ಕಲಕೇರಿ: ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ೧೮ ವರ್ಷ ಪೂರೈಸಿದ ಎಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂದು ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಬಸವಂತಪ್ಪ ಚನಗೊಂಡ ಕರೆ ನೀಡಿದರು.
ಕಲಕೇರಿ ಗ್ರಾಮದ ಎಸ್‌ಎಂವಿವಿ ಸಂಘದ ಬಸವೇಶ್ವರ ಸಂಯುಕ್ತ ಪಪೂ ಕಾಲೇಜು ಹಾಗೂ ವಿವಿದ ಅಂಗಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಸಿ ಎಸ್ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಜಗದೀಶ ಗುಮಶೇಟ್ಟಿ, ಇ ಎಎಲ್ ಸಿ ಕ್ಲಬ್ ಚಂಚಾಲಕ ಬಸವರಾಜ್ ಕುಂಬಾರ, ಎಸ್ ಪಿ ರಾಣಗಟ್ಟಿ ಮಾತನಾಡಿರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಜಿ ಜಿ ಮೇಡೆದಾರ, ಎಸ್ ಎಸ್ ಕಲಶೇಟ್ಟಿ, ರವಿಕುಮಾರ ಗುಮಶೇಟ್ಟಿ, ಸುರೇಶ ಬಿರಾದಾರ, ಜಗದೀಶ ಕಾದಳ್ಳಿ, ರವಿ ಕುಲಕರ್ಣಿ, ಶಿವಾನಂದ ಹರಿಜನ್, ವಿಶ್ವನಾಥ ಸಿಂದಗಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

