ಆಲಮಟ್ಟಿ: ನಿಡಗುಂದಿ ತಾಲ್ಲೂಕಿನ ವಂದಾಲ ಗ್ರಾಮದ ಶಕ್ತಿ ದೇವತೆ ಬನಶಂಕರಿ ದೇವಿಯ ರಥೋತ್ಸವ ಸೋಮವಾರ ಸಂಜೆ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜ್ರಂಭನೆಯಿಂದ ಜರುಗಿತು.
ಈ ವೇಳೆ ನೆರೆದಂತ ಸಹಸ್ರಾರು ಭಕ್ತಗಣ ಬನಶಂಕರಿ ನಿನ್ನ ಪಾದಕ್ಕೆ ಶಂಬೂಕೋ ಎಂದು ಜಯಘೋಷ ಮೊಳಗಿಸುತ್ತ ಹಣ್ಣು, ಕಾಯಿ, ಉತ್ತತ್ತಿ, ಬತ್ತಾಸುಗಳನ್ನು ಮಹಾರಥದ ಮೇಲೆ ತೂರುತ್ತ ಭಕ್ತಿ ಭಾವದಿಂದ ನಮಿಸಿ ಭವ್ಯ ಉತ್ಸವವನ್ನು ಕಣ್ತುಂಬಿಕೊಂಡರು. ಇದಕ್ಕೂ ಮುಂಚೆ ನೂರಾರು ಭಕ್ತರು ಬೆಳಗಿನ ಜಾವ ಪಾದಗಟ್ಟಿಯಿಂದ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಬಳಿಕ ನೈವೇದ್ಯವನ್ನು ಅರ್ಪಿಸಿ ಕೃತಾರ್ಥಭಾವ ಮೆರೆದರು. ಗ್ರಾಮದ ಎಲ್ಲಾ ಜಾತಿ ಜನಾಂಗದವರು ಸೇರಿ ಜಾತ್ರಾ ಮಹೋತ್ಸವದ ವಿವಿಧ ಬಾಬತ್ತಿನ ಕಾರ್ಯಗಳನ್ನು ನಿರ್ವಹಿಸಿದರು.
ರಾತ್ರಿ ಹೂಮಾಲೆಯ ಮೆರವಣಿಗೆಯ ನಂತರ ೯ ಗಂಟೆಗೆ ಹುಣಶ್ಯಾಳ-ಪಿಸಿ ಗ್ರಾಮದ ಕೆಂಧೂಳಿ ಸಂಗೀತ ಸಪ್ತಸ್ವರ ಸಿಂಚನ ಬಳಗದ ವತಿಯಿಂದ ರಸಮಂಜರಿ ಕಾರ್ಯಕ್ರಮ, ಶಾಂಭವಿ ಕುಲಕರ್ಣಿ ಅವರಿಂದ ಕಥಕ್ ಜಾನಪದ ನೃತ್ಯ ಪ್ರದರ್ಶನಗೊಂಡಿತು.
Subscribe to Updates
Get the latest creative news from FooBar about art, design and business.
Related Posts
Add A Comment

