Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ೧೨ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿ ವರ್ಗರಹಿತ ವರ್ಣರಹಿತ ಲಿಂಗ ಸಮಾನತೆ ಬೋಧಿಸಿ ಸಮ ಸಮಾಜವನ್ನು ಕಟ್ಟಿದವರು ಬಸವಣ್ಣನವರು. ಹೀಗಾಗಿ ಅಂದಿನ ಅನುಭವ ಮಂಟಪದ ಅನುರೂಪವೇ ಇಂದಿನ ಪಾರ್ಲಿಮೆಂಟು ಅಥವಾ ಸಂಸತ್ತು ಪ್ರಜಾಪ್ರಭುತ್ವದ ನೆಲೆಯಲ್ಲಿ ಸಂವಿಧಾನಿಕ ಚಿಂತನೆಗಳ ಮೂಲಕ ಮೇಲು ಕೀಳು ಅಸ್ಪೃಶ್ಯ ಎಂಬ ಭಾವನೆಯನ್ನು ಹೋಗಲಾಡಿಸಿ, ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಎಲ್ಲರ ಬಾಳಿಗೆ ಬೆಳಕಾದ ಬಸವಣ್ಣನವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಕರ್ನಾಟಕದ ಸಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿದ್ದಕ್ಕಾಗಿ ತುಂಬ ಹರ್ಷವಾಗಿದೆ ಎಂದು ಕಾಂಗ್ರೆಸ್ಸಿನ ರಾಜ್ಯ ಮಹಿಳಾ ಕಾರ್ಯದರ್ಶಿ ಸ್ನೇಹಲತಾ ಶೆಟ್ಟಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಇಂಡಿ: ಶ್ರೀ ಸದ್ಗುರು ಚಿನ್ಮಯಮೂರ್ತಿ ಮಹಾಶಿವಯೋಗಿಗಳ ೩೦ ನೇ ಪುಣ್ಯಾರಾಧನೆ ನಿಮಿತ್ಯ ಗೋಳಸಾರದ ಶ್ರೀ ಪುಂಡಲಿಂಗೇಶ್ವರ ಮಹಾಶಿವಯೋಗಿಗಳ ಮಠದಲ್ಲಿ ಜ. ೨೯ ರಂದು ಸಾಮೂಹಿಕ ವಿವಾಹ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.ಜ.೨೫ ರಿಂದ ೨೯ ರ ವರೆಗೆ ಪ್ರತಿದಿನ ಮುಂಜಾನೆ ೬ ಗಂಟೆಯಿಂದ ಶ್ರೀ ಸದ್ಗುರು ಚಿನ್ಮಯಮೂರ್ತಿ ತ್ರಿಮೂರ್ತಿ ಮಹಾಶಿವಯೋಗಿಗಳ ಗದ್ದುಗೆಗೆ ರುದ್ರಾಭಿಷೇಕ, ಪುಷ್ಪಾರ್ಚನೆ, ಪ್ರತಿದಿನ ಸಾಯಂಕಾಲ ೬ ಗಂಟೆಯಿಂದ ಆದ್ಯಾತ್ಮ ಪ್ರವಚನ ಜರುಗುವದು.ಜ.೨೫ ರಂದು ಬೆಳಗ್ಗೆ ೯ ಗಂಟೆಗೆ ಡೊಳ್ಳಿನ ಗಾಯನ ಸ್ಪರ್ಧೆ ವಿವಿಧ ಗ್ರಾಮದ ಡೊಳ್ಳಿನ ಕಲಾವಿದರಿಂದ, ೨೬ ರಂದು ರಾತ್ರಿ ೭ ಗಂಟೆಗೆ ಜತೆಗಿರುವನು ಚಂದಿರ ನಾಟಕ ಶಿವಸಂಚಾರ ಕಲಾಬಳಗ ಸಾಣೆಹಳ್ಳಿ ಇವರಿಂದ, ೨೭ ರಂದು ಬೆಳಗ್ಗೆ ಡಾ|| ಮಂಜುನಾಥ ಕೊಟೆನ್ನವರ ಇವರ ನೇತೃತ್ವದಲ್ಲಿ ಬಿಎಲ್‌ಡಿಈ ಆಸ್ಪತ್ರೆಯ ವಿವಿಧ ತಜ್ಞರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ನಂತರ ರಾತ್ರಿ ೭ ಗಂಟೆಗೆ ತಾಳಿಯ ತಕರಾರು ನಾಟಕ, ೨೮ ರಂದು ರಾತ್ರಿ ೭ ಗಂಟೆಗೆ…
ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ :ಯಶವಂತ್ರಾಯಗೌಡ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ :ಯಶವಂತ್ರಾಯಗೌಡ ಕೊಲ್ಹಾರ: ಪಟ್ಟಣಕ್ಕೆ ಸಮೀಪದ ಕೃಷ್ಣಾ ನದಿ ದಂಡೆಯಲ್ಲಿ ನಿರ್ಮಾಣವಾಗುತ್ತಿರುವ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಜಾಕ್‌ವೆಲ್ ಕಾಮಗಾರಿಯನ್ನು ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಸ್ಥಳಕ್ಕೆ ಆಗಮಿಸಿ ಬುಧವಾರ ವೀಕ್ಷಣೆ ಮಾಡಿದರು.ಸರಕಾರಿ ಸ್ವಾಮಿತ್ವದ ಕೃಷ್ಣಾ ಭಾಗ್ಯ ಜಲನಿಗಮದ ಅಡಿಯಲ್ಲಿ ಸುಮಾರು ಎಪ್ಪತ್ತು ಸಾವಿರ ಎಕರೆ ಭೂಮಿಗಳಿಗೆ ನೀರಾವರಿ ಸೌಲಭ್ಯವನ್ನು ದೊರಕಿಸಿಕೊಡಲು ಕೈಗೊಂಡಿರುವ ಮಹತ್ವಾಕಾಂಕ್ಷಿಯ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯು ಇದಾಗಿದ್ದು ಈಗಾಗಲೇ ಪ್ರಾರಂಭಿಸಿರುವ ಜಾಕ್‌ವೆಲ್ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ಕೊಟ್ಟರು.ಅಖಂಡ ಇಂಡಿ ತಾಲೂಕಿನ ರೈತರ ಬಹುದಿನದ ಕನಸಾಗಿರುವ ಈ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಗುತ್ತಿಗೆದಾರರು ಗುಣಮಟ್ಟದ ರೀತಿಯಲ್ಲಿ ಕೈಗೊಳ್ಳಲು ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ಮಾಡಿ ಬಯಲುಸೀಮೆ ಪ್ರದೇಶವಾಗಿರುವ ಇಂಡಿ, ಚಡಚಣ, ನಾಗಠಾಣ, ಭಾಗದ ರೈತರ ಜಮೀನುಗಳಿಗೆ ನೀರು ಹರಿದು ನೀರಾವರಿ ಕ್ಷೇತ್ರವಾಗಿ ಮಾರ್ಪಡಬೇಕು ಎನ್ನುವುದೇ ನನ್ನ…
ವಿಜಯಪುರ: ಎಲ್ಲಾ ಗುತ್ತಿಗೆ ಮುನಸಿಪಲ್ ಕಾರ್ಮಿಕರ ನೇರ ಪಾವತಿ ಅಡಿಯಲ್ಲಿ ಸಮಾನ ವೇತನ ಜಾರಿಗೆ ಒತ್ತಾಯಿಸಿ ವಿಜಯಪುರ ಮಹಾನಗರ ಪಾಲಿಕೆ, ವಾಹನ ಚಾಲಕರ ಮತ್ತು ನಿರ್ವಾಹಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ಕಾರ್ಮಿಕರ ಸಂಘದ ಪ್ರಮುಖರು ಮಾತನಾಡಿ, ರಾಜ್ಯ ಸರ್ಕಾರವು ಮುನಿಸಿಪಾಲಿಟಿಗಳಲ್ಲಿ ದುಡಿಯುವ ಎಲ್ಲಾ ಗುತ್ತಿಗೆ, ಹೊರ ಗುತ್ತಿಗೆ ಆಧಾರಿತ ಪೌರಕಾರ್ಮಿಕರು, ನೀರು ಸರಬರಾಜು ವಿಭಾಗದ ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್, ಕಸದ ವಾಹನ ಚಾಲಕರು, ಸಹಾಯಕರು ಹಾಗೂ ಪೌರಕಾರ್ಮಿಕರು, ಪಾರ್ಕ, ಸ್ಮಶಾನ, ಶೌಚಾಲಯಗಳಲ್ಲಿ ಘನ ತ್ಯಾಜ್ಯ ಘಟಕ, ಯು.ಜಿ.ಡಿ. ನೀರು ಸಂಸ್ಕರಣಾ ಘಟಕದ ಕಾರ್ಮಿಕರು, ಮೇಲ್ವಿಚಾರಕರು ಎಂಬ ಅಸಂಬದ್ಧ ವಿಗಂಡಣೆಯನ್ನು ಕೈಬಿಟ್ಟು, ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ವಾಹನ ಚಾಲಕರ ಸೇವೆಗಳನ್ನು ಈ ತಕ್ಷಣದಿಂದ ನೇರ ಪಾವತಿಯಡಿಯಲ್ಲಿ ತಂದು ಸಮಾನ ವೇತನ ನೀಡಬೇಕು. ನಂತರದಲ್ಲಿ ಹಂತ ಹಂತವಾಗಿ ಖಾಯಂಗೊಳಿಸಲು ರಾಜ್ಯ ಸರ್ಕಾರ ೨೦೨೪ ರ ಬಜೆಟ್‌ನಲ್ಲಿ ಕ್ರಮವಹಿಸಬೇಕೆಂದು ಆಗ್ರಹಿಸಿದರು.ಬಳಿಕ ಕಾರ್ಮಿಕರಿಗೆ ಸಿಗಬೇಕಾದ…
ಕೊಲ್ಹಾರ: ಇಂದಿನ ದಿನಮಾನಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಅವರಿಗೆ ಸಮಾನ ಅವಕಾಶ ನೀಡುವದರ ಜೊತೆಗೆ ಪ್ರತಿಯೊಬ್ಬ ಹೆಣ್ಣುಮಗು ಶಿಕ್ಷಣವಂತಳಾಗಿ ಬದುಕಲು ಅವಕಾಶ ಮಾಡಿಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಸಾಹಿತಿ ಶಿಕ್ಷಕ ಜಗದೀಶ ಸಾಲಹಳ್ಳಿ ಹೇಳಿದರು.ತಾಲೂಕಿನ ಮಸೂತಿ ಗ್ರಾಮದಲ್ಲಿರುವ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುತ್ತಿರುವ ಗೃಹ ಹಿಂಸೆ, ಭೇಧ ಭಾವ, ಬಾಲ್ಯ ವಿವಾಹ ಪದ್ದತಿಗೆ ಅನುವಾಗುವದರ ಮೂಲಕ ಹಲವಾರು ಜ್ವಲಂತ ಸಮಸ್ಯೆಗಳ ಸುಳಿಗೆ ಸಿಲುಕುವ ಹೆಣ್ಣಿನ ಶೋಷಣೆಯ ಕುರಿತು ಜಾಗೃತೆ ಮೂಡಿಸಬೇಕೆಂದು ಕರೆ ಕೊಟ್ಟರು.ಶಿಕ್ಷಕಿ ಎಚ್.ಎಸ್.ತಳವಾರ ಮಾತನಾಡಿದರು.ಮಹಿಳೆಯರ ಕುರಿತು ಜಾಗೃತಿ ಮೂಡಿಸುವ ಕಿರು ನಾಟಕದ ಪ್ರದರ್ಶನ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಕುರಿತು ಛದ್ಮವೇಷಗಳಲ್ಲಿ ತೋರಿಸಿಕೊಟ್ಟರು.ಈ ಸಂದರ್ಭದಲ್ಲಿ ಎಮ್.ಎಚ್.ನಾಯಕ, ಎಸ.ಎಸ.ದಂಗಲ, ಪ್ರವೀಣ ಪಾಟೀಲ, ಎಸ್.ಐ.ಅಮರಖೇಡ, ನೀಲಮ್ಮ ಹಿರೇಮಠ ಉಪಸ್ಥಿತರಿದ್ದರು.
ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋದನಾ ಕೇಂದ್ರದಲ್ಲಿ ಜನೇವರಿ 29 ರಂದು ಉಚಿತ ಪೈಬ್ರೋಸ್ಕ್ಯಾನ್ ಕಾರ್ಯಕ್ರಮ ಆಯೋಜಿಸಲಾಗಿದೆ.ಆಸ್ಪತ್ರೆಯ ಟ್ರಾಮಾ ಕಟ್ಟಡದ ನೆಲಮಹಡಿಯಲ್ಲಿ ಜನೇವರಿ 29 ರಂದು ಸೋಮವಾರ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ಈ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಲಿದ್ದು, ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಮತ್ತು ಡಯಟೀಸಿಯನ್ ತಜ್ಞರಿಂದ ಉಚಿತ ಸಮಾಲೋಚನೆ ಮತ್ತು ಸಲಹೆ ನಡೆಯಲಿದೆ.ಫ್ಯಾಬ್ರೊಸ್ಕ್ಯಾನ್ ಸರಳವಾದ ಮತ್ತು ನೋವು ರಹಿತ ತಪಾಸಣೆ ವಿಧಾನವಾಗಿದ್ದು, ಯಕೃತ್ತಿನ(ಲೀವರ್) ಆರೋಗ್ಯವನ್ನು ನಿಖರವಾಗಿ ಪತ್ತೆ ಹಚ್ಚಲು ಬಳಕೆಯಾಗುವ ಆರೋಗ್ಯ ತಪಾಸಣೆ ಪದ್ದತಿಯಾಗಿದೆ. ಈ ತಪಾಸಣೆಯಿಂದ ಪಿತ್ತ ಜನಕಾಂಗದ ಕೊಬ್ಬಿನ ಕಾಯಿಲೆ, ಲೀವರ್ ಸಿರೋಸಿಸ್, ಲೀವರ್ ಕ್ಯಾನ್ಸರ್, ಮದ್ಯಪಾನಯುಕ್ತ ಪಿತ್ತಜನಕಾಂಗ ಕಾಯಿಲೆ, ಬೊಜ್ಜು ಮತ್ತು ಇತರೆ ಲೀವರ್ ಸಮಸ್ಯಗಳು, ದೀರ್ಘ ಕಾಲದ ಕಾಮಾಲೆ(ಹೆಪಟೈಟಿಸ್) ಬಿ ಮತ್ತು ಸಿ ಪತ್ತೆಮಾಡಬಹುದಾಗಿದೆ.ನೋಂದಣಿಗಾಗಿ 9591682224 ಮತ್ತು 6366786003 ಸಂಪರ್ಕಿಸಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ…
-ಮನು ಪತ್ತಾರ, ಕಲಕೇರಿ ೧೯೪೫ರಲ್ಲಿ ದ್ವಿತೀಯ ಮಹಾಯುದ್ಧವು ಕೊನೆಗೊಂಡ ನಂತರ ಭಾರತದಲ್ಲಿ ಬ್ರಿಟಿಷರಿಂದ ಸ್ವಾತಂತ್ರ‍್ಯ ಪಡೆದುಕೊಳ್ಳುವ ಪ್ರಶ್ನೆ ಬಹು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಸ್ವಾತಂತ್ರ‍್ಯವನ್ನು ಹಸ್ತಾಂತರಿಸಲು ಬ್ರಿಟೀಷ ಸರಕಾರ ತನ್ನ ಮಂತ್ರಿಗಳಿಂದ ಕೂಡಿದ ತ್ರಿ-ಸದಸ್ಯರ ಕ್ಯಾಬಿನೆಟ್ ಆಯೋಗವನ್ನು ಭಾರತಕ್ಕೆ ಕಳುಹಿಸಿಕೊಟ್ಟಿತ್ತು. ಅದು ಇಲ್ಲಿಯ ಪರಿಸ್ಥಿತಿಯ ಅಧ್ಯಯನ ನಡೆಸಿ ೧೯೪೬ ಮಾರ್ಚ ೧೬ರಂದು ತನ್ನ ವರದಿಯನ್ನು ಮಂಡಿಸುತ್ತದೆ. ಭಾರತವು ತನ್ನ ಸುಗಮ ಆಡಳಿತದ ನಿರ್ವಹಣೆಗಾಗಿ ಒಂದು ಸಂವಿಧಾನವನ್ನು ರಚಿಸಲು ರಾಜ್ಯಾಂಗ ಸಭೆಯನ್ನು ರಚಿಸಿಕೊಳ್ಳಬೇಕೆಂದು ಆಯೋಗವು ಶಿಫಾರಸ್ಸು ಮಾಡುತ್ತದೆ. ಈ ಶಿಫಾರಸ್ಸಿನಂತೆ ರಾಜ್ಯಾಂಗ ರಚನಾ ಸಭೆಗೆ ಸದಸ್ಯರ ಆಯ್ಕೆಗೆ ಚುನಾವಣೆಗಳು ನಡೆಯುತ್ತವೆ. ಪ್ರಾಂತೀಯ ವಿಧಾನಸಭೆಗಳು ಈ ಚುನಾವಣೆ ನಡೆಸಿ ಸದಸ್ಯರನ್ನು ಆಯ್ಕೆ ಮಾಡಿ, ರಾಜ್ಯಾಂಗ ಸಭೆಗೆ ಕಳುಹಿಸಿಕೊಡುತ್ತವೆ.ಡಾ. ಬಿ. ಆರ್. ಅಂಬೇಡ್ಕರ್ ಅವರು ಬಂಗಾಳ ವಿಧಾನಸಭೆಯಿಂದ ಆಯ್ಕೆಗೊಂಡು ಸಂವಿಧಾನ ರಚನಾ ಸಭಗೆ ಪ್ರವೇಶಿಸುತ್ತಾರೆ. ಸ್ವತಂತ್ರ ಭಾರತದ ಸಂವಿಧಾನ ರಚಿಸಲು ರಾಜ್ಯಾಂಗ ಸಭೆಯು ೧೯೪೬ ಡಿಸೆಂಬರ್ ೯ರಂದು ಆರಂಭಗೊಳ್ಳುತ್ತದೆ. ೨೯೬ ಸದಸ್ಯರ ಪೈಕಿ ೨೦೭ ಸದಸ್ಯರು ಪ್ರಥಮ…
– ಜಯಶ್ರೀ.ಜೆ.ಅಬ್ಬಿಗೇರಿಉಪನ್ಯಾಸಕರು, ಬೆಳಗಾವಿ೯೪೪೯೨೩೪೧೪೨ ಈಗಿನ ದಾವಂತದ ಬದುಕಿನಲ್ಲಿ ಸಂಬಂಧಗಳನ್ನು ನಿಭಾಯಿಸುವುದೇ ಒಂದು ದೊಡ್ಡ ತಲೆನೋವಾಗಿ ಬಿಟ್ಟಿದೆ. ಪ್ರತಿ ಸಂಬಂಧಗಳ ನಿಭಾವಣೆಯೂ ಹಗ್ಗದ ಮೇಲೆ ನಡೆದಂತೆನಿಸುತ್ತಿದೆ ಎಂಬುದು ಬಹುತೇಕರ ಅಭಿಪ್ರಾಯ.ಮೊದಲೆಲ್ಲ ಸಂಬಂಧಗಳಲ್ಲಿ ಮಧುರತೆಯ ಪರಿಮಳವಿರುತ್ತಿತ್ತು. ನೀನಿಲ್ಲದೇ ನಾನಿಲ್ಲವೆಂಬ ಭಾವ ಎದೆಯ ಬಾಗಿಲಲ್ಲಿ ನೇತಾಡುತ್ತಿತ್ತು. ಸಂಬಂಧ ಯಾವುದೇ ಇರಲಿ ಅದನ್ನು ನಾವು ಸಹನೆಯಿಂದಲೇ ನಿಭಾಯಿಸಬೇಕು. ತಾಳ್ಮೆಯಿಲ್ಲದೇ ಇದ್ದರೆ ನಾವು ಒಬ್ಬರನ್ನು ನೋಯಿಸಿದರೆ ನಮ್ಮನ್ನು ನೋಯಿಸಲು ಮತ್ತೊಬ್ಬರು ಇರುತ್ತಾರೆ. ನಾವು ಯಾವಾಗ ಸಂಬಂಧಗಳನ್ನು ಉಪಯೋಗಿಸಿ ಎಸೆಯುವ ಸರಕುಗಳ ತರಹ ನೋಡಲು ಆರಂಭಿಸಿದೆವೋ ಆಗಿಂದ ಸಿಹಿ ನೀಡುವ ಮಧುರ ಬಂಧಗಳೆಲ್ಲ ಕಹಿ ಅನುಭವಗಳ ಸರಣಿಯನ್ನೇ ಮನ ತುಂಬಿಸ ತೊಡಗಿವೆ. ಈ ಹಿಂದೆ ಗಟ್ಟಿಯಾದ ಬಂಧಗಳು ಇದ್ದವು. ಅವು ಬದುಕಿನ ಒಳಿತಿಗೆ ಮಾತ್ರ ಥಳಕು ಹಾಕಿಕೊಂಡಿದ್ದವು. ಸಂಬಂಧಗಳು ಮನವನ್ನು ಮುದಗೊಳಿಸುತ್ತವೆ. ಬದುಕನ್ನು ಹಸನಾಗಿಸುತ್ತವೆ. ಎಂಬಂಥ ಸಂಗತಿಗಳನ್ನು ನಮ್ಮ ಹಿರಿಯರ ಬದುಕಿನಿಂದ ಕಂಡುಕೊಂಡಾಗಿದೆ. ಹಲವಾರು ಸಂದರ್ಭಗಳಲ್ಲಿ ಕೊಂಡಾಡುವಂತೆಯೂ ಆಗಿದೆ. ಅದಲ್ಲದೇ ಇದು ಸಾವಿರಾರು ವರ್ಷಗಳಿಂದ ಅನೂಚಾನವಾಗಿ ದಾಖಲಾದ ಸಂಗತಿಯೂ ಹೌದು.…
Udayarashmi kannada daily newspaper
ದಿ.ಕರ್ಪೂರಿ ಠಾಕೂರ್ ಬಿಹಾರದ ಮಾಜಿ ಸಿಎಂ | ಪ್ರಧಾನಿ ಮೋದಿ ಅಭಿನಂದನೆ | ಜೆಡಿಯುದಿಂದ ಮೋದಿ ಸರ್ಕಾರಕ್ಕೆ ಕೃತಜ್ಞತೆ ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗುತ್ತಿದೆ. ಬುಧವಾರ ಕರ್ಪೂರಿ ಠಾಕೂರ್ ಅವರ 100ನೇ ಜನ್ಮ ವರ್ಷಾಚರಣೆಗೂ ಮುನ್ನ ಅವರಿಗೆ ಭಾರತ ರತ್ನ ನೀಡಿ ಗೌರವಿಸುವುದಾಗಿ ಘೋಷಿಸಲಾಗಿದೆ.ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಜನತಾ ದಳ ಯುನೈಟೆಡ್ (ಜೆಡಿಯು) ಒತ್ತಾಯಿಸಿತ್ತು. ಈ ಘೋಷಣೆಯ ನಂತರ ಜೆಡಿಯು ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ.36 ವರ್ಷಗಳ ತಪಸ್ಸಿನ ಫಲ ನಮಗೆ ಸಿಕ್ಕಿದೆ ಎಂದು ಕರ್ಪೂರಿ ಠಾಕೂರ್ ಅವರ ಪುತ್ರ ರಾಮನಾಥ್ ಠಾಕೂರ್ ಹೇಳಿದ್ದಾರೆ. ನನ್ನ ಕುಟುಂಬ ಮತ್ತು ಬಿಹಾರದ 15 ಕೋಟಿ ಜನರ ಪರವಾಗಿ ನಾನು ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.ಕರ್ಪೂರಿ ಠಾಕೂರ್ ಗೆ ಭಾರತ ರತ್ನ ಸಿಕ್ಕಿರುವುದಕ್ಕೆ ಪ್ರಧಾನಿ…
