ದೇವರಹಿಪ್ಪರಗಿ: ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆ ಹಾಗೂ ಸಂವಿಧಾನ ಜಾಗೃತಿ ಸ್ತಬ್ಧಚಿತ್ರ ಯಾತ್ರೆಗೆ ಗೌರವಯುತವಾಗಿ ಶಿಷ್ಟಾಚಾರದೊಂದಿಗೆ ಸ್ವಾಗತಿಸೋಣ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಜರುಗಿದ ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆ ಹಾಗೂ ಸಂವಿಧಾನ ಜಾಗೃತಿ ಸ್ತಬ್ಧಚಿತ್ರ ಸಂಚಾರದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಥ ಯಾತ್ರೆ ಹಾಗೂ ಸಂವಿಧಾನ ಜಾಗೃತಿ ಸ್ತಬ್ಧಚಿತ್ರಗಳೆರಡೂ ಅತ್ಯಂತ ಮಹತ್ವ ಸಾರಿ ಹೇಳುವ ಯಾತ್ರೆಗಳಾಗಿವೆ. ಇವುಗಳನ್ನು ತಾಲ್ಲೂಕಿನಲ್ಲಿ ಎಲ್ಲ ಸಂಘ, ಸಂಸ್ಥೆ, ಸಂಘಟನೆಗಳ ಉಪಸ್ಥಿತಿಯಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಹಾಗೂ ಮುಖ್ಯವಾಗಿ ಸಾರ್ವಜನಿಕರು ಪಾಲ್ಗೊಂಡು ಸ್ವಾಗತಿಸಿ, ಬಿಳ್ಕೋಡೋಣ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ತಾಲ್ಲೂಕು ನೋಡಲ್ ಅಧಿಕಾರಿ ಬಿ.ಎಲ್.ಜುಮನಾಳ, ಮಾತನಾಡಿ, ಎರಡು ಯಾತ್ರೆ, ಕಾರ್ಯಕ್ರಮಗಳ ತಯಾರಿ, ರೂಪುರೇಷೆಗಳ ಕುರಿತು ಮಾತನಾಡಿದರು.
ದಲಿತ ಸಂಘರ್ಷ ಸಮೀತಿಯ ವಿಭಾಗೀಯ ಸಂಚಾಲಕ ರಾವುತ ತಳಕೇರಿ, ಪ್ರಕಾಶ ಗುಡಿಮನಿ, ರಾಜಕುಮಾರ ಸಿಂದಗೇರಿ, ಹುಯೋಗಿ ತಳ್ಳೋಳ್ಳಿ, ರಾವುತಮಾಸ್ತರ ತಳಕೇರಿ, ಬಸವರಾಜ ತಳಕೇರಿ, ಮಾತನಾಡಿ, ಸಭೆಗೆ ಕೆಲವು ಇಲಾಖೆಗಳ ಮುಖ್ಯಸ್ಥರು ಸತತವಾಗಿ ಗೈರಾಗುತ್ತಿದ್ದಾರೆ ಎಂದು ತಮ್ಮ ಅಭಿಪ್ರಾಯದೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಜಿಲ್ಲಾ ನೋಡಲ್ ಅಧಿಕಾರಿ ಚಂದ್ರಕಾಂತ ಪವಾರ, ಪಿಎಸ್‌ಐ ಬಸವರಾಜ ತಿಪ್ಪಾರೆಡ್ಡಿ, ಸಿಆರ್‌ಪಿ ವ್ಹಿ.ಎನ್.ನವಲಿ, ಸಮಾಜಕಲ್ಯಾಣ ಇಲಾಖೆಯ ಎಸ್.ಬಿ.ಹಚಡದ, ಪಿಡಿಓಗಳಾದ ಶಾಂತಗೌಡ ನ್ಯಾಮಣ್ಣವರ, ಕೆ.ಎಸ್.ಕಡಕಭಾವಿ, ಎಮ್.ಎನ್.ಕತ್ತಿ, ಬಿ.ಎಚ್.ಗಾವುಡೆ, ಚನ್ನಪ್ಪ ಮಲಾಬಾದ, ಮಲ್ಲು ಮಸಳಿ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಬಸಮ್ಮ ಭಾಟಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

