ಚಿಮ್ಮಡ: ಗ್ರಾಮದಲ್ಲಿ ೭೫ನೇ ಗಣರಾಜೋತ್ಸವವನ್ನು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಡಗರ ಸಂಭ್ರಮದೊಂದಿಗೆ ಅಧ್ದೂರಿಯಿಂದ ಆಚರಿಸಲಾಯಿತು.
ಗ್ರಾಮದ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕವಾಯತು, ಪ್ರಭಾತ್ ಫೇರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಸ್ಥಳಿಯ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಧ್ವಜಾರೊಹಣವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾ ಅಶೋಕ ಮೋಟಗಿ ನೆರೆವೇರಿಸಿದರು.
ಉಪಾಧ್ಯಕ್ಷೆ ಪ್ರೇಮಾ ಪರಪ್ಪಾ ಗೋವಿಂದಗೋಳ, ಮಾಜಿ ಅಧ್ಯಕ್ಷರಾದ ಆನಂದ ಕವಟಗೋಪ್ಪ, ಗುರಲಿಂಗಪ್ಪಾ ಪೂಜಾರಿ, ಪ್ರಭು ನೇಸೂರ, ಪ್ರಕಾಶ ಪಾಟೀಲ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾಲಿಂಗ ಮಾಯಣ್ಣವರ, ಮನೋಜ ಹಟ್ಟಿ ಸೇರಿದಂತೆ ಗ್ರಾ.ಪಂ. ಸದಸ್ಯರು ಹಲವಾರು ಜನ ಪ್ರಮುಖರು ಆಗಮಿಸಿದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ ಆವರಣದಲ್ಲಿ ನಡೆದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯದ್ಯಕ್ಷರಾದ ಶಂಕರ ಬಟಕುರ್ಕಿ ನೆರವೇರಿಸಿದರು. ಉಪಾಧ್ಯಕ್ಷರಾದ ವಿರುಪಾಕ್ಷ ಕುದರಿ, ನಿರ್ದೆಶಕರಾದ ನಿಂಗಣ್ಣ ಪೂಜಾರಿ, ಹಣಮಂತ ನೇಸೂರ, ರಾಮಪ್ಪ ಜಗದಾಳ ಸೇರಿದಂತೆ ಹಲವಾರು ಜನ ರೈತ ಪ್ರಮುಖರು ಆಗಮಿಸಿದ್ದರು.
ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಧ್ವಜಾರೋಹಣವನ್ನು ಮುಖ್ಯೋಪಾದ್ಯಾಯೆ ಎಂ.ಎಸ್. ಜಿಟ್ಟಿ ನಡೆಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ, ರಾಚಯ್ಯ ಮಠಪತಿ, ಉಮೇಶ ಪೂಜಾರಿ, ನಾಗಪ್ಪಾ ಆಲಕನೂರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

