Author: editor.udayarashmi@gmail.com

ಆಲಮೇಲ: ಪಟ್ಟಣದಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ ದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಪಟ್ಟಣದ ಹಿರಿಯ ಸಾಹಿತಿ ಸಿದ್ದಾರಾಮ ಉಪ್ಪಿನ ಅವರು ಧ್ವಜಾರೋಹಣ ನೆರವೇರಿಸಿದರು.ಅಧ್ಯಕ್ಷತೆಯನ್ನು ಸಂಸ್ಥೆಯ ಅದ್ಯಕ್ಷ ಎಸ್.ಆಯ್.ಜೋಗೂರ, ಅತಿಥಿಗಳಾಗಿ ಆಡಳಿತ ಮಂಡಳಿಯ ಕೋಶಾಧ್ಯಕ್ಷ ಎ.ಜಿ.ಕುಲಕರ್ಣಿ, ಸದಸ್ಯರಾದ ಶಿವಾನಂದ ಮಾರ್ಸನಳ್ಳಿ ಉಪಸ್ಥಿತರಿದ್ದರು.ಈ ವೇಳೆ ಸಂಸ್ಥೆಯ ವತಿಯಿಂದ ಸಾಹಿತಿ ಸಿದ್ದಾರಾಮ ಉಪ್ಪಿನ ರವರಿಗೆ ಇತ್ತೀಚೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದಕ್ಕಾಗಿ ಹಾಗೂ ಶಾಲೆಯ ಮುಖ್ಯ ಗುರು ಲಕ್ಷ್ಮೀಪುತ್ರ ಕಿರನಳ್ಳಿ ರವರಿಗೆ ಜ್ಯೋತಿಬಾ ಫುಲೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದಕ್ಕಾಗಿ ಸನ್ಮಾನಿಸಲಾಯಿತು.ಸನ್ಮಾನಕ್ಕೆ ಪ್ರತಿಯಾಗಿ ಮಾತನಾಡಿದ ಸಿದ್ದಾರಾಮ ಉಪ್ಪಿನ ರವರು, ಆಲಮೇಲ ಪಟ್ಟಣದಲ್ಲಿಯೇ ಬಡಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ತನ್ನ ಕಾರ್ಯವನ್ನು ಯಾವುದೇ ಪ್ರಚಾರವಿಲ್ಲದೆ ಮಾಡುತ್ತ ಬಂದಿದೆ. ಇಲ್ಲಿಯ ಮಕ್ಕಳು ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಉತ್ತಮ ಸಂಸ್ಕಾರಯುತವಾದ ಶಿಕ್ಷಣ ನೀಡುವಲ್ಲಿ ಸಂಸ್ಥೆಯ ಹಾಗೂ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು…

Read More

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಮಾಹಿತಿ ವಿಜಯಪುರ: ಮುಳವಾಡ ಏತನೀರಾವರಿ ಯೋಜನೆ 3ನೇ ಹಂತದ 15ನೇ ವಿತರಣೆ ಕಾಲುವೆ, 5ಎ ಮತ್ತು 5ಬಿ ಹೆಡ್ ವರ್ಕ್ ಕಾಮಗಾರಿಗಳಿಗೆ ಕೆಬಿಜೆಎನ್ಎಲ್ ಬೋರ್ಡ್ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿಯಲ್ಲಿ ಶುಕ್ರವಾರ ಮೌನೇಶ್ವರ ಮನುಕ ಕಲರ ಶಾರ್ಟಿಂಗ್ ಮಶೀನ್ ಉದ್ಘಾಟಿಸಿ ಅವರು ಮಾತನಾಡಿದರು.ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿ ಯೋಜನೆಗಳಿಗಾಗಿ ಒಂಬತ್ತು ಸ್ಥಾವರ ಮತ್ತು 1000 ಕಿ. ಮೀ. ಮುಖ್ಯ ಕಾಲುವೆ ನಿರ್ಮಾಣ ಮಾಡಿದ್ದೇನೆ. ರೂ. 14000 ಕೋ. ಖರ್ಚು ಮಾಡಿ ಕಾಲುವೆಗಳ ಮೂಲಕ ರೈತರ ಹೊಲಗಳಿಗೆ, ಕೆರೆಗಳಿಗೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಕೂಡ ಗಣನೀಯವಾಗಿ ಹೆಚ್ಚಿದೆ. ಇದರ ಪರಿಣಾಮ ಈ ಬಾರಿ…

Read More

ಢವಳಗಿ: ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ೭೫ನೇ ಗಣರಾಜೋತ್ಸವವನ್ನು ಆಚರಿಸಿದರು.ಅಧ್ಯಕ್ಷೆ ಶ್ರೀಮತಿ ದ್ರಾಕ್ಷಾಯಿಣಿ ಮೇಲಿನಮನಿ ಧ್ವಜಾರೋಹಣ ನೇರವೇರಿಸಿದರು. ನಿವೃತ್ತ ಶಿಕ್ಷಕ ಎಸ್ ಎಸ್ ಪಾಟೀಲ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಸುಭಾಷ ಗುಡಿಮನಿ ಮಾತನಾಡಿದರು.ಇದೇ ವೇಳೆಯಲ್ಲಿ ಗ್ರಾಮದ ವತಿಯಿಂದ ನಿವೃತ್ತಿ ಸೈನಿಕ ಬಾಪೂಗೌಡ ಬಿರಾದಾರ ಮತ್ತು ಅಂತರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾಪಟು ಎಮ್ ಕೆ ಗುಡಿಮನಿ ಅವರಿಗೆ ಸನ್ಮಾನಿಸಿ ಗೌರವಿಸಿದರು.ಗ್ರಾಮದ ಕಸ್ತೂರಬಾ ಗಾಂಧಿ ಶಾಲೆಯಲ್ಲಿ ಶಾಲೆಯ ಭೂದಾನಿ ಬಸವಂತ್ರಾಯ ಬಿರಾದಾರ ಧ್ವಜಾರೋಹಣ ನೇರವೆರಿಸಿದರು.ಗ್ರಾಮದ ಪ್ರಾಥಮಿಕ ಸಹಕಾರಿ ಸಂಘದ ಕಛೇರಿ ಮುಂದೆ ಅದ್ಯಕ್ಷ ರುದ್ರಗೌಡ ಪಾಟೀಲ ಧ್ವಜಾರೋಹಣ ನೇರವೇರಿಸಿದರು.ಗ್ರಾಮದ ಮ ಬ ಪಾಟೀಲ ಪ್ರೌಡಶಾಲೆಯಲ್ಲಿ ಶಾಲೆಯ ಅಧ್ಯಕ್ಷ ಎಸ್ ಎಸ್ ಪಾಟೀಲ, ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಶ ಪಾಟೀಲ ಹಾಗೂ ವೀರ ಮರಣಹೊಂದಿದ ಮಡಿವಾಳಪ್ಪ ನಾಯನೇಗಿಲಿ ಅವರ ಮೂರ್ತಿಯ ಮುಂದೆ ನಿವೃತ್ತ ಸೈನಿಕರಾದ ಬಾಪೂಗೌಡ ಬಿರಾದಾರ ಅವರು ಹಾಗೂ ಶ್ರೀ ಮಡಿವಾಳೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಎಮ್ ಜಿ ಬಿರಾದಾರ ಅವರು…

Read More

ಕಲಕೇರಿಯಲ್ಲಿ ವಿವಿಧೆಡೆ ೭೫ ನೇ ಗಣರಾಜ್ಯೋತ್ಸವ | ಗಮನ ಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಕಲಕೇರಿ: ಸ್ಥಳೀಯ ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ವಿವಿದ ಶಾಲಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ೭೫ ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ ದ್ವಜಾರೋಹಣ ನೆರವೆರಿಸಿ ಮಾತನಾಡಿ ಸಮಾಜದಲ್ಲಿನ ಅಸಮಾನತೆಯನ್ನು ಹೊಗಲಾಡಿಸಿ ಎಲ್ಲರನ್ನು ಸಮಾನ ರೀತಿಯಲ್ಲಿ ಬದುಕಲು ಅವಕಾಶ ಕಲ್ಪಿಸಿರುವುದು ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ ಅಂಬೇಡ್ಕರವರ ಕೊಡುಗೆ ಆಗಿದ್ದು, ಈ ದೇಶದ ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು, ಮುಖ್ಯವಾಗಿ ಬಲಿಷ್ಠ ರಾಷ್ಟç ನಿರ್ಮಾಣಕ್ಕೆ ಪ್ರತಿಯೋಬ್ಬರು ಕೈಜೊಡಿಸಬೇಕು ಎಂದು ಸಲಹೆ ನಿಡಿದರು.ಈ ವೇಳೆ ಬಸವೇಶ್ವರ ಪ್ರಾಥಮಿಕ ಶಾಲೆ,ಬಸವೇಶ್ವರ ಪ್ರೌಡಶಾಲೆಯ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಈ ವೇಳೆ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಪ್ರಾಚಾರ್ಯ ಸಿ ಎಸ್ ಹಿರೇಮಠ,ಮುಖ್ಯಗುರು ಜಗದೀಶ ಗುಮಶೇಟ್ಟಿ,ಶಾಂತು ಧುರ್ಗಿ, ಎಸ್ ಪಿ ರಾಣಗಟ್ಟಿ,ಶಿವಾನಂದ ಹರಿಜನ್ ಮಾತನಾಡಿದರು.ನಿರ್ಧೇಶಕರಾದ ಷಣ್ಮುಕಪ್ಪ ಝಳಕಿ,ದೇವಿಂದ್ರ…

Read More

ಚಿಮ್ಮಡ: ಗ್ರಾಮದಲ್ಲಿ ೭೫ನೇ ಗಣರಾಜೋತ್ಸವವನ್ನು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಡಗರ ಸಂಭ್ರಮದೊಂದಿಗೆ ಅಧ್ದೂರಿಯಿಂದ ಆಚರಿಸಲಾಯಿತು.ಗ್ರಾಮದ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕವಾಯತು, ಪ್ರಭಾತ್ ಫೇರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.ಸ್ಥಳಿಯ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಧ್ವಜಾರೊಹಣವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾ ಅಶೋಕ ಮೋಟಗಿ ನೆರೆವೇರಿಸಿದರು.ಉಪಾಧ್ಯಕ್ಷೆ ಪ್ರೇಮಾ ಪರಪ್ಪಾ ಗೋವಿಂದಗೋಳ, ಮಾಜಿ ಅಧ್ಯಕ್ಷರಾದ ಆನಂದ ಕವಟಗೋಪ್ಪ, ಗುರಲಿಂಗಪ್ಪಾ ಪೂಜಾರಿ, ಪ್ರಭು ನೇಸೂರ, ಪ್ರಕಾಶ ಪಾಟೀಲ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾಲಿಂಗ ಮಾಯಣ್ಣವರ, ಮನೋಜ ಹಟ್ಟಿ ಸೇರಿದಂತೆ ಗ್ರಾ.ಪಂ. ಸದಸ್ಯರು ಹಲವಾರು ಜನ ಪ್ರಮುಖರು ಆಗಮಿಸಿದ್ದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ ಆವರಣದಲ್ಲಿ ನಡೆದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯದ್ಯಕ್ಷರಾದ ಶಂಕರ ಬಟಕುರ್ಕಿ ನೆರವೇರಿಸಿದರು. ಉಪಾಧ್ಯಕ್ಷರಾದ ವಿರುಪಾಕ್ಷ ಕುದರಿ, ನಿರ್ದೆಶಕರಾದ ನಿಂಗಣ್ಣ ಪೂಜಾರಿ, ಹಣಮಂತ ನೇಸೂರ, ರಾಮಪ್ಪ ಜಗದಾಳ ಸೇರಿದಂತೆ ಹಲವಾರು ಜನ ರೈತ ಪ್ರಮುಖರು ಆಗಮಿಸಿದ್ದರು.ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಧ್ವಜಾರೋಹಣವನ್ನು ಮುಖ್ಯೋಪಾದ್ಯಾಯೆ…

Read More

ವಿಜಯಪುರ: ಗಣರಾಜ್ಯೋತ್ಸವ ಅಂಗವಾಗಿ ವಿಜಯಪುರ ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕುಗಳು, ಶಿಕ್ಷಣ ಹಕ್ಕುಗಳು, ಧಾರ್ಮಿಕ ಹಕ್ಕುಗಳು ಇವೆಲ್ಲವೂ ಸಹ ಸಿಕ್ಕಿದ್ದು. ಸಂವಿಧಾನ ಎಂಬುದು ಭಾರತದ ಸರ್ವೋಚ್ಛ ಕಾನೂನು. ನಮ್ಮ ಸಂವಿಧಾನವು ರಷ್ಯಾ, ಬ್ರಿಟನ್, ಅಮೆರಿಕಾ, ಇತರೆ ದೇಶಗಳ ಸಂವಿಧಾನಗಳ ಅಂಶಗಳನ್ನು ಹೊಂದಿದ್ದು, ಇದೊಂದು ಬೃಹತ್ ಸಂವಿಧಾನವಾಗಿದ್ದು, ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ ಬಿ.ಆರ್.ಅಂಬೇಡ್ಕರ್‌ರವರು. ಆದ್ದರಿಂದ ಅಂಬೇಡ್ಕರ್ ರನ್ನು ಭಾರತ ಸಂವಿಧಾನದ ಪಿತಾಮಹರು ಎನ್ನಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಸಿ. ಬಿ ದೇವರಮನಿ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಪಂಚಾಯತಿಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

Read More

ಮುದ್ದೇಬಿಹಾಳ: ತಾಲೂಕಿನ ನೇಬಗೇರಿ ಗ್ರಾಮದ ರವಿಚಂದ್ರ ಕಮ್ಮಾರ ಜ.೨೫ ರಂದು ಕಾಣೆಯಾಗಿದ್ದಾನೆ ಎಂದು ಆತನ ಪತ್ನಿ ಮಾಶಾಬಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಪ್ರೇಮ ವಿವಾಹವಾಗಿದ್ದ ಸಧ್ಯ ಪಟ್ಟಣದ ಗಣೇಶ ನಗರದಲ್ಲಿ ವಾಸವಾಗಿದ್ದ ದಂಪತಿ ಮಧ್ಯೆ ಲೋನ್ ಕಟ್ಟುವ ವಿಷಯಕ್ಕಾಗಿ ಮನಸ್ತಾಪವಾಗಿದ್ದು, ಅಂದು ಮನೆಯಿಂದ ಹೋದವನು ಮರಳಿ ಮನೆಗೆ ಬಂದಿಲ್ಲ ಎಂದು ಪತ್ನಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.ಪೋಟೋದಲ್ಲಿರುವ ಚಹರಾಪಟ್ಟಿಯ ವ್ಯಕ್ತಿ ಯಾರಿಗಾದರೂ ಕಂಡಲ್ಲಿ ೦೮೩೫೬-೨೨೦೩೩೩, ೦೮೩೫೬-೨೨೦೩೩೨ ನಂಬರ್ ಗಳಿಗೆ ಇಲ್ಲವೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ

Read More

ಮುದ್ದೇಬಿಹಾಳ: ತಾಲೂಕಿನ ರಕ್ಕಸಗಿ ಗ್ರಾ.ಪಂ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ೧೧ ಅಂಗನವಾಡಿ ಕೇಂದ್ರಗಳಿಗೆ ಕುರ್ಚಿ ಮತ್ತು ಟೇಬಲ್‌ಗಳನ್ನು ಪಂಚಾಯತ ನ ಅಧ್ಯಕ್ಷ ರಿತೇಶ್ ನಾಡಗೌಡರು ವಿತರಿಸಿದರು.ಈ ವೇಳೆ ಸದಸ್ಯರಾದ ಶಂಕರಗೌಡ ನಾಡಗೌಡರ, ನಿಂಗಣ್ಣ ಅಲ್ಲಾಪೂರ, ನಾಗಮ್ಮ ಹುಡೇದ, ಕಾರ್ಯದರ್ಶಿ ಸಿ.ಬಿ.ಹೊಳಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Read More

ಮುದ್ದೇಬಿಹಾಳದಲ್ಲಿ ವಿಳಂಬವಾದ ತಾಲೂಕಾಡಳಿತದ ಧ್ವಜಾರೋಹಣ! ಮುದ್ದೇಬಿಹಾಳ: ಪಟ್ಟಣದಲ್ಲಿ ವಿವಿಧೆಡೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನ್ಯಾಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ ಧ್ವಜಾರೋಹಣವನ್ನು ನೆರವೇರಿಸಿದರು. ನ್ಯಾಯವಾದಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದಲ್ಲಿ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಧ್ವಜಾರೋಹಣ ನೆರವೇರಿಸಿದರು.ಈ ವೇಳೆ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.ಪೊಲೀಸ್ ಠಾಣೆಯ ಸಿಪಿಐ ಕಾರ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದಲ್ಲಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಕಾರ್ಯಾಲಯದ ವತಿಯಿಂದ ಪಿಎಸ್‌ಐ ಸಂಜೀವ ತಿಪರೆಡ್ಡಿ, ತಾಲೂಕು ಪಂಚಾಯತ ಕಾರ್ಯಾಲಯದ ವತಿಯಿಂದ ಪ್ರಭಾರ ಸಹಾಯಕ ನಿರ್ದೇಶಕ(ಪಂ.ರಾ) ಖೂಬಾಸಿಂಗ್ ಜಾಧವ, ತಾಲೂಕು ಸರ್ಕಾರಿ ಆಸ್ಪತ್ರೆಯ ವತಿಯಿಂದ ಡಾ.ಅನೀಲಕುಮಾರ ಶೇಗುಣಶಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ಡಾ.ಸತೀಶ ತಿವಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಬಿಇಓ ಬಸವರಾಜ ಸಾವಳಗಿ, ಪುರಸಭೆ ಕಾರ್ಯಾಲಯದ ವತಿಯಿಂದ ಮಲ್ಲನಗೌಡ ಬಿರಾದಾರ, ವ್ಹಿಬಿಸಿ ಹೈಸ್ಕೂಲ್ ವತಿಯಿಂದ ಮುಖ್ಯ ಗುರು ಆಯ್.ಆರ್.ಗೌಡರ, ಜ್ಞಾನಭಾರತಿ ವಿದ್ಯಾಮಂದಿರದ…

Read More