ಬಸವನಬಾಗೇವಾಡಿ: ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಶುಕ್ರವಾರ ಕಂದಾಯ ಇಲಾಖೆಯ ಆಯುಕ್ತರಾದ ಪಮ್ಮಲು ಸುನೀಲಕುಮಾರ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಯುಕ್ತರೊಂದಿಗೆ ಮಾತನಾಡಿದ ಅವರು, ರೈತ ಬಾಂಧವರ ಪ್ರಮುಖ ಕೆಲಸಗಳಾದ ಟ್ರಿಬ್ಯುನಲ್ ಪ್ರಕರಣ, ಬಿನ್ ಶೇತ್ಕಿ, ಪಹಣಿ ತಿದ್ದುಪಡಿ, ಸರ್ಕಾರ ನಿರ್ಭಂದನೆ ಸೇರಿದಂತೆ ಹಲವಾರು ಕೆಲಸಗಳು ಕಂದಾಯ ಉಪವಿಭಾಗಾಧಿಕಾರಿ ಕಚೇರಿ ವ್ಯಾಪ್ತಿಗೆ ಬರುವದರಿಂದಾಗಿ ದಿನನಿತ್ಯ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಬಿಟ್ಟು ವಿಜಯಪುರದಲ್ಲಿರುವ ಕಂದಾಯ ಉಪವಿಭಾಗಾಧಿಕಾರಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಇದರಿಂದಾಗಿ ರೈತ ಬಾಂಧವರಿಗೆ ತೊಂದರೆಯಾಗುತ್ತಿದೆ. ಬಸವನಬಾಗೇವಾಡಿಯು ಮಧ್ಯವರ್ತಿ ಕೇಂದ್ರ ಸ್ಥಾನದಲ್ಲಿರುವುದರಿಂದಾಗಿ ಇಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಿದರೆ ಬಸವನಬಾಗೇವಾಡಿ, ಮುದ್ದೇಬಿಹಾಳ ಸೇರಿದಂತೆ ಇದರ ಸುತ್ತಮುತ್ತ ಇರುವ ತಾಲೂಕಿನ ರೈತ ಬಾಂಧವರಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹೊನಕೆರೆಪ್ಪ ತೆಲಗಿ, ಪ್ರಭುಗೌಡ ಪೊತರೆಡ್ಡಿ, ಚಂದ್ರಾಮ ಹಿಪ್ಪಲಿ, ಪಾಂಡು ಹ್ಯಾಟಿ, ಜಯಪ್ರಕಾಶ ಸಜ್ಜನ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

