ಕೊಲ್ಹಾರ: ಇಂದಿನ ದಿನಮಾನಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಅವರಿಗೆ ಸಮಾನ ಅವಕಾಶ ನೀಡುವದರ ಜೊತೆಗೆ ಪ್ರತಿಯೊಬ್ಬ ಹೆಣ್ಣುಮಗು ಶಿಕ್ಷಣವಂತಳಾಗಿ ಬದುಕಲು ಅವಕಾಶ ಮಾಡಿಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಸಾಹಿತಿ ಶಿಕ್ಷಕ ಜಗದೀಶ ಸಾಲಹಳ್ಳಿ ಹೇಳಿದರು.
ತಾಲೂಕಿನ ಮಸೂತಿ ಗ್ರಾಮದಲ್ಲಿರುವ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುತ್ತಿರುವ ಗೃಹ ಹಿಂಸೆ, ಭೇಧ ಭಾವ, ಬಾಲ್ಯ ವಿವಾಹ ಪದ್ದತಿಗೆ ಅನುವಾಗುವದರ ಮೂಲಕ ಹಲವಾರು ಜ್ವಲಂತ ಸಮಸ್ಯೆಗಳ ಸುಳಿಗೆ ಸಿಲುಕುವ ಹೆಣ್ಣಿನ ಶೋಷಣೆಯ ಕುರಿತು ಜಾಗೃತೆ ಮೂಡಿಸಬೇಕೆಂದು ಕರೆ ಕೊಟ್ಟರು.
ಶಿಕ್ಷಕಿ ಎಚ್.ಎಸ್.ತಳವಾರ ಮಾತನಾಡಿದರು.
ಮಹಿಳೆಯರ ಕುರಿತು ಜಾಗೃತಿ ಮೂಡಿಸುವ ಕಿರು ನಾಟಕದ ಪ್ರದರ್ಶನ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಕುರಿತು ಛದ್ಮವೇಷಗಳಲ್ಲಿ ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಎಮ್.ಎಚ್.ನಾಯಕ, ಎಸ.ಎಸ.ದಂಗಲ, ಪ್ರವೀಣ ಪಾಟೀಲ, ಎಸ್.ಐ.ಅಮರಖೇಡ, ನೀಲಮ್ಮ ಹಿರೇಮಠ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

