ವಿಜಯಪುರ: ಎಲ್ಲಾ ಗುತ್ತಿಗೆ ಮುನಸಿಪಲ್ ಕಾರ್ಮಿಕರ ನೇರ ಪಾವತಿ ಅಡಿಯಲ್ಲಿ ಸಮಾನ ವೇತನ ಜಾರಿಗೆ ಒತ್ತಾಯಿಸಿ ವಿಜಯಪುರ ಮಹಾನಗರ ಪಾಲಿಕೆ, ವಾಹನ ಚಾಲಕರ ಮತ್ತು ನಿರ್ವಾಹಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಕಾರ್ಮಿಕರ ಸಂಘದ ಪ್ರಮುಖರು ಮಾತನಾಡಿ, ರಾಜ್ಯ ಸರ್ಕಾರವು ಮುನಿಸಿಪಾಲಿಟಿಗಳಲ್ಲಿ ದುಡಿಯುವ ಎಲ್ಲಾ ಗುತ್ತಿಗೆ, ಹೊರ ಗುತ್ತಿಗೆ ಆಧಾರಿತ ಪೌರಕಾರ್ಮಿಕರು, ನೀರು ಸರಬರಾಜು ವಿಭಾಗದ ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್, ಕಸದ ವಾಹನ ಚಾಲಕರು, ಸಹಾಯಕರು ಹಾಗೂ ಪೌರಕಾರ್ಮಿಕರು, ಪಾರ್ಕ, ಸ್ಮಶಾನ, ಶೌಚಾಲಯಗಳಲ್ಲಿ ಘನ ತ್ಯಾಜ್ಯ ಘಟಕ, ಯು.ಜಿ.ಡಿ. ನೀರು ಸಂಸ್ಕರಣಾ ಘಟಕದ ಕಾರ್ಮಿಕರು, ಮೇಲ್ವಿಚಾರಕರು ಎಂಬ ಅಸಂಬದ್ಧ ವಿಗಂಡಣೆಯನ್ನು ಕೈಬಿಟ್ಟು, ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ವಾಹನ ಚಾಲಕರ ಸೇವೆಗಳನ್ನು ಈ ತಕ್ಷಣದಿಂದ ನೇರ ಪಾವತಿಯಡಿಯಲ್ಲಿ ತಂದು ಸಮಾನ ವೇತನ ನೀಡಬೇಕು. ನಂತರದಲ್ಲಿ ಹಂತ ಹಂತವಾಗಿ ಖಾಯಂಗೊಳಿಸಲು ರಾಜ್ಯ ಸರ್ಕಾರ ೨೦೨೪ ರ ಬಜೆಟ್‌ನಲ್ಲಿ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಬಳಿಕ ಕಾರ್ಮಿಕರಿಗೆ ಸಿಗಬೇಕಾದ ಹಕ್ಕೊತ್ತಾಯಗಳು, ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ಭೀಮಸಿ ಚಲವಾದಿ, ಅಧ್ಯಕ್ಷ ಶಂಕರ ಹು.ಚಲವಾದಿ, ಉಪಾಧ್ಯಕ್ಷ ಹುಸನಪ್ಪ ಚಲವಾದಿ, ದಲಿತ ಮುಖಂಡರಾದ ಸಂಜು ಕಂಬಾಗಿ, ಖಜಾಂಚಿ, ಮೋಸಿನಖಾನ ಆಲಮೇಲ, ಕಾರ್ಯದರ್ಶಿ ಪ್ರವೀಣ ಕಳ್ಳಿಮನಿ, ಸಂಚಾಲಕ ಅಲ್ಪರ ಅತ್ತಾರ, ತನ್ವೀರ ಘುಲಫರೋಶ, ರುಕ್ಮೋದ್ದೀನ ಹೊನವಾಡ, ಬಸವರಜ ಕಾಂಬಳೆ, ಸತೀಶ ಚಲವಾದಿ, ಮಂಜು ಕಂಡರೆ, ವಿಜಯ ಮೇತ್ರಿ, ಶಿವಾಜಿ ಜಾಧವ, ರವಿ, ರಮೇಶ ರಾಠೋಡ, ಅನೀಲ ಆಲಕುಂಟೆ, ಗಂಗಾಧರ ಶಾಪೂರ, ಹುಸೇನ ಮುಲ್ಲಾ, ಸೈಯದ ಜಾಗೀರದಾರ, ಸುರೇಶ ಕನ್ನೂರ ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

