಬಳಿಯಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ ೨೮ನೆಯ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ಹಾಗೂ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಮಹಾ ಮಂಗಲೋತ್ಸವ ಕಾರ್ಯಕ್ರಮದ ದಿವು ಸಾನಿಧ್ಯ ವಹಿಸಿ ಮಾತನಾಡಿದ ಅವರು, ಧರ್ಮ ಎಂದರೆ ಹೇಳುವಂತಹದಲ್ಲ, ನಡೆದು ತೊರಿಸುವಂತಹದ್ದು ನಿಜವಾದ ಧರ್ಮ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಂಸ್ಕೃತಿ ಭಾರತ ದೇಶದ್ದು. ಈ ದೇಶದಲ್ಲಿ ಹಲವಾರು ಧರ್ಮ ಮತ್ತು ಆಚರಣೆಗಳು ಬೆಳೆದುಕೊಂಡು ಬಂದಿವೆ. ಧರ್ಮ ಬೇರೆ ಬೇರೆಯಾದರೂ ಆಚರಣೆ ಬೇರೆಯಾದರೂ ಎಲ್ಲ ಧರ್ಮಗಳ ಕೊನೆಯ ಗುರಿ ಮಾನವನ ಕಲ್ಯಾಣವನ್ನು ಬಯಸುತ್ತದೆ. ತಾಲೂಕಿನ ಜನತೆಯಲ್ಲಿ ಮಾನವ ಧರ್ಮ ಹಿರಿದಾಗಿದ್ದು, ಎಲ್ಲವನ್ನೂ ಗಮನಿಸಿ ಸಿಂದಗಿ ನಗರವು ಉತ್ತಮ ಧಾರ್ಮಿಕ ವಾತವರಣವನ್ನುಂಟು ಮಾಡುವ ಅಪೇಕ್ಷೆ ನಮ್ಮದು ಎಂದು ಆಶಿರ್ವದಿಸಿದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಸಮ್ಮುಖವನ್ನು ನಾಲವಾರ ಶ್ರೀಮಠದ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ವಹಿಸಿದ್ದರು. ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ.ಗುರು ನಾಗಭೂಷಣ ಶಿವಾಚಾರ್ಯರು, ಚಳಗೇರಾ ಮಠದ ವೀರಸಂಗಮೇಶ್ವರ ಶಿವಾಚಾರ್ಯರು, ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ಸಿಂದಗಿ ಆದಿಶೇಷ ಶ್ರೀಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಲಾದಗಿ ಪಂಚಗೃಹ ಹಿರೇಮಠದ ಶ್ರೀಗಳು, ಕೆಂಭಾವಿ ಶ್ರೀಗಳು, ಖೈನೂರ ಶ್ರೀಗಳು, ಅಕ್ಕಲಕೋಟ ನಾವದಗಿ-ಮಂಗಳೂರ ಶ್ರೀಗಳು, ಮಲಘಾಣ ಶ್ರೀಗಳು ಉಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆಯು ಪ್ರಮಖ ರಸ್ತೆಗಳ ಮೂಲಕ ಶ್ರೀ ಆದಿಶೇಷ ಹಿರೇಮಠದವರೆಗೆ ಬೃಹತ್ ಕಾರ್ ರ‍್ಯಾಲಿ ಮೂಲಕ ಶ್ರೀಮಠಕ್ಕೆ ತಲುಪಿತು.
ಈ ವೇಳೆ ಬಾಗಲಕೋಟೆಯ ಚರ್ಮರೋಗ ತಜ್ಞೆ ಡಾ.ಮಹಾಜಬೀನ ಮದರಕರ ಹಾಗೂ ನಾಯಕ ನಟ ವಿಶ್ವಪ್ರಕಾಶ ಮಲಗೊಂಡ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ನಾಲವಾರ ಜಹಾಗೀರವಾರ ಆದಿಶೇಷ ಸಂಸ್ಥಾನ ಹಿರೇಮಠದ ಸದ್ಗುರು ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು, ಕಲಾದಗಿ ಪಂಚಗೃಹ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯರು, ಕೆಂಭಾವಿ ಹಿರೇಮಠ ಶ್ರೀ ಚನ್ನಬಸವ ಶಿವಾಚಾರ್ಯರು, ಮಲಘಾಣ ಜಡೆಶಾಂತಲಿಂಗ ಶಿವಾಚಾರ್ಯರು, ಕೇರೂಟಗಿಯ ಶಿವಬಸವ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಸಿದ್ದು ಪಾಟೀಲ ಹೂವಿನಹಳ್ಳಿ, ಸಚಿನಗೌಡ ಪಾಟೀಲ, ಭೂದಾನಿ ಗೊಲ್ಲಾಳಪ್ಪ ಮಲ್ಲೇಶಪ್ಪ ಬಗಲಿ, ವಿಜಯಪುರದ ಬಸವರಾಜ ಮಸಳಿ, ಮಡಿವಾಳಯ್ಯ ಹಿರೇಮಠ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ. ಎಂ. ಹಂಗರಗಿ, ಪ್ರ.ದ.ಗುತ್ತಿಗೆದಾರ ರವಿ ದೇಸಾಯಿ, ಶ್ರೀಮತಿ ಶಿಲ್ಲಾ ಕುದರಗೊಂಡ, ರಾಜ್ಯ ಪರಿಷತ್ ಸದಸ್ಯ ಸಂಗನಗೌಡ ಎಸ್. ಪಾಟೀಲ, ಇಲಕಲ್ ಉದ್ಯಮಿ ನಾಗರಾಜ ತಂಗಡಗಿ, ಕಾವ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚಂದ್ರಶೇಖರ ನಾಗರಬೆಟ್ಟ, ಅಶೋಕ ವಾರದ, ನಿವೃತ್ತ ಪ್ರಾಧ್ಯಾಪಕ ಶಾಂತೂ ಹಿರೇಮಠ, ಹೋರ್ತಿಯ ರೇವಣಸಿದ್ದ ಪೂಜಾರಿ, ರಾಜೇಶ ಹಿರೇಮಠ, ನಾಗರತ್ನಾ ಮನಗೂಳಿ, ಕಸಾಪ ಅದ್ಯಕ್ಷ ಶಿವಾನಂದ ಬಡಾನೂರ, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ ಇದ್ದರು.
ಜೇರಟಗಿ ವೇ.ಮೂ ಸಿದ್ದಯ್ಯಶಾಸ್ತ್ರಿ ಹಾಗೂ ಸುರೇಶ ಹೊನ್ನಕಿರಣಗಿ ಪ್ರಾರ್ಥನೆಗೈದರು. ಮಹಾಂತೇಶ ನೂಲಾನವರ ಸ್ವಾಗತಿಸಿದರು. ಪೂಜಾ ಹಿರೇಮಠ ನಿರೂಪಿದರು. ಪಂಡಿತ ಯಂಪೂರೆ ವಂದಿಸಿದರು.

