ದಿ.ಕರ್ಪೂರಿ ಠಾಕೂರ್ ಬಿಹಾರದ ಮಾಜಿ ಸಿಎಂ | ಪ್ರಧಾನಿ ಮೋದಿ ಅಭಿನಂದನೆ | ಜೆಡಿಯುದಿಂದ ಮೋದಿ ಸರ್ಕಾರಕ್ಕೆ ಕೃತಜ್ಞತೆ
ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗುತ್ತಿದೆ. ಬುಧವಾರ ಕರ್ಪೂರಿ ಠಾಕೂರ್ ಅವರ 100ನೇ ಜನ್ಮ ವರ್ಷಾಚರಣೆಗೂ ಮುನ್ನ ಅವರಿಗೆ ಭಾರತ ರತ್ನ ನೀಡಿ ಗೌರವಿಸುವುದಾಗಿ ಘೋಷಿಸಲಾಗಿದೆ.
ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಜನತಾ ದಳ ಯುನೈಟೆಡ್ (ಜೆಡಿಯು) ಒತ್ತಾಯಿಸಿತ್ತು. ಈ ಘೋಷಣೆಯ ನಂತರ ಜೆಡಿಯು ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ.
36 ವರ್ಷಗಳ ತಪಸ್ಸಿನ ಫಲ ನಮಗೆ ಸಿಕ್ಕಿದೆ ಎಂದು ಕರ್ಪೂರಿ ಠಾಕೂರ್ ಅವರ ಪುತ್ರ ರಾಮನಾಥ್ ಠಾಕೂರ್ ಹೇಳಿದ್ದಾರೆ. ನನ್ನ ಕುಟುಂಬ ಮತ್ತು ಬಿಹಾರದ 15 ಕೋಟಿ ಜನರ ಪರವಾಗಿ ನಾನು ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.
ಕರ್ಪೂರಿ ಠಾಕೂರ್ ಗೆ ಭಾರತ ರತ್ನ ಸಿಕ್ಕಿರುವುದಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

