ಢವಳಗಿ: ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ೭೫ನೇ ಗಣರಾಜೋತ್ಸವವನ್ನು ಆಚರಿಸಿದರು.
ಅಧ್ಯಕ್ಷೆ ಶ್ರೀಮತಿ ದ್ರಾಕ್ಷಾಯಿಣಿ ಮೇಲಿನಮನಿ ಧ್ವಜಾರೋಹಣ ನೇರವೇರಿಸಿದರು. ನಿವೃತ್ತ ಶಿಕ್ಷಕ ಎಸ್ ಎಸ್ ಪಾಟೀಲ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಸುಭಾಷ ಗುಡಿಮನಿ ಮಾತನಾಡಿದರು.
ಇದೇ ವೇಳೆಯಲ್ಲಿ ಗ್ರಾಮದ ವತಿಯಿಂದ ನಿವೃತ್ತಿ ಸೈನಿಕ ಬಾಪೂಗೌಡ ಬಿರಾದಾರ ಮತ್ತು ಅಂತರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾಪಟು ಎಮ್ ಕೆ ಗುಡಿಮನಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಗ್ರಾಮದ ಕಸ್ತೂರಬಾ ಗಾಂಧಿ ಶಾಲೆಯಲ್ಲಿ ಶಾಲೆಯ ಭೂದಾನಿ ಬಸವಂತ್ರಾಯ ಬಿರಾದಾರ ಧ್ವಜಾರೋಹಣ ನೇರವೆರಿಸಿದರು.
ಗ್ರಾಮದ ಪ್ರಾಥಮಿಕ ಸಹಕಾರಿ ಸಂಘದ ಕಛೇರಿ ಮುಂದೆ ಅದ್ಯಕ್ಷ ರುದ್ರಗೌಡ ಪಾಟೀಲ ಧ್ವಜಾರೋಹಣ ನೇರವೇರಿಸಿದರು.
ಗ್ರಾಮದ ಮ ಬ ಪಾಟೀಲ ಪ್ರೌಡಶಾಲೆಯಲ್ಲಿ ಶಾಲೆಯ ಅಧ್ಯಕ್ಷ ಎಸ್ ಎಸ್ ಪಾಟೀಲ, ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಶ ಪಾಟೀಲ ಹಾಗೂ ವೀರ ಮರಣಹೊಂದಿದ ಮಡಿವಾಳಪ್ಪ ನಾಯನೇಗಿಲಿ ಅವರ ಮೂರ್ತಿಯ ಮುಂದೆ ನಿವೃತ್ತ ಸೈನಿಕರಾದ ಬಾಪೂಗೌಡ ಬಿರಾದಾರ ಅವರು ಹಾಗೂ ಶ್ರೀ ಮಡಿವಾಳೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಎಮ್ ಜಿ ಬಿರಾದಾರ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಆನಂದ ಹೀರೆಮಠ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಎಮ್ ಕೆ ಗುಡಿಮನಿ, ಪ್ರೌಢ ಶಾಲೆ ಮುಖ್ಯಗುರು ಬಿ ಎಸ್ ಪಾಟೀಲ, ಪ್ರಾಥಮಿಕ ಶಾಲೆ ಮುಖ್ಯಗುರು ಎನ್ ಎ ತೊಂಡಿಹಾಳ, ಬಸವ ಬಾಲ ಭಾರತಿ ಶಾಲೆಯ ಮುಖ್ಯಗುರು ರಮೇಶ ಮೂಲಿಮನಿ ಹಾಗೂ ಕಸ್ತೂರಬಾ ಶಾಲೆಯ ಮುಖ್ಯ ಗುರುಮಾತೆ ಶಾರದಾ ಸಜ್ಜನ, ಸೋಮಶೇಖರ ಗಬಸಾವಳಗಿ, ಸುನೀಲಗೌಡ ಬಿರಾದಾರ, ಶಾಂತು ಹೊಸಮನಿ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

