ವಿಜಯಪುರ: ೧೨ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿ ವರ್ಗರಹಿತ ವರ್ಣರಹಿತ ಲಿಂಗ ಸಮಾನತೆ ಬೋಧಿಸಿ ಸಮ ಸಮಾಜವನ್ನು ಕಟ್ಟಿದವರು ಬಸವಣ್ಣನವರು. ಹೀಗಾಗಿ ಅಂದಿನ ಅನುಭವ ಮಂಟಪದ ಅನುರೂಪವೇ ಇಂದಿನ ಪಾರ್ಲಿಮೆಂಟು ಅಥವಾ ಸಂಸತ್ತು ಪ್ರಜಾಪ್ರಭುತ್ವದ ನೆಲೆಯಲ್ಲಿ ಸಂವಿಧಾನಿಕ ಚಿಂತನೆಗಳ ಮೂಲಕ ಮೇಲು ಕೀಳು ಅಸ್ಪೃಶ್ಯ ಎಂಬ ಭಾವನೆಯನ್ನು ಹೋಗಲಾಡಿಸಿ, ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಎಲ್ಲರ ಬಾಳಿಗೆ ಬೆಳಕಾದ ಬಸವಣ್ಣನವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಕರ್ನಾಟಕದ ಸಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿದ್ದಕ್ಕಾಗಿ ತುಂಬ ಹರ್ಷವಾಗಿದೆ ಎಂದು ಕಾಂಗ್ರೆಸ್ಸಿನ ರಾಜ್ಯ ಮಹಿಳಾ ಕಾರ್ಯದರ್ಶಿ ಸ್ನೇಹಲತಾ ಶೆಟ್ಟಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

