ನಿಡಗುಂದಿ: ಸದೃಢ ಭಾರತ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅತೀ ಮಹತ್ವದ್ದಾಗಿದೆ ಎಂದು ಆಯುರ್ವೇದ ತಜ್ಞ ಡಾ.ಹನಮಂತ ಮಲಾಲಿ ಹೇಳಿದರು.
ಪಟ್ಟಣದ ಸುಜ್ಞಾನ ನ್ಯಾಷನಲ್ ಪಬ್ಲಿಕ್ ಶಾಲೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ವಸ್ತುವಿಗೂ ಸಂಸ್ಕಾರ ಕೊಟ್ಟರೆ ಉತ್ತಮ ಫಲದೊರೆಯಲಿದೆ ಎಂದರು.
ಕಾರ್ಯಕ್ರಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದ ರೇಣುಕಾ ಅಕ್ಕ ಮತ್ತು ಎಂ ಬಿ ಹಿರೇಮಠ ಜಂಟಿಯಾಗಿ ಉದ್ಘಾಟಿಸಿದರು,
ಜ್ಯೋತಿರ್ಲಿಂಗ ಹೊನ್ನಕಟ್ಟಿ ಮಾತನಾಡಿ, ಶಾಲೆಗಳು ಜೀವಂತ ದೇವಾಲಯಗಳು ದೇವರು ಎಲ್ಲಾ ಭಕ್ತರಿಂದ ಕೈ ಮುಗಿಸಿಕೊಳ್ಳಬೇಕಾದರೆ ಪಾಲಕ, ಪೋಷಕ ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಶಾಲೆಯಲ್ಲಿ ಕಲಿತ ಮಕ್ಕಳು ಉತ್ತಮ ಸಮಾಜ ನಿರ್ಮಾಣ ಮತ್ತು ದೇಶಕ್ಕೆ ಒಳ್ಳೆಯ ಕೀರ್ತಿ ತರುವಂತಹ ಮಕ್ಕಳು ಈ ಶಾಲೆಯಲ್ಲಿ ಇದ್ದಾರೆ. ಶಿಕ್ಷಣ ಜೊತೆಗೆ ಸಂಸ್ಕಾರ ಮುಖ್ಯ ಮತ್ತು ಆರೋಗ್ಯ ಕ್ರೀಡೆ ಮಕ್ಕಳಿಗೆ ಅವಶ್ಯವಾಗಿದೆ ಎಂದು ಹೇಳಿದರು,
ಸುಜ್ಞಾನ ನ್ಯಾಷನಲ್ ಪಬ್ಲಿಕ್ ಶಾಲೆ ಸಂಸ್ಥಾಪಕ ಪ್ರಾಣೇಶ್ ಜೋಶಿ ಮಾತನಾಡಿದರು.
ಎಂ ಬಿ ಹಿರೇಮಠ, ಡಾ.ಹನುಮಂತ ಮಲಾಲಿ, ಜ್ಯೋತಿರ್ಲಿಂಗ ಹೊನ್ನ ಕಟ್ಟಿ, ಅನಿಲ್ ಜೋಶಿ, ಸರೋಜಾ ಜೋಶಿ, ಬಸವರಾಜ್ ಪೂಜಾರಿ ಹಾಗೂ ಪಾಲಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

