ಇಂಡಿ: ಪಟ್ಟಣದ ಪಟ್ಟಣದ ಆಪಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ಶ್ರೀರಾಮ, ಲಕ್ಷ್ಮಣ, ಸೀತೆ, ರಾವಣ ಹನುಮಂತ ವೇಷ ಭೂಷಣ ತೊಡಿಸಿ ರಾಮಾಯಣದ ಕಿರುನಾಟಕ, ನೃತ್ಯ, ಕಥೆ, ಕವನ ಪ್ರಬಂಧ, ಹೀಗೆ ಅನೇಕ ಚಟುವಟಿಕೆಗಳನ್ನು ಮಾಡಿಸಲಾಯಿತು
ಶ್ರೀ ರಾಮನ ಫೋಟೋ ಪೂಜೆ ಮಾಡಿ ಮಕ್ಕಳಿಗೆ ಶ್ರೀರಾಮನಲ್ಲಿ ಇರುವ ಮೌಲ್ಯಗಳ ಕುರಿತು ತಿಳಿಸಲಾಯಿತು.
ಎಸ್.ಆರ್. ಬಗಲೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ದಿನಮಾನದಲ್ಲಿ ಮಕ್ಕಳಿಗೆ ನೈತಿಕ ಗುಣಮಟ್ಟ ಕಡಿಮೆ ಆಗುತ್ತಿದ್ದು ಅವರಲ್ಲಿ ತಂದೆ, ತಾಯಿ ಗುರು, ಹಿರಿಯರನ್ನು ಪೂಜಿಸುವ ಗುಣ ಬರಬೇಕಾದರೆ ಹೀಗೆ ಅನೇಕ ಆಚರಣೆಗಳು ಮಾಡಿ ತಿಳಿಸಬೇಕು ಎಂದರು.
ಚಿದಾನಂದ ಬಿರಾದಾರ ಮಾತನಾಡಿದರು.
ಶಹನವಾಜ ಚಡಚಣಕರ ಉಪಸ್ಥಿತರಿದ್ದರು.
ವಿಜಯಕುಮಾರ ಇಮ್ಮನದ ನಿರೂಪಿಸಿದರು, ಸಲ್ಮಾ ಚಿಕ್ಕೇರಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

