Author: editor.udayarashmi@gmail.com

ಆಲಮಟ್ಟಿ: ನಿಡಗುಂದಿ ತಾಲ್ಲೂಕಿನ ವಂದಾಲ ಗ್ರಾಮದ ಶಕ್ತಿ ದೇವತೆ ಬನಶಂಕರಿ ದೇವಿಯ ರಥೋತ್ಸವ ಸೋಮವಾರ ಸಂಜೆ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜ್ರಂಭನೆಯಿಂದ ಜರುಗಿತು.ಈ ವೇಳೆ ನೆರೆದಂತ ಸಹಸ್ರಾರು ಭಕ್ತಗಣ ಬನಶಂಕರಿ ನಿನ್ನ ಪಾದಕ್ಕೆ ಶಂಬೂಕೋ ಎಂದು ಜಯಘೋಷ ಮೊಳಗಿಸುತ್ತ ಹಣ್ಣು, ಕಾಯಿ, ಉತ್ತತ್ತಿ, ಬತ್ತಾಸುಗಳನ್ನು ಮಹಾರಥದ ಮೇಲೆ ತೂರುತ್ತ ಭಕ್ತಿ ಭಾವದಿಂದ ನಮಿಸಿ ಭವ್ಯ ಉತ್ಸವವನ್ನು ಕಣ್ತುಂಬಿಕೊಂಡರು. ಇದಕ್ಕೂ ಮುಂಚೆ ನೂರಾರು ಭಕ್ತರು ಬೆಳಗಿನ ಜಾವ ಪಾದಗಟ್ಟಿಯಿಂದ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಬಳಿಕ ನೈವೇದ್ಯವನ್ನು ಅರ್ಪಿಸಿ ಕೃತಾರ್ಥಭಾವ ಮೆರೆದರು. ಗ್ರಾಮದ ಎಲ್ಲಾ ಜಾತಿ ಜನಾಂಗದವರು ಸೇರಿ ಜಾತ್ರಾ ಮಹೋತ್ಸವದ ವಿವಿಧ ಬಾಬತ್ತಿನ ಕಾರ್ಯಗಳನ್ನು ನಿರ್ವಹಿಸಿದರು.ರಾತ್ರಿ ಹೂಮಾಲೆಯ ಮೆರವಣಿಗೆಯ ನಂತರ ೯ ಗಂಟೆಗೆ ಹುಣಶ್ಯಾಳ-ಪಿಸಿ ಗ್ರಾಮದ ಕೆಂಧೂಳಿ ಸಂಗೀತ ಸಪ್ತಸ್ವರ ಸಿಂಚನ ಬಳಗದ ವತಿಯಿಂದ ರಸಮಂಜರಿ ಕಾರ್ಯಕ್ರಮ, ಶಾಂಭವಿ ಕುಲಕರ್ಣಿ ಅವರಿಂದ ಕಥಕ್ ಜಾನಪದ ನೃತ್ಯ ಪ್ರದರ್ಶನಗೊಂಡಿತು.

Read More

ಆಲಮಟ್ಟಿ: ಗುರುವಂದನಾ ಕಾರ್ಯಕ್ರಮ ನಡೆಸಲು, ಶಿಕ್ಷಣ ಜತೆಗೆ ದೊರೆತ ಉತ್ತಮ ಸಂಸ್ಕಾರವೇ ಕಾರಣ ಎಂದು ನಿವೃತ್ತ ಶಿಕ್ಷಕ ಎಸ್.ಐ. ಹರಣಶಿಕಾರಿ ಅಭಿಪ್ರಾಯಪಟ್ಟರು.ಇಲ್ಲಿಯ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಇಲ್ಲಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೧೯೯೪-೯೫ ನೇ ಸಾಲಿನಲ್ಲಿ ೭ ನೇ ವರ್ಗ ಪಾಸಾದ ಹಾಗೂ ೧೯೯೭-೯೮ ನೇ ಸಾಲಿನಲ್ಲಿ ಎಂಎಚ್ ಎಂ ಪ್ರೌಡಶಾಲೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿದ್ಯಾರ್ಥಿಗಳ ಅದಮ್ಯ ಪ್ರೀತಿ ಮತ್ತು ಶಿಕ್ಷಕರ ಅವಿನಾಭಾವ ಸಂಬಂಧ ವರ್ಣಿಸಲಸಾಧ್ಯ ಎಂದರು.ಹಿಂದೆ ತಾವು ಮಾಡಿದ ಕರ್ಮದ ಪರಿಣಾಮವೇ ಈಗ ನೀವು ಅನುಭವಿಸುತ್ತಿರುವ ಜೀವನ, ಹೀಗಾಗಿ ಸದಾ ಒಳ್ಳೆಯದನ್ನೇ ಮಾಡಿ, ಒಳ್ಳೆಯದನ್ನೇ ಬಯಸಿ, ಇದೇ ಬದುಕಿನ ಯಶಸ್ಸಿನ ಮಂತ್ರ ಎಂದರು.ನಿವೃತ್ತ ಶಿಕ್ಷಕರಾದ ವಿ.ಎ. ಭಾಂಡವಳಕರ, ಸಿ.ಎಸ್. ಕಣಕಾಲಮಠ, ನೀಲಾಂಬಿಕಾ ಪಾಟೀಲ, ಕೆ.ಎಂ. ತಾಂಬೆ, ಪಿ.ಎಲ್. ಮಿಂಚನಾಳ ಮಾತನಾಡಿ, ಇಳಿ ವಯಸ್ಸಿನಲ್ಲಿ ತಾವು ಮಾಡಿದ ಗುರುವಂದನೆಯಿಂದ ನಮಗೂ ಒಂದು ಟಾನಿಕ್ ಇದ್ದ ಹಾಗೆ ಎಂದು ಅಭಿಪ್ರಾಯಪಟ್ಟರು. ಹಳೆ ವಿದ್ಯಾರ್ಥಿಗಳಾದ ಸದಾನಂದ ಗುಡಗುಂಟಿ, ಮಹೇಶ…

Read More

ಮುದ್ದೇಬಿಹಾಳ: ರಾಜ್ಯದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಶಾಸಕ ಸಿ.ಎಸ್.ನಾಡಗೌಡರನ್ನು ನಿಗಮದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಜಿ.ವಿಜಯಕರ, ತಾಲೂಕು ಘಟಕದ ಅಧ್ಯಕ್ಷ ಶ್ರೀಕಾಂತ್ ಚಲವಾದಿ, ಗುತ್ತಿಗೆದಾರ ವಾಯ್.ವಾಯ್.ಚಲವಾದಿ, ವೀರೇಶ್ ಭಜಂತ್ರಿ, ಶರಣು ಚಲವಾದಿ, ಶೇಕು ಕಟ್ಟಿಮನಿ, ಭೀಮಣ್ಣ ಬಿಜ್ಜೂರ, ಸಿದ್ದು ಕಟ್ಟಿಮನಿ, ಲಕ್ಷ್ಮಣ ಚಲವಾದಿ, ಮಲ್ಲಪ್ಪ ಮುದ್ನಾಳ, ಸಂಗಪ್ಪ ವಿಜಯಕರ, ಯಲ್ಲಪ್ಪ ನಾಗರಬೆಟ್ಟ ಸೇರಿದಂತೆ ಮತ್ತೀತರರು ಇದ್ದರು.

Read More

ನಿಡಗುಂದಿ: ಸದೃಢ ಭಾರತ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅತೀ ಮಹತ್ವದ್ದಾಗಿದೆ ಎಂದು ಆಯುರ್ವೇದ ತಜ್ಞ ಡಾ.ಹನಮಂತ ಮಲಾಲಿ ಹೇಳಿದರು.ಪಟ್ಟಣದ ಸುಜ್ಞಾನ ನ್ಯಾಷನಲ್ ಪಬ್ಲಿಕ್ ಶಾಲೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ವಸ್ತುವಿಗೂ ಸಂಸ್ಕಾರ ಕೊಟ್ಟರೆ ಉತ್ತಮ ಫಲದೊರೆಯಲಿದೆ ಎಂದರು.ಕಾರ್ಯಕ್ರಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದ ರೇಣುಕಾ ಅಕ್ಕ ಮತ್ತು ಎಂ ಬಿ ಹಿರೇಮಠ ಜಂಟಿಯಾಗಿ ಉದ್ಘಾಟಿಸಿದರು,ಜ್ಯೋತಿರ್ಲಿಂಗ ಹೊನ್ನಕಟ್ಟಿ ಮಾತನಾಡಿ, ಶಾಲೆಗಳು ಜೀವಂತ ದೇವಾಲಯಗಳು ದೇವರು ಎಲ್ಲಾ ಭಕ್ತರಿಂದ ಕೈ ಮುಗಿಸಿಕೊಳ್ಳಬೇಕಾದರೆ ಪಾಲಕ, ಪೋಷಕ ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಶಾಲೆಯಲ್ಲಿ ಕಲಿತ ಮಕ್ಕಳು ಉತ್ತಮ ಸಮಾಜ ನಿರ್ಮಾಣ ಮತ್ತು ದೇಶಕ್ಕೆ ಒಳ್ಳೆಯ ಕೀರ್ತಿ ತರುವಂತಹ ಮಕ್ಕಳು ಈ ಶಾಲೆಯಲ್ಲಿ ಇದ್ದಾರೆ. ಶಿಕ್ಷಣ ಜೊತೆಗೆ ಸಂಸ್ಕಾರ ಮುಖ್ಯ ಮತ್ತು ಆರೋಗ್ಯ ಕ್ರೀಡೆ ಮಕ್ಕಳಿಗೆ ಅವಶ್ಯವಾಗಿದೆ ಎಂದು ಹೇಳಿದರು,ಸುಜ್ಞಾನ ನ್ಯಾಷನಲ್ ಪಬ್ಲಿಕ್ ಶಾಲೆ ಸಂಸ್ಥಾಪಕ ಪ್ರಾಣೇಶ್ ಜೋಶಿ ಮಾತನಾಡಿದರು.ಎಂ ಬಿ ಹಿರೇಮಠ, ಡಾ.ಹನುಮಂತ ಮಲಾಲಿ, ಜ್ಯೋತಿರ್ಲಿಂಗ ಹೊನ್ನ ಕಟ್ಟಿ, ಅನಿಲ್ ಜೋಶಿ, ಸರೋಜಾ…

Read More

ಮಹಾನಗರ ಪಾಲಿಕೆ ಸಾಮಾನ್ಯ ಸಭೆ | ಉಸ್ತವಾರಿ ಸಚಿವ ಡಾ.ಎಂ.ಬಿ.ಪಾಟೀಲ ಖಡಕ್ ಸೂಚನೆ ವಿಜಯಪುರ: ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ತತಕ್ಷಣ ಕಾರ್ಯ ಕೈಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಕಟ್ಟುನಿಟ್ಟಾಗಿ ಹೇಳಿದರು.ಸೋಮವಾರ ನಗರದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರಕ್ಕೆ ೮೪ ಎಂ.ಎಲ್.ಡಿ ನೀರು ಅವಶ್ಯಕತೆ ಇದ್ದು, ಸದ್ಯ ನಮಗೆ ೫೦ ಎಂ.ಎಲ್.ಡಿ ನೀರು ಲಭ್ಯವಾಗುತ್ತಿದೆ. ಆದ್ದರಿಂದ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಖಡಕ್ ಸೂಚನೆ ನೀಡಿದರು.ನಗರದಲ್ಲಿರುವ ಹಲವಾರು ಐತಿಹಾಸಿಕ ಭಾವಿಗಳನ್ನು ಈಗಾಗಲೇ ಸ್ವಚ್ಚಗೊಳಿಸಲು ಕ್ರಮವಹಿಸಿದ್ದು, ಈ ಬಾವಿಗಳಲ್ಲಿರುವ ನೀರನ್ನು ಇತರ ಗೃಹೋಪಯೋಗಿ ಉಪಯೋಗಗಳಿಗೆ ಬಳಕೆ ಮಾಡಿದಲ್ಲಿ ಕುಡಿಯುವ ನೀರಿನ ಒತ್ತಡ ತಗ್ಗಿಸಬಹುದಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಈಗಾಗಲೇ ಕೊರೆಯಿಸಿದ ಬೋರ್‌ವೆಲ್‌ಗಳಿಗೆ ಶೀಘ್ರವಾಗಿ ಮೋಟಾರ್‌ನ್ನು ಅಳವಡಿಸಿ ನೀರನ್ನು ಬಳಸುವಂತೆ…

Read More

ಯಡ್ರಾಮಿ: ನಾಡಿನ ಖ್ಯಾತ ಸಂಶೋಧಕ-ಸಾಹಿತಿ ಡಿ.ಎನ್.ಅಕ್ಕಿ ಗೋಗಿ ಅವರ ಸಾಹಿತ್ಯಿಕ ಸೇವೆಯನ್ನು ಗುರುತಿಸಿ ಕನ್ನಡಪರ ಹೋರಾಟಗಾರ ಬಸವರಾಜ ಪಡುಕೋಟೆ ಸಾರಥ್ಯದ ನಮ್ಮ ಕರ್ನಾಟಕ ಸೇನೆ ಬೆಂಗಳೂರಿನ ಅರಮನೆ ಗಾಯತ್ರಿ ಮೈದಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಲಾಯಿತು.ಸಂಗಮ ಹರ್ಷ: ಡಿ.ಎನ್.ಅಕ್ಕಿ ಅವರು ದ.ರಾ.ಬೇಂದ್ರೆ ಪ್ರಶಸ್ತಿ ಸ್ವೀಕರಿಸಿದ ಈ ಸಂದರ್ಭದಲ್ಲಿ ಯಡ್ರಾಮಿ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ನ ಅಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮಿಗಳು, ಪ್ರಕಾಶ ಸಾಹು ಬೆಲ್ಲದ, ಪ್ರಶಾಂತ ಅಂಗಡಿ, ಆರ್.ಜಿ.ಪುರಾಣಿಕ, ಬಸವರಾಜ ಅರಕೇರಿ, ಸಿದ್ದು ಹೂಗಾರ, ಪತ್ರಕರ್ತ ಮಲ್ಲಿಕಾರ್ಜುನ, ಲೇಖಕ ಕಿಶೋರ್ ಕುಮಾರ್, ಪತ್ರಕರ್ತ ವಿಜಯೇಂದ್ರ ಕುಲಕರ್ಣಿ, ಇತರರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ಪಟ್ಟಣದ ಈರಕಾರ ಮುತ್ಯಾನ ದೇವಸ್ಥಾನದಲ್ಲಿ ಜ.೩೦ ರಂದು ಬೆಳಗ್ಗೆ ೧೧ ಗಂಟೆಗೆ ತಾಲೂಕಿನ ಬಂಜಾರಾ ಸಮಾಜದ ಜನಪ್ರತಿನಿಧಿಗಳ, ಮುಖಂಡರ ಸಭೆ ಕರೆಯಲಾಗಿದೆ.ಈ ಸಭೆಯಲ್ಲಿ ಸಂತ ಸೇವಾಲಾಲ ಅವರ ಜಯಂತಿ ಆಚರಣೆ, ಸಮಾಜ ಸಂಘಟನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು. ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನಪ್ರತಿನಿಧಿಗಳು, ಮುಖಂಡರು, ಮಾಜಿ ಜಿಪಂ, ತಾಪಂ ಸದಸ್ಯರು,ಯುವಕರು, ಮಹಿಳಾ ಪ್ರತಿನಿಧಿಗಳು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಪುರಸಭೆ ಸದಸ್ಯ ನೀಲಪ್ಪ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ಪ್ರಥಮ ಸ್ಕಂದ ಭಾಗವತ ಮೋದ ಪ್ರಯುಕ್ತ ಸೌರಭ ಸಾಹಿತ್ಯ ಪರೀಕ್ಷಾ ಉದ್ಘಾಟನಾ ಸಮಾರಂಭ ಜರುಗಿತು.ಸೌರಭ ದಾಸ ಸಾಹಿತ್ಯದ ವಿದ್ಯಾಲಯದ ಅರ್ಧ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಉದ್ಘಾಟನೆ ಈ ಕಾರ್ಯಕ್ರಮವು ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹ ಹಾಗೂ ಆಶೀರ್ವಾದದಿಂದ ಜರುಗಿತು.ಕಾರ್ಯಕ್ರಮದ ಸಾನಿಧ್ಯವನ್ನು ಪ್ರಮೋದಾಚಾರ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಆನಂದ ಜೋಶಿಯವರು ದಾಸ ಸಾಹಿತ್ಯದ ಸವಿಸ್ತಾರ ವಿವರಣೆಯನ್ನು ಮಾಡಿ ಸಾಹಿತ್ಯದ ಘನತೆಯನ್ನು ತಿಳಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಬಸವನಬಾಗೇವಾಡಿ ಸಂಚಾಲಕಿ ಜಯಶ್ರೀ ಜಯತೀರ್ಥ ವಹಿಸಿದ್ದರು. ವಿಜಯಪುರ ಜಿಲ್ಲಾ ಗ್ರಾಮೀಣ ಸಂಚಾಲಕಿ ವಿದ್ಯಾ ಕುಲಕರ್ಣಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ ಅನೇಕ ದಾಸರ ಹಾಗೂ ಶ್ರೀರಾಮಚಂದ್ರ ದೇವರ ಫಲಕಗಳನ್ನು ಅಲಂಕರಿಸಿ ದಾಸ ಸಾಹಿತ್ಯದ ವೈಭವವನ್ನು ನಿರೂಪಿಸುವಂತೆ ಸುಸಜ್ಜಿತಗೊಳಿಸಲಾಗಿತ್ತು.ಕೃಷ್ಣಾಜಿ ಕುಲಕರ್ಣಿ ,ರಾಘವೇಂದ್ರ ಆಶ್ರೀತ, ಪಿ.ಸಿ. ಕುಲಕರ್ಣಿ, ವಸಂತಆಚಾರ್ಯ ಇಂಗಳೇಶ್ವರ ಇತರರು ಇದ್ದರು.ಗೋವಿಂದರಾಜ್ ದೇಶಪಾಂಡೆ, ಅನಂತ ಕುಲಕರ್ಣಿ ನಿರೂಪಿಸಿದರು.

Read More

ಬಸವನಬಾಗೇವಾಡಿ: ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಶುಕ್ರವಾರ ಕಂದಾಯ ಇಲಾಖೆಯ ಆಯುಕ್ತರಾದ ಪಮ್ಮಲು ಸುನೀಲಕುಮಾರ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಆಯುಕ್ತರೊಂದಿಗೆ ಮಾತನಾಡಿದ ಅವರು, ರೈತ ಬಾಂಧವರ ಪ್ರಮುಖ ಕೆಲಸಗಳಾದ ಟ್ರಿಬ್ಯುನಲ್ ಪ್ರಕರಣ, ಬಿನ್ ಶೇತ್ಕಿ, ಪಹಣಿ ತಿದ್ದುಪಡಿ, ಸರ್ಕಾರ ನಿರ್ಭಂದನೆ ಸೇರಿದಂತೆ ಹಲವಾರು ಕೆಲಸಗಳು ಕಂದಾಯ ಉಪವಿಭಾಗಾಧಿಕಾರಿ ಕಚೇರಿ ವ್ಯಾಪ್ತಿಗೆ ಬರುವದರಿಂದಾಗಿ ದಿನನಿತ್ಯ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಬಿಟ್ಟು ವಿಜಯಪುರದಲ್ಲಿರುವ ಕಂದಾಯ ಉಪವಿಭಾಗಾಧಿಕಾರಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಇದರಿಂದಾಗಿ ರೈತ ಬಾಂಧವರಿಗೆ ತೊಂದರೆಯಾಗುತ್ತಿದೆ. ಬಸವನಬಾಗೇವಾಡಿಯು ಮಧ್ಯವರ್ತಿ ಕೇಂದ್ರ ಸ್ಥಾನದಲ್ಲಿರುವುದರಿಂದಾಗಿ ಇಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಿದರೆ ಬಸವನಬಾಗೇವಾಡಿ, ಮುದ್ದೇಬಿಹಾಳ ಸೇರಿದಂತೆ ಇದರ ಸುತ್ತಮುತ್ತ ಇರುವ ತಾಲೂಕಿನ ರೈತ ಬಾಂಧವರಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಹೊನಕೆರೆಪ್ಪ ತೆಲಗಿ, ಪ್ರಭುಗೌಡ ಪೊತರೆಡ್ಡಿ, ಚಂದ್ರಾಮ ಹಿಪ್ಪಲಿ, ಪಾಂಡು ಹ್ಯಾಟಿ, ಜಯಪ್ರಕಾಶ…

Read More

ಮೋರಟಗಿ: ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ನಿರ್ಮಾಣದಲ್ಲಿ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಾಹಿತಿ, ಉಪನ್ಯಾಸಕ ಶ್ರೀಕಾಂತ ಕೆಂಧೂಳಿ ಹೇಳಿದರು.ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಹಮ್ಮಿಕೊಂಡ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮನ್ವಯಾಧಿಕಾರಿ ಎಸ್.ವ್ಹಿ. ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಿ, ಉನ್ನತ ಹುದ್ದೆಯ ಅಧಿಕಾರಿಗಳಾಗಿ ತಾವು ಕಲಿತ ಶಾಲೆಗೆ ಹೆಸರು ತರುವಂತ ಕಾರ್ಯವಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಸಂಯೊಜಕ ಎಸ, ಎಸ್ದ.ನಿಗಡಿ, ಪ್ರಾಂಶುಪಾಲ ಎ,ಬಿ,ಸಿಂದಗಿ, ಸಿದ್ದು ಕೆರಿಗೊಂಡ ಸೇರಿದಂತೆ ವಿದ್ಯಾರ್ಥಿಗಳು ಪಾಲಕರು ಕಲ್ಪವೃಕ್ಷ ಆಡಳಿತ ಮಂಡಳಿ ಉಪಸ್ಥತರಿದ್ದರು.

Read More