ವಿಜಯಪುರ: ಗಣರಾಜ್ಯೋತ್ಸವ ಅಂಗವಾಗಿ ವಿಜಯಪುರ ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕುಗಳು, ಶಿಕ್ಷಣ ಹಕ್ಕುಗಳು, ಧಾರ್ಮಿಕ ಹಕ್ಕುಗಳು ಇವೆಲ್ಲವೂ ಸಹ ಸಿಕ್ಕಿದ್ದು. ಸಂವಿಧಾನ ಎಂಬುದು ಭಾರತದ ಸರ್ವೋಚ್ಛ ಕಾನೂನು. ನಮ್ಮ ಸಂವಿಧಾನವು ರಷ್ಯಾ, ಬ್ರಿಟನ್, ಅಮೆರಿಕಾ, ಇತರೆ ದೇಶಗಳ ಸಂವಿಧಾನಗಳ ಅಂಶಗಳನ್ನು ಹೊಂದಿದ್ದು, ಇದೊಂದು ಬೃಹತ್ ಸಂವಿಧಾನವಾಗಿದ್ದು, ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ ಬಿ.ಆರ್.ಅಂಬೇಡ್ಕರ್‌ರವರು. ಆದ್ದರಿಂದ ಅಂಬೇಡ್ಕರ್ ರನ್ನು ಭಾರತ ಸಂವಿಧಾನದ ಪಿತಾಮಹರು ಎನ್ನಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಸಿ. ಬಿ ದೇವರಮನಿ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಪಂಚಾಯತಿಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

