ಆಲಮಟ್ಟಿ: ಗುರುವಂದನಾ ಕಾರ್ಯಕ್ರಮ ನಡೆಸಲು, ಶಿಕ್ಷಣ ಜತೆಗೆ ದೊರೆತ ಉತ್ತಮ ಸಂಸ್ಕಾರವೇ ಕಾರಣ ಎಂದು ನಿವೃತ್ತ ಶಿಕ್ಷಕ ಎಸ್.ಐ. ಹರಣಶಿಕಾರಿ ಅಭಿಪ್ರಾಯಪಟ್ಟರು.
ಇಲ್ಲಿಯ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಇಲ್ಲಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೧೯೯೪-೯೫ ನೇ ಸಾಲಿನಲ್ಲಿ ೭ ನೇ ವರ್ಗ ಪಾಸಾದ ಹಾಗೂ ೧೯೯೭-೯೮ ನೇ ಸಾಲಿನಲ್ಲಿ ಎಂಎಚ್ ಎಂ ಪ್ರೌಡಶಾಲೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳ ಅದಮ್ಯ ಪ್ರೀತಿ ಮತ್ತು ಶಿಕ್ಷಕರ ಅವಿನಾಭಾವ ಸಂಬಂಧ ವರ್ಣಿಸಲಸಾಧ್ಯ ಎಂದರು.
ಹಿಂದೆ ತಾವು ಮಾಡಿದ ಕರ್ಮದ ಪರಿಣಾಮವೇ ಈಗ ನೀವು ಅನುಭವಿಸುತ್ತಿರುವ ಜೀವನ, ಹೀಗಾಗಿ ಸದಾ ಒಳ್ಳೆಯದನ್ನೇ ಮಾಡಿ, ಒಳ್ಳೆಯದನ್ನೇ ಬಯಸಿ, ಇದೇ ಬದುಕಿನ ಯಶಸ್ಸಿನ ಮಂತ್ರ ಎಂದರು.
ನಿವೃತ್ತ ಶಿಕ್ಷಕರಾದ ವಿ.ಎ. ಭಾಂಡವಳಕರ, ಸಿ.ಎಸ್. ಕಣಕಾಲಮಠ, ನೀಲಾಂಬಿಕಾ ಪಾಟೀಲ, ಕೆ.ಎಂ. ತಾಂಬೆ, ಪಿ.ಎಲ್. ಮಿಂಚನಾಳ ಮಾತನಾಡಿ, ಇಳಿ ವಯಸ್ಸಿನಲ್ಲಿ ತಾವು ಮಾಡಿದ ಗುರುವಂದನೆಯಿಂದ ನಮಗೂ ಒಂದು ಟಾನಿಕ್ ಇದ್ದ ಹಾಗೆ ಎಂದು ಅಭಿಪ್ರಾಯಪಟ್ಟರು.
ಹಳೆ ವಿದ್ಯಾರ್ಥಿಗಳಾದ ಸದಾನಂದ ಗುಡಗುಂಟಿ, ಮಹೇಶ ಜೋಗೂರ, ಮಹಾಂತೇಶ ಪಟ್ಟಣಶೆಟ್ಟಿ, ವೈಶಾಲಿ ದಿಕ್ಷಿತ, ಹೇಮಾ ಮುಗದುಮ್ಮ, ಸುವರ್ಣ ಗದುಗಿನಮಠ, ಗುರುರಾಜ ಕುಂಟೋಜಿ, ದುಂಡೇಶ ಪತ್ತಾರ, ರಾಜಶೇಖರ ತಾಂಬೆ, ಶ್ವೇತಾ ಉಡುಪಿ, ರವಿ ಕೋತಿನ ಇತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಜಿ.ಎಂ. ಕೊಟ್ಯಾಳ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಪಿ.ಎಂ. ಮಹೇಂದ್ರಕರ, ಆರ್.ಎಸ್. ಹುಣಶಿಕಟ್ಟಿ, ಬಿ.ಪಿ. ಕಮತಗಿ, ಎಸ್.ಎಚ್. ಗೋಗಿ, ಸಿ.ವಿ. ವಿರಕ್ತಮಠ, ಎಸ್.ಎಸ್. ಹೊಸಮನಿ, ವಿ.ಎಸ್. ಗೌಡರ, ಬಿ.ಎಸ್. ಯರವಿನತೆಲಿಮಠ, ವಿ.ಎಂ. ಪಟ್ಟಣಶೆಟ್ಟಿ, ಐ.ಬಿ. ಉಳ್ಳಾಗಡ್ಡಿ, ಬಿ.ಎನ್. ಗುಣದಾಳ, ಎಸ್.ಇ.ಉಪ್ಪಾರ, ಶಾಂತು ತಡಸಿ, ಎಸ್.ಐ. ಗಿಡಪ್ಪಗೋಳ, ಎನ್.ಎಸ್. ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
೨೬ ವರ್ಷಗಳ ನಂತರ ಪರಸ್ಪರ ಭೇಟಿಯಾದ ಎಲ್ಲಾ ಸ್ನೇಹಿತರು ಶಾಲೆಗಳಿಗೆ ಭೇಟಿ ನೀಡಿ ತಮ್ಮ ಹಿಂದಿನ ಅನುಭವಗಳನ್ನು ಮೆಲಕು ಹಾಕಿದರು.
Subscribe to Updates
Get the latest creative news from FooBar about art, design and business.
Related Posts
Add A Comment

