Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಲಕೇರಿ: ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ೧೮ ವರ್ಷ ಪೂರೈಸಿದ ಎಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂದು ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಬಸವಂತಪ್ಪ ಚನಗೊಂಡ ಕರೆ ನೀಡಿದರು.ಕಲಕೇರಿ ಗ್ರಾಮದ ಎಸ್‌ಎಂವಿವಿ ಸಂಘದ ಬಸವೇಶ್ವರ ಸಂಯುಕ್ತ ಪಪೂ ಕಾಲೇಜು ಹಾಗೂ ವಿವಿದ ಅಂಗಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿ ಅವರು ಮಾತನಾಡಿದರು.ಪ್ರಾಚಾರ್ಯ ಸಿ ಎಸ್ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಜಗದೀಶ ಗುಮಶೇಟ್ಟಿ, ಇ ಎಎಲ್ ಸಿ ಕ್ಲಬ್ ಚಂಚಾಲಕ ಬಸವರಾಜ್ ಕುಂಬಾರ, ಎಸ್ ಪಿ ರಾಣಗಟ್ಟಿ ಮಾತನಾಡಿರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಜಿ ಜಿ ಮೇಡೆದಾರ, ಎಸ್ ಎಸ್ ಕಲಶೇಟ್ಟಿ, ರವಿಕುಮಾರ ಗುಮಶೇಟ್ಟಿ, ಸುರೇಶ ಬಿರಾದಾರ, ಜಗದೀಶ ಕಾದಳ್ಳಿ, ರವಿ ಕುಲಕರ್ಣಿ, ಶಿವಾನಂದ ಹರಿಜನ್, ವಿಶ್ವನಾಥ ಸಿಂದಗಿ ಸೇರಿದಂತೆ ಇತರರು ಇದ್ದರು.
ಕಲಕೇರಿ: ಟೈಲರ್‌ಗಳಿಗೆ ಕ್ಷೇಮನಿಧಿ, ಟೈಲರ್ ಮಕ್ಕಳಿಗೆ ವಿದ್ಯಾರ್ಥಿವೇತನ, ಹೊಲಿಗೆ ಕೆಲಸಗಾರರಿಗೆ ಮನೆ, ಯಂತ್ರ ಖರೀದಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಆರೋಗ್ಯ ವಿಮೆ, ವಿವಾಹ ಧನ ಸಹಾಯ ಮತ್ತು ಹೆರಿಗೆ ಭತ್ಯೆ , ಪಿಂಚಣಿ ಸೌಲಭ್ಯ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಎಲ್ಲಾ ಟೈಲರ್‌ಗಳ ಪರವಾಗಿ ಸರಕಾರದ ಮೇಲೆ ಒತ್ತಡ ಹೇರಲು ರಾಜ್ಯದ ಮೂಲೆ ಮೂಲೆಗಳಿಂದ ಪದಾಧಿಕಾರಿಗಳು ಬೆಂಗಳೂರು ಹೊಗುತ್ತಿರುವುದಾಗಿ ಸಂಘದ ಗೌರವ ಅಧ್ಯಕ್ಷ ಶಾಂತಯ್ಯ ಹಿರೇಮಠ ಹೇಳಿದರು.ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವಲಯ ಸಮಿತಿ ಕಲಕೇರಿ ವತಿಯಿಂದ ಬೆಂಗಳೂರಿನಲ್ಲಿ ಜ.೩೦ ಮಂಗಳವಾರದಂದು ಶಾಲಿನಿ ಮೈದಾನದಲ್ಲಿ ನಡೆಯುವ ಕೆಎಸ್‌ಟಿಎ ೨೫ನೇ ವರ್ಷದ ರಜತ ಮಹೋತ್ಸವ ಕುರಿತ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರುಈ ವೇಳೆ ಕಾರ್ಯದರ್ಶಿ ನಬಿಲಾಲ ನಾಯ್ಕೋಡಿ, ಉಪಾಧ್ಯಕ್ಷರಾದ ಮನೋಹರ ಪತ್ತಾರ, ಸದಸ್ಯರಾದ ಸುಜಾತಾ ಅವಟಿ, ಮಡಿವಾಳಪ್ಪ ಜಂಬಗಿ, ಶೋಭಾ ಗದ್ದಗಿಮಠ, ಪೂಜಾ ಬಡಿಗೇರ, ವಿಜಯಲಕ್ಷ್ಮಿ ಬಡಿಗೇರ, ಸಾವಿತ್ರಿ ಬಡಿಗೇರ ಇದ್ದರು
ಕಲಕೇರಿ: ಶಿಶು ಅಭಿವೃದ್ಧಿ ಯೋಜನೆ ಸಿಂದಗಿ ವ್ಯಾಪ್ತಿಯಲ್ಲಿ ಬರುವ ಅಸ್ಕಿ ಗ್ರಾಮ ಪಂಚಾಯತಿಯ ಆವರಣದಲ್ಲಿ ತಾಲೂಕು ಮಟ್ಟದ ಬೇಟಿ ಬಚಾವೋ, ಬೇಟಿ ಪಡಾವೋ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಸಮೀಪದ ಅಸ್ಕಿ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳಾದ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ, ಕುರಿತು ಕಾರ್ಯಕ್ರಮ ಉದ್ಘಾಟಿಸಿ ಶಂಭುಲಿಂಗ ಎನ್ ಹಿರೇಮಠ ಅವರು ಮಾತನಾಡಿದರು.ಕಾರ್ಯಕ್ರಮದ ಅಂಗವಾಗಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ, ನಿಬಂಧ ಸ್ಪರ್ದೆ, ಲಿಂಬು ಸ್ಪೂನ್, ಹಗ್ಗದಾಟ, ಮ್ಯೂಜಿಕಲ್ ಚೇರ್, ಜಾನಪದ ಗೀತೆ, ದೇಶ ಭಕ್ತಿಗೀತೆ ಮುಂತಾದ ಸ್ಪರ್ದೆಗಳನ್ನು ಆಯೋಜಿಸಿ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ಅಂಗನವಾಡಿಯ ಹೆಣ್ಣು ಮಕ್ಕಳಿಗೆ ವೇಷ ಭೂಷಣ ತೊಡಿಸಲಾಯಿತು, ಹೆಣ್ಣುಮಕ್ಕಳಿಗೆ ಸುಕನ್ಯಾ ಸಮೃದ್ಧಿ ಪಾಸ್ ಬುಕ್ ವಿತರಣೆ, ಹೆಣ್ಣು ಮಗುವಾದ ತನು, ಆಲಿಶಾ ರವರ…
ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಕೊರತೆ | ಪಾಳುಬಿದ್ದ ಗೋದಾಮಿನಲ್ಲಿ ಕಾರ್ಯನಿರ್ವಹಣೆ *- ಬಂದೇನವಾಜ್.ಐ.ನಾಲತವಾಡ* ಕೆಂಭಾವಿ: ಸರಕಾರ ಜನಸಾಮಾನ್ಯರ ಒಳಿತಿಗಾಗಿ ತನ್ನ ಅನುದಾನದಿಂದ ಸಾಕಷ್ಟು ಪ್ರಮಾಣದಲ್ಲಿ ಯೋಜನೆಗಳನ್ನು ಬಿಡುಗಡೆ ಮಾಡುತ್ತದೆ. ಆದರೆ ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಕೊರತೆಯಿಂದ ಕೆಲವು ಯೋಜನೆಗಳು ಹಳ್ಳ ಹಿಡಿದಿವೆ,ಅದರಂತೆಯೇ ಪಟ್ಟಣದಲ್ಲಿ ಶಾಸಕರ ಇಚ್ಚಾಶಯದಂತೆ ಸುಮಾರು 53 ಲಕ್ಷ ರೂ. ವೆಚ್ಚದಲ್ಲಿ ನೂತನ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಮುಗಿದು ವರ್ಷ ಕಳೆದರೂ ಇನ್ನೂ ಉದ್ಘಾಟನೆಯ ಭಾಗ್ಯ ಕಾಣದಂತಾಗಿದೆ. ಇದು ಕ್ಷೇತ್ರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಕಳೆದ ಹಲವು ವರ್ಷಗಳಿಂದ ಪೊಲೀಸ್ ಠಾಣೆ ಹಿಂಬದಿಯ ಪಾಳುಬಿದ್ದ ಕಾಡಾ ವ್ಯಾಪ್ತಿಯ ಗೋದಾಮಿನಲ್ಲಿ ರೈತ ಸಂಪರ್ಕ ಕೇಂದ್ರ ಸಧ್ಯ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚಿನ ಅನುಕೂಲ ರೈತರಿಗೆ ಆಗಲಿ ಎಂಬ ಕಾರಣದಿಂದ ಸರ್ಕಾರ ಈ ಹೊಸ ರೈತ ಸಂಪರ್ಕ ಕೇಂದ್ರ ನಿರ್ಮಿಸಿದೆ. ಆದರೆ ಈವರೆಗೂ ಈ ಕೇಂದ್ರ ಉದ್ಘಾಟನೆಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಸರ್ಕಾರದಿಂದ ಬಂದ ಯೋಜನೆಗಳಾದ ಗೊಬ್ಬರ ದಾಸ್ತಾನು ಮಾಡಲು ಮತ್ತು ಕಚೇರಿ…
ದೇವರಹಿಪ್ಪರಗಿ: ಕಲಬುರಗಿ ನಗರದ ಕೋಟನೂರ ಲುಂಬಿಣಿ ಉದ್ಯಾನದಲ್ಲಿ ಡಾ.ಅಂಬೇಡ್ಕರರವರ ಪ್ರತಿಮೆಗೆ ಅವಮಾನಗೊಳಿಸಿದ ಘಟನೆಯನ್ನು ಖಂಡಿಸಿ ಬಂಧಿತ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮೀತಿಯ(ನಾಗಾವಾರ ಬಣ) ಪದಾಧಿಕಾರಿಗಳು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿ ಆವರಣಕ್ಕೆ ಗುರುವಾರ ಆಗಮಿಸಿದ ದಲಿತ ಸಂಘರ್ಷ ಸಮೀತಿಯ ಸದಸ್ಯರು ಪ್ರತಿಭಟನೆ ಕೈಗೊಂಡರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ದ.ಸಂಸ ತಾಲ್ಲೂಕು ಸಂಚಾಲಕ ಪ್ರಕಾಶ ಗುಡಿಮನಿ ಮಾತನಾಡಿ, ಸಂವಿಧಾನಶಿಲ್ಪಿ ಅಂಬೇಡ್ಕರ ಹಾಗೂ ದೇಶದ ರಾಷ್ಟ್ರೀಯ ನಾಯಕರ ಪ್ರತಿಮೆಗಳ ಮೇಲೆ ಮೇಲಿಂದ ಮೇಲೆ ಅವಮಾನ ಮಾಡಲಾಗುತ್ತಿದೆ. ಇದರಿಂದ ಅವರ ಅನುಯಾಯಿಗಳಿಗೆ ನೋವು ಉಂಟಾಗುತ್ತಿದ್ದು, ಇದರಿಂದಾಗಿ ದೇಶದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗುತ್ತಿದೆ. ಕೂಡಲೇ ಈ ಕೃತ್ಯ ಎಸಗಿ ಬಂಧಿತರಾದ ಅಪರಾಧಿಗಳ ಮೇಲೆ ದೇಶದ್ರೋಹಿ ಕಾಯ್ದೆಯಡಿ ಕಠಿಣ ಕ್ರಮ ಕೈಕೊಳ್ಳಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಹಾಗೂ ಗುಪ್ತಚರ ಇಲಾಖೆಗಳು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಹುಯೋಗಿ ತಳ್ಳೋಳ್ಳಿ, ಲಕ್ಕಪ್ಪ ಬಡಿಗೇರ,…
ದೇವರಹಿಪ್ಪರಗಿ: ಮಹಿಳೆಯರು ಹಾಗೂ ಮಕ್ಕಳಿಗೆ ಸಮತೋಲಿತ ಆಹಾರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಲಯ ಮೇಲ್ವಿಚಾರಕಿ ಶಾಂತಾ ನಾಯಿಕ್ ಹೇಳಿದರು.ತಾಲ್ಲೂಕಿನ ಮಣೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜರುಗಿದ ಪಾಲಕರ ಸಭೆ ಹಾಗೂ ಪೌಷ್ಠಿಕ ಆಹಾರ ಹಾಗೂ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಆಧುನಿಕತೆಗೆ ತಕ್ಕಂತೆ ನಮ್ಮ ಆಹಾರ ಪದ್ದತಿಯೂ ಬದಲಾಗುತ್ತಿದೆ. ಪೌಷ್ಠಿಕ ಆಹಾರ ಸಿಗುವುದು ಕಷ್ಟಕರವಾಗಿದೆ. ಗರ್ಭಿಣಿ ಮಹಿಳೆಯರು ಹಾಗೂ ಬೆಳೆಯುವ ಮಕ್ಕಳಿಗೆ ಮುಖ್ಯವಾಗಿ ಕಿಶೋರಿಯರಿಗೆ ಉತ್ತಮ ಗುಣಮಟ್ಟದ ಆಹಾರ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗಬಲ್ಲದು ಅದಕ್ಕಾಗಿ ಮಹಿಳೆ ಮತ್ತು ಮಕ್ಕಳಿಗೆ ಸಮತೋಲಿತ, ಗುಣಮಟ್ಟದ, ಸತ್ವಯುತ ಆಹಾರದ ಬಗ್ಗೆ ಜಾಗೃತಿ ಮೂಡಿಸಬೇಕು. ನಾವು ಸಹ ಪಾಲಿಸಬೇಕು ಎಂದು ತಿಳಿಹೇಳಿದರು.ಸಿಎಚ್‌ಓ ರುಕಿಯಾ ಬಾಗವಾನ, ಅಂಗನವಾಡಿ ಕಾರ್ಯಕರ್ತೆಯರಾದ ಶಾಂತಾ ಚಿಗರಿ, ಪ್ರೇಮಾ ನಡುವಿನಮನಿ ಮತ್ತು ಆಶಾ ಕಾರ್ಯಕರ್ತೆಯರು, ತಾಯಂದಿರು, ಮಕ್ಕಳು ಹಾಗೂ ಕಿಶೋರಿಯರು ಪಾಲ್ಗೊಂಡಿದ್ದರು.
ವಿಜಯಪುರ: ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ “ರಾಷ್ಟ್ರೀಯ ಮತದಾರರ ದಿನ”ದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವೀಧಿಯನ್ನು ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿಯವರು ಭೋಧಿಸಿದರು.ನಂತರ ಮಾತನಾಡಿದ ಅವರು. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನದಲ್ಲಿ ಭಾಗವಹಿಸಲು ಯುವಕರನ್ನು ಉತ್ತೇಜಿಸಲು ಈ ದಿನ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರತಿಯೊಬ್ಬ ಪ್ರಜೆಗೂ ಮತದಾನದ ಮೂಲಭೂತ ಹಕ್ಕು ಇದೆ. ರಾಷ್ಟ್ರವನ್ನು ಮುನ್ನಡೆಸಲು, ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು, ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಭಾವಿಸುವವರಿಗೆ ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಅವನು ಅಥವಾ ಅವಳು ಹೊಂದಿರುತ್ತಾರೆ. ರಾಷ್ಟ್ರೀಯ ಮತದಾರರ ದಿನವು ದೇಶದ ಭವಿಷ್ಯವು ಸುಳ್ಳಾಗಿರುವುದರಿಂದ ಭಾರತದ ಮಹತ್ವದ ಮೂಲವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಬಿ.ಪೂಜಾರಿ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರು ಸಂದೀಪ ರಾಠೋಡ,…
ಇಂಡಿ: ಪರಿವರ್ತನೆ ಜಗದ ನಿಯಮ, ಜಗತ್ತು ಬದಲಾದಂತೆ ನಾವು ಬದಲಾಗಬೇಕು. ಇಲ್ಲದಿದ್ದರೆ ಜೀವನ ಜಡತ್ವಕ್ಕೆ ಸಿಲುಕುತ್ತದೆ. ನೈತಿಕತೆ ಕೆಳಮಟ್ಟಕ್ಕೆ ಇಳಿಯುತ್ತಿದೆ. ಮನೆಗಳು ದೊಡ್ಡದಾಗುತ್ತಿದ್ದು ಮನಸ್ಸುಗಳು ಸಣ್ಣದಾಗುತ್ತಿವೆ ಎಂದು ಬ್ರಹ್ಮಕುಮಾರಿ ವಿವಿಯ ರಾಜಯೋಗಿನಿ ಯಮುನಾ ಅಕ್ಕಾ ಹೇಳಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿವಿ ಯಲ್ಲಿ ಯಮುನಾ ಅಕ್ಕಾ ಮತ್ತು ಸಂಗಡಿಗರಿಂದ ಲೋಕ ಕಲ್ಯಾಣಕ್ಕಾಗಿ ೨೧ ದಿನಗಳ ಮೌನ ವೃತದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.ಬ್ರಹ್ಮಕುಮಾರಿ ಶ್ರೀದೇವಿ ಅಕ್ಕನವರು ಮಾತನಾಡಿ, ಪ್ರಸ್ತುತ ಜಗತ್ತು ಬದಲಾವಣೆಯ ದಿಕ್ಕಿನಲ್ಲಿ ಮುನ್ನುಗುತ್ತಿದ್ದು ಮನಸ್ಸಿನ ನಿಯಂತ್ರಣ ತಪ್ಪುತ್ತಿದೆ. ಕ್ಷಣಿಕ ಸುಖಕ್ಕೆ ಇಡೀ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಸಕಾರಾತ್ಮಕ ಆಲೋಚನೆಗಳನ್ನು ಮೈಗೂಡಿಸಿ ಕೋಳ್ಳಬೇಕಾಗಿದೆ ಎಂದರು.ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪುರ, ಪ್ರೊ ಎಂ.ಜೆ.ಪಾಟೀಲ,ಶಿವಲಿಂಗಪ್ಪ ಪಟ್ಟದಕಲ್ಲ ಮೌನವೃತದ ಕುರಿತು ಮಾತನಾಡಿದರು.ವಿಶ್ವನಾಥ ಜಾಮಗೊಂಡಿ, ಅರವಿಂದ ಕಠಾರೆ, ರಾಜಶ್ರೀ ಕೋಳೆಕರ, ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ, ಲಲಿತಾ ಹೂಗಾರ, ಸಾವಿತ್ರಿ ಜಾಮಗೊಂಡಿ, ಉಮಾ ಪಟ್ಟದಕಲ್ಲ, ಪವಿತ್ರಾ ವಾಲಿ, ಸುಮಾ ಪತಂಗಿ, ವಿದ್ಯಾಶ್ರೀ ಪಾಟಿಲ, ಜಯಶ್ರೀ ಪತ್ತಾರ, ದ್ರಾಕ್ಷಾಯಿಣಿ ಮೈದರಗಿ ಮತ್ತಿತರಿದ್ದರು.
ಇಂಡಿ: ಪ್ರತಿಯೊಬ್ಬರು ಶಿಕ್ಷಣದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು.ವಿದ್ಯೆ ವಿದ್ಯಾರ್ಥಿಗಳ ಜೀವನ ಬೆಳಗುವ ಕಣ್ಣು, ಕಾರಣ ಭಾರತದ ಭವಿಷ್ಯ ವಿದ್ಯಾವಂತರ ಕೈಯಲ್ಲಿ ಇದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ಹೇಳಿದರು.ಪಟ್ಟಣದ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಕಾ ಉಪಕರಣಗಳ ಪ್ರದರ್ಶನ, ಆಹಾರ ಹಬ್ಬ, ರಂಗೋಲಿ ಸ್ಪರ್ಧೇ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಸ್ಥೆಯ ಉಪಾಧ್ಯಕ್ಷ ಸಂಗಣ್ಣ ಇರಾಬಟ್ಟಿ ಮಾತನಾಡಿ, ಇಂದು ನಮ್ಮ ಯುವಕ ಯುವತಿಯರು ವಿಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದು ಜಗತ್ತು ನಮ್ಮ ಯುವಕರ ಕಾರ್ಯ ಪ್ರಶಂಸಿಸುತ್ತಿದ್ದಾರೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಪಿ.ಬಿ.ಕತ್ತಿ,ಪ್ರಾಚಾರ್ಯ ಸುಧಾ ಸುಣಗಾರ, ಮುಖ್ಯ ಗುರು ರಾಜಕುಮಾರ ಪಾಟೀಲ ವಿದ್ಯಾರ್ಥಿಗಳ ಸ್ಪರ್ಧೆ ಕುರಿತು ಮಾತನಾಡಿದರು.ಡಿ.ಎಸ್.ಮಠಪತಿ, ಸಿ.ಎಸ್.ಪೂಜಾರಿ,ಎಂ.ಎಂ.ಪೊದ್ದಾರ,ಸಂಗೀತಾ ಉಟಗಿ, ಸುರೇಖಾ ಭೈರಶೆಟ್ಟಿ, ಶೃತಿ ಬಿರಾದಾರ,ರೇಣುಕಾ ಗೊಟಗಿ, ಕಮರುನ್ನಿಸಾ ಕೊಟ್ನಾಳ ಮತ್ತಿತರಿದ್ದರು.
ದೇವರಹಿಪ್ಪರಗಿ: ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆ ಹಾಗೂ ಸಂವಿಧಾನ ಜಾಗೃತಿ ಸ್ತಬ್ಧಚಿತ್ರ ಯಾತ್ರೆಗೆ ಗೌರವಯುತವಾಗಿ ಶಿಷ್ಟಾಚಾರದೊಂದಿಗೆ ಸ್ವಾಗತಿಸೋಣ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಜರುಗಿದ ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆ ಹಾಗೂ ಸಂವಿಧಾನ ಜಾಗೃತಿ ಸ್ತಬ್ಧಚಿತ್ರ ಸಂಚಾರದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಥ ಯಾತ್ರೆ ಹಾಗೂ ಸಂವಿಧಾನ ಜಾಗೃತಿ ಸ್ತಬ್ಧಚಿತ್ರಗಳೆರಡೂ ಅತ್ಯಂತ ಮಹತ್ವ ಸಾರಿ ಹೇಳುವ ಯಾತ್ರೆಗಳಾಗಿವೆ. ಇವುಗಳನ್ನು ತಾಲ್ಲೂಕಿನಲ್ಲಿ ಎಲ್ಲ ಸಂಘ, ಸಂಸ್ಥೆ, ಸಂಘಟನೆಗಳ ಉಪಸ್ಥಿತಿಯಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಹಾಗೂ ಮುಖ್ಯವಾಗಿ ಸಾರ್ವಜನಿಕರು ಪಾಲ್ಗೊಂಡು ಸ್ವಾಗತಿಸಿ, ಬಿಳ್ಕೋಡೋಣ ಎಂದರು.ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ತಾಲ್ಲೂಕು ನೋಡಲ್ ಅಧಿಕಾರಿ ಬಿ.ಎಲ್.ಜುಮನಾಳ, ಮಾತನಾಡಿ, ಎರಡು ಯಾತ್ರೆ, ಕಾರ್ಯಕ್ರಮಗಳ ತಯಾರಿ, ರೂಪುರೇಷೆಗಳ ಕುರಿತು ಮಾತನಾಡಿದರು.ದಲಿತ ಸಂಘರ್ಷ ಸಮೀತಿಯ ವಿಭಾಗೀಯ ಸಂಚಾಲಕ ರಾವುತ ತಳಕೇರಿ, ಪ್ರಕಾಶ ಗುಡಿಮನಿ, ರಾಜಕುಮಾರ ಸಿಂದಗೇರಿ, ಹುಯೋಗಿ…
