ವಿಜಯಪುರ: ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರು ಪ್ರಧಾನಿ ಮೋದಿ ಅವರ ಉಪವಾಸವನ್ನು ಲೇವಡಿ ಮಾಡಿರುವುದು ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರ ರಾಮ ಮಂದಿರ ಕುರಿತ ಹೇಳಿಕೆಯನ್ನು ಬಿಜೆಪಿ ಮುಖಂಡ ಡಾ.ಗೌತಮ್ ಆರ್.ಚೌಧರಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಮಲಲ್ಲಾ ಪ್ರಾಣಪ್ರತಿಷ್ಠೆಯು ಅಯೋಧ್ಯೆಯಲ್ಲಿ ಸರಾಗವಾಗಿ ಸಂಪನ್ನವಾಗುವ ಮೂಲಕ ಕೋಟಿ ಕೋಟಿ ಹಿಂದೂಗಳ ಕನಸು ನೆರವೇರಿದೆ. ಇದನ್ನು ಸಂಭ್ರಮಿಸುವುದು ಬಿಟ್ಟು, ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರು ಮೋದಿ ಅವರ 11ದಿನದ ಉಪವಾಸ ವೃತವನ್ನು ಲೇವಡಿ ಮಾಡಿರುವುದು ಖಂಡನೀಯ. ಪ್ರಧಾನಿ ಮೋದಿಯವರು ಉಪವಾಸ ಮಾಡಿರುವುದು ಡೌಟ್ ಅಂತ ಹೇಳಿದ್ದಿರಲ್ಲಾ, ನಿಮ್ಮ ಪಕ್ಷದವರು ಯಾಕೆ ಅಯೋಧ್ಯೆ ರಾಮಮಂದಿರಕ್ಕೆ ಹೋಗಿ ಮೋದಿ ಏನು ಮಾಡುತ್ತಿದ್ದಾರೆ ಪರಿಶೀಲಿಸಲಿಲ್ಲ. ರಾಮಮಂದಿರದಲ್ಲಿ ರಾಜಕೀಯ ತರುವುದು ನಿಮಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ. ಸಾಧಿಸುವ ಛಲ ಹಾಗೂ ಧೃಡ ಸಂಕಲ್ಪ ಇದ್ದರೆ, 11 ದಿನ ಉಪವಾಸ ಮಾಡುವುದು ಅಸಾಧ್ಯವೇನಲ್ಲ ಎಂಬುದು ವೈದ್ಯಕೀಯ ಲೋಕದಲ್ಲಿ ಸಾಬೀತಾಗಿದೆ. ಮೊಯ್ಲಿ ಅವರಿಗೆ ಇದರ ಅರಿವಿದ್ದಂತಿಲ್ಲ ಎಂದು ಕುಟುಕಿದರು.
ರಾಮಮಂದಿರ ಉದ್ಘಾಟನೆ ಮುನ್ನ ಹಾಗೂ ನಂತರ ಕಾಂಗ್ರೆಸ್ ರಾಜಕೀಯ ಕಾವು ಜೋರಾದಂತಿದೆ. ರಾಮಮಂದಿರಕ್ಕೆ ಹೋಗಲ್ಲ, ರಾಮನ ಬಗ್ಗೆ ಭಕ್ತಿ ನನಗೆ ಇಲ್ಲ ಅಂತ ಸಚಿವ ಪ್ರಿಯಾಂಕ್ ಕರ್ಗೆ ಹೇಳಿರುವುದು ಸರಿಯಿಲ್ಲ. ರಾಮ ಮಂದಿರದ ವಾಸ್ತುಶಿಲ್ಪ, ಕಲೆ ನೋಡಲು ಹೋಗುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಚಿವ ಸ್ಥಾನದಲ್ಲಿರುವ ನೀವು ಸಮಾಜಕ್ಕೆ ಯಾವ ಸಂದೇಶ ಕೊಡಲು ಮುಂದಾಗಿದ್ದೀರಾ? ಹಿಂದೂಗಳ 500 ವರ್ಷಗಳ ಕನಸು ರಾಮಮಂದಿರ. ನಾನು ಸಂವಿಧಾನದ ಭಕ್ತ. ರಾಮನ ಮೇಲೆ ನನಗೆ ಭಕ್ತಿ ಇಲ್ಲ, ಅದಕ್ಕೆ ಹೋಗಲ್ಲ ಅಂತ ಹೇಳಿರುವುದು ಖಂಡನೀಯ. ಶ್ರೀರಾಮನ ಮೇಲೆ ಭಕ್ತಿ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಶ್ರೀರಾಮನ ಬಗ್ಗೆ ತಪ್ಪಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಡಾ.ಗೌತಮ್.ಆರ್.ಚೌಧರಿ ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

