ದೇವರಹಿಪ್ಪರಗಿ: ಕಲಬುರಗಿ ನಗರದ ಕೋಟನೂರ ಲುಂಬಿಣಿ ಉದ್ಯಾನದಲ್ಲಿ ಡಾ.ಅಂಬೇಡ್ಕರರವರ ಪ್ರತಿಮೆಗೆ ಅವಮಾನಗೊಳಿಸಿದ ಘಟನೆಯನ್ನು ಖಂಡಿಸಿ ಬಂಧಿತ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮೀತಿಯ(ನಾಗಾವಾರ ಬಣ) ಪದಾಧಿಕಾರಿಗಳು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಆವರಣಕ್ಕೆ ಗುರುವಾರ ಆಗಮಿಸಿದ ದಲಿತ ಸಂಘರ್ಷ ಸಮೀತಿಯ ಸದಸ್ಯರು ಪ್ರತಿಭಟನೆ ಕೈಗೊಂಡರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ದ.ಸಂಸ ತಾಲ್ಲೂಕು ಸಂಚಾಲಕ ಪ್ರಕಾಶ ಗುಡಿಮನಿ ಮಾತನಾಡಿ, ಸಂವಿಧಾನಶಿಲ್ಪಿ ಅಂಬೇಡ್ಕರ ಹಾಗೂ ದೇಶದ ರಾಷ್ಟ್ರೀಯ ನಾಯಕರ ಪ್ರತಿಮೆಗಳ ಮೇಲೆ ಮೇಲಿಂದ ಮೇಲೆ ಅವಮಾನ ಮಾಡಲಾಗುತ್ತಿದೆ. ಇದರಿಂದ ಅವರ ಅನುಯಾಯಿಗಳಿಗೆ ನೋವು ಉಂಟಾಗುತ್ತಿದ್ದು, ಇದರಿಂದಾಗಿ ದೇಶದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗುತ್ತಿದೆ. ಕೂಡಲೇ ಈ ಕೃತ್ಯ ಎಸಗಿ ಬಂಧಿತರಾದ ಅಪರಾಧಿಗಳ ಮೇಲೆ ದೇಶದ್ರೋಹಿ ಕಾಯ್ದೆಯಡಿ ಕಠಿಣ ಕ್ರಮ ಕೈಕೊಳ್ಳಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಹಾಗೂ ಗುಪ್ತಚರ ಇಲಾಖೆಗಳು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹುಯೋಗಿ ತಳ್ಳೋಳ್ಳಿ, ಲಕ್ಕಪ್ಪ ಬಡಿಗೇರ, ಬಸವರಾಜ ತಳಕೇರಿ, ಸುಭಾಸ್ ನಾಟೀಕಾರ ಮಾತನಾಡಿದರು.
ರಾವುತ ಮಾಸ್ತರ ತಳಕೇರಿ, ಶಿವು ವಾಲಿಕಾರ, ಶರಣು ನಾಟಿಕಾರ, ರಾಘವೇಂದ್ರ ಗುಡಿಮನಿ, ಶಿವು ಇಂಗಳಗಿ, ಮಡಿವಾಳಪ್ಪ ಹೊಸಮನಿ, ಬಾಬು ಭಾವಿಮನಿ, ಅಪ್ಪು ಮುಲ್ಲಾ, ರಾಘವೇಂದ್ರ ತಳವಾರ, ಪಿಂಟೂ ಭಾಸ್ಕರ್, ಪರಶುರಾಮ ಬಡಿಗೇರ, ಅಶೋಕ ಗುಡಿಸಲಮನಿ, ಸೋನು ತಳವಾರ, ರಾವುತ ಎಸ್.ಟಿ, ಮಾಂತೇಶ ಚಲವಾದಿ, ಚಂದ್ರಕಾಂತ ಗುಡಿಮನಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

