ಕಲಕೇರಿ: ಶಿಶು ಅಭಿವೃದ್ಧಿ ಯೋಜನೆ ಸಿಂದಗಿ ವ್ಯಾಪ್ತಿಯಲ್ಲಿ ಬರುವ ಅಸ್ಕಿ ಗ್ರಾಮ ಪಂಚಾಯತಿಯ ಆವರಣದಲ್ಲಿ ತಾಲೂಕು ಮಟ್ಟದ ಬೇಟಿ ಬಚಾವೋ, ಬೇಟಿ ಪಡಾವೋ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಮೀಪದ ಅಸ್ಕಿ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳಾದ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ, ಕುರಿತು ಕಾರ್ಯಕ್ರಮ ಉದ್ಘಾಟಿಸಿ ಶಂಭುಲಿಂಗ ಎನ್ ಹಿರೇಮಠ ಅವರು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ, ನಿಬಂಧ ಸ್ಪರ್ದೆ, ಲಿಂಬು ಸ್ಪೂನ್, ಹಗ್ಗದಾಟ, ಮ್ಯೂಜಿಕಲ್ ಚೇರ್, ಜಾನಪದ ಗೀತೆ, ದೇಶ ಭಕ್ತಿಗೀತೆ ಮುಂತಾದ ಸ್ಪರ್ದೆಗಳನ್ನು ಆಯೋಜಿಸಿ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ಅಂಗನವಾಡಿಯ ಹೆಣ್ಣು ಮಕ್ಕಳಿಗೆ ವೇಷ ಭೂಷಣ ತೊಡಿಸಲಾಯಿತು, ಹೆಣ್ಣುಮಕ್ಕಳಿಗೆ ಸುಕನ್ಯಾ ಸಮೃದ್ಧಿ ಪಾಸ್ ಬುಕ್ ವಿತರಣೆ, ಹೆಣ್ಣು ಮಗುವಾದ ತನು, ಆಲಿಶಾ ರವರ ಹೆಸರಿನಲ್ಲಿ ಅಂಗನವಾಡಿ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು ಮತ್ತು ಪೌಷ್ಟಿಕ ಆಹಾರ ಸಿದ್ದತೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಎಸ್.ಎನ್.ಕೋರವಾರ ಅವರು ಹೆಣ್ಣುಮಕ್ಕಳಿಗೆ ಸಂಬಂಧಿಸಿರುವ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಯೋಜನೆ, ಮಾತೃ ವಂದನಾ ಯೋಜನೆ, ಮಾತೃ ಪೂರ್ಣಯೋಜನೆ, ಸಾಂತ್ವನ ಕೇಂದ್ರ, ಬಾಲಕಿಯರ ವಸತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ಮುಂತಾದ ಯೋಜನೆಗಳ ಬಗ್ಗೆ ಜನರಿಗೆ ವಿವರಣೆ ನೀಡಿದರು.
ವಲಯ ಮೇಲ್ವಿಚಾರಕಿಯರಾದ ಶ್ರಿಮತಿ ಎ.ಎಮ್.ಸಜ್ಜನ, ಶಹಜಾದ ಕಾಗಲ್. ಶಾಂತಾ ನಾಯಕ್, ಅಂಗನವಾಡಿ ಸಂಘದ ಅದ್ಯಕ್ಷರಾದ ಶ್ರಿಮತಿ ಎಸ್. ಮಠ, ಗ್ರಾ.ಪಂ. ಅದ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಮಾದರ, ಉಪಾದ್ಯಕ್ಷರಾದ ಶ್ರೀಮತಿ ಯಂಕಮ್ಮ ಕಂಬಾರ, ಸ್ತ್ರೀ-ಶಕ್ತಿ ಒಕ್ಕೂಟದ ಅದ್ಯಕ್ಷರು ಸುಜಾತಾ ಮಾಳಳ್ಳಿ, ರೇಷ್ಮಾ, ಶಿಕ್ಷಕಿ ವಿಜಯಲಕ್ಷ್ಮೀ ಮಠ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಕಯಕಿಯರು, ಸ್ತ್ರೀ-ಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತರು, ಗ್ರಾ.ಪಂ ಸಿಬ್ಬಂದಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

