ಕಲಕೇರಿ: ಟೈಲರ್‌ಗಳಿಗೆ ಕ್ಷೇಮನಿಧಿ, ಟೈಲರ್ ಮಕ್ಕಳಿಗೆ ವಿದ್ಯಾರ್ಥಿವೇತನ, ಹೊಲಿಗೆ ಕೆಲಸಗಾರರಿಗೆ ಮನೆ, ಯಂತ್ರ ಖರೀದಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಆರೋಗ್ಯ ವಿಮೆ, ವಿವಾಹ ಧನ ಸಹಾಯ ಮತ್ತು ಹೆರಿಗೆ ಭತ್ಯೆ , ಪಿಂಚಣಿ ಸೌಲಭ್ಯ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಎಲ್ಲಾ ಟೈಲರ್‌ಗಳ ಪರವಾಗಿ ಸರಕಾರದ ಮೇಲೆ ಒತ್ತಡ ಹೇರಲು ರಾಜ್ಯದ ಮೂಲೆ ಮೂಲೆಗಳಿಂದ ಪದಾಧಿಕಾರಿಗಳು ಬೆಂಗಳೂರು ಹೊಗುತ್ತಿರುವುದಾಗಿ ಸಂಘದ ಗೌರವ ಅಧ್ಯಕ್ಷ ಶಾಂತಯ್ಯ ಹಿರೇಮಠ ಹೇಳಿದರು.
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವಲಯ ಸಮಿತಿ ಕಲಕೇರಿ ವತಿಯಿಂದ ಬೆಂಗಳೂರಿನಲ್ಲಿ ಜ.೩೦ ಮಂಗಳವಾರದಂದು ಶಾಲಿನಿ ಮೈದಾನದಲ್ಲಿ ನಡೆಯುವ ಕೆಎಸ್‌ಟಿಎ ೨೫ನೇ ವರ್ಷದ ರಜತ ಮಹೋತ್ಸವ ಕುರಿತ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು
ಈ ವೇಳೆ ಕಾರ್ಯದರ್ಶಿ ನಬಿಲಾಲ ನಾಯ್ಕೋಡಿ, ಉಪಾಧ್ಯಕ್ಷರಾದ ಮನೋಹರ ಪತ್ತಾರ, ಸದಸ್ಯರಾದ ಸುಜಾತಾ ಅವಟಿ, ಮಡಿವಾಳಪ್ಪ ಜಂಬಗಿ, ಶೋಭಾ ಗದ್ದಗಿಮಠ, ಪೂಜಾ ಬಡಿಗೇರ, ವಿಜಯಲಕ್ಷ್ಮಿ ಬಡಿಗೇರ, ಸಾವಿತ್ರಿ ಬಡಿಗೇರ ಇದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

