ಕಲಕೇರಿಯಲ್ಲಿ ವಿವಿಧೆಡೆ ೭೫ ನೇ ಗಣರಾಜ್ಯೋತ್ಸವ | ಗಮನ ಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ
ಕಲಕೇರಿ: ಸ್ಥಳೀಯ ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ವಿವಿದ ಶಾಲಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ೭೫ ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ ದ್ವಜಾರೋಹಣ ನೆರವೆರಿಸಿ ಮಾತನಾಡಿ ಸಮಾಜದಲ್ಲಿನ ಅಸಮಾನತೆಯನ್ನು ಹೊಗಲಾಡಿಸಿ ಎಲ್ಲರನ್ನು ಸಮಾನ ರೀತಿಯಲ್ಲಿ ಬದುಕಲು ಅವಕಾಶ ಕಲ್ಪಿಸಿರುವುದು ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ ಅಂಬೇಡ್ಕರವರ ಕೊಡುಗೆ ಆಗಿದ್ದು, ಈ ದೇಶದ ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು, ಮುಖ್ಯವಾಗಿ ಬಲಿಷ್ಠ ರಾಷ್ಟç ನಿರ್ಮಾಣಕ್ಕೆ ಪ್ರತಿಯೋಬ್ಬರು ಕೈಜೊಡಿಸಬೇಕು ಎಂದು ಸಲಹೆ ನಿಡಿದರು.
ಈ ವೇಳೆ ಬಸವೇಶ್ವರ ಪ್ರಾಥಮಿಕ ಶಾಲೆ,ಬಸವೇಶ್ವರ ಪ್ರೌಡಶಾಲೆಯ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಈ ವೇಳೆ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಚಾರ್ಯ ಸಿ ಎಸ್ ಹಿರೇಮಠ,ಮುಖ್ಯಗುರು ಜಗದೀಶ ಗುಮಶೇಟ್ಟಿ,ಶಾಂತು ಧುರ್ಗಿ, ಎಸ್ ಪಿ ರಾಣಗಟ್ಟಿ,ಶಿವಾನಂದ ಹರಿಜನ್ ಮಾತನಾಡಿದರು.
ನಿರ್ಧೇಶಕರಾದ ಷಣ್ಮುಕಪ್ಪ ಝಳಕಿ,ದೇವಿಂದ್ರ ಗುಮಶೇಟ್ಟಿ,ಅಪ್ಪಾಸಾಬ್ ಗುಮಶೇಟ್ಟಿ,ಶಿವಾನಂದ ಕೋರವಾರಮಠ, ಬಿ ಜಿ ಚನಗೊಂಡ, ಬಸವರಾಜ್ ದೇವರಮನಿ,ಜೆ ಬಿ ಗುಮಶೇಟ್ಟಿ,ಎಸ್ ಎಸ್ ಕಲಶೇಟ್ಟಿ,ನಿಂಗನಗೌಡ ಗುಂಡಕನಾಳ,ರವಿ ಗುಮಶೇಟ್ಟಿ,ಡಾ.ಗುರುರಾಜ್ ಮೇಡಿದಾರ,ಜಗದೀಶ ಕಾದಳ್ಳಿ,ಆರ್ ವಿ ಕುಲಕರ್ಣಿ,ಸುಧಾ ಬಜಂತ್ರಿ,ಬಸು ಕುಂಬಾರ, ವಿರೇಶ ಝಳಕಿ, ಕೆ ಎಸ್ ದೆಸಾಯಿ,ಪವಿತ್ರಾ ಕಡಕೋಳ,ತೈಶಿನ್ ಖಾನಾಪೂರ, ಸೇರಿದಂತೆ ಇತರರು ಇದ್ದರು.
ವಿವಿದೆಡೆ ಆಚರಣೆ-ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಗ್ರಾಪಂ ಅಧ್ಯಕ್ಷ ರಾಜಹ್ಮದ್ ಸಿರಸಗಿ ದ್ವಜಾರೋಹಣ ನೇರವೇರಿಸಿದರು, ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷರು, ಪಿಡಿಓ, ಮತ್ತು ಸರ್ವ ಸದಸ್ಯರು ಹಾಜರಿದ್ದರು,ಆದರ್ಶ ಸಮೂಹ ಶಿಕ್ಷಣ ಸಂಸ್ಥೆ,ತೋಹಿದ್ ಎ ಮಿಲ್ಲತ್ ಪ್ರೌಡಶಾಲೆ,ಸಿದ್ದಾರ್ಥ ಶಿಕ್ಷಣ ಸಂಸ್ಥೆ, ಸಂಸ್ಥೆ,ಸಮುದಾಯ ಆರೋಗ್ಯ ಕೇಂದ್ರ,ಸರಕಾರಿ ಭಾಲಕರ ವಸತಿ ನಿಲಯ,ಪೀಸ್ ಇಂಟರನ್ಯಾಶನಲ್ ಶಾಲೆ,ಜೆ ಜೆ ಶಿಕ್ಷಣ ಸಂಸ್ಥೆ,ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆö,ವಿಧ್ಯಾಸಾಗರ ಶಾಲೆ,ಭವಾನಿ ಕಂಪ್ಯೂಟರ್ ತರಭೇತಿ ಕೇಂದ್ರ,ಪೋಲಿಸ್ ಠಾಣೆ,ಸಿದ್ದಸಿರಿ ಬ್ಯಾಂಕ್,ಬ್ಯಾಂಕ್ ಆಪ್ ಬರೋಡಾ ಶಾಖೆ,ಬಿಡಿಸಿಸಿ ಬ್ಯಾಂಕ್ ಎಂಪಿಎಸ್ ಶಾಲೆ ಕೆಜಿಎಸ್ ಶಾಲೆ, ಯುಬಿಎಸ್ ಶಾಲೆ ಸೇರಿದಂತೆ ವಿವಿದೆಡೆ ಸಂಬ್ರಮ ಸಡಗರದಿಂದ ೭೪ ನೇ ಗಣರಾಜ್ಯೋತ್ಸವವನ್ನು ಅಚರಿಸಲಾಯಿತು.

