ಬಸವನಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ಪ್ರಥಮ ಸ್ಕಂದ ಭಾಗವತ ಮೋದ ಪ್ರಯುಕ್ತ ಸೌರಭ ಸಾಹಿತ್ಯ ಪರೀಕ್ಷಾ ಉದ್ಘಾಟನಾ ಸಮಾರಂಭ ಜರುಗಿತು.
ಸೌರಭ ದಾಸ ಸಾಹಿತ್ಯದ ವಿದ್ಯಾಲಯದ ಅರ್ಧ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಉದ್ಘಾಟನೆ ಈ ಕಾರ್ಯಕ್ರಮವು ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹ ಹಾಗೂ ಆಶೀರ್ವಾದದಿಂದ ಜರುಗಿತು.
ಕಾರ್ಯಕ್ರಮದ ಸಾನಿಧ್ಯವನ್ನು ಪ್ರಮೋದಾಚಾರ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಆನಂದ ಜೋಶಿಯವರು ದಾಸ ಸಾಹಿತ್ಯದ ಸವಿಸ್ತಾರ ವಿವರಣೆಯನ್ನು ಮಾಡಿ ಸಾಹಿತ್ಯದ ಘನತೆಯನ್ನು ತಿಳಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಬಸವನಬಾಗೇವಾಡಿ ಸಂಚಾಲಕಿ ಜಯಶ್ರೀ ಜಯತೀರ್ಥ ವಹಿಸಿದ್ದರು. ವಿಜಯಪುರ ಜಿಲ್ಲಾ ಗ್ರಾಮೀಣ ಸಂಚಾಲಕಿ ವಿದ್ಯಾ ಕುಲಕರ್ಣಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಅನೇಕ ದಾಸರ ಹಾಗೂ ಶ್ರೀರಾಮಚಂದ್ರ ದೇವರ ಫಲಕಗಳನ್ನು ಅಲಂಕರಿಸಿ ದಾಸ ಸಾಹಿತ್ಯದ ವೈಭವವನ್ನು ನಿರೂಪಿಸುವಂತೆ ಸುಸಜ್ಜಿತಗೊಳಿಸಲಾಗಿತ್ತು.
ಕೃಷ್ಣಾಜಿ ಕುಲಕರ್ಣಿ ,ರಾಘವೇಂದ್ರ ಆಶ್ರೀತ, ಪಿ.ಸಿ. ಕುಲಕರ್ಣಿ, ವಸಂತಆಚಾರ್ಯ ಇಂಗಳೇಶ್ವರ ಇತರರು ಇದ್ದರು.
ಗೋವಿಂದರಾಜ್ ದೇಶಪಾಂಡೆ, ಅನಂತ ಕುಲಕರ್ಣಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

