Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಂಜಾರಾ ಕಸೂತಿ ತರಬೇತಿ ಶಿಬಿರ ಉದ್ಘಾಟಿಸಿದ ಬಂಜಾರಾ ಕಸೂತಿ ಸಂಸ್ಥೆ ಸಂಸ್ಥಾಪಕಿ ಆಶಾ ಎಂ.ಪಾಟೀಲ ಅಭಿಮತ ವಿಜಯಪುರ: ಬಂಜಾರಾ ಕಸೂತಿ ಕಲೆಯನ್ನು ಪ್ರೋತ್ಸಾಹಿಸಲು ಬಂಜಾರಾ ಕಸೂತಿ ಸಂಸ್ಥೆ ಸ್ಥಾಪಿಸಿ ತರಬೇತಿ ಶಿಬಿರಗಳ ಆಯೋಜನೆ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ಆಶಾ ಎಂ.ಪಾಟೀಲ ಹೇಳಿದರು.ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ ಮಹಿಳಾ ಸಬಲೀಕರಣ ಘಟಕ ಮತ್ತು ಬಂಜಾರಾ ಕಸೂತಿ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ವಾರದ ಬಂಜಾರಾ ಕಸೂತಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ವಿಜಯಪುರದ ಸಾಂಸ್ಕøತಿಕ ವೈಶಿಷ್ಟ್ಯತೆಯ ಸಂಕೇತವಾಗಿರುವ ಬಂಜಾರಾ ಕಸೂತಿ ಗ್ರಾಮೀಣ ಕರಕುಶಲ ಕಲೆಗಳಲ್ಲಿ ಒಂದಾಗಿದೆ. ಈ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನುರಿತ ಕುಶಲಕರ್ಮಿಗಳಿಂದ ಉಚಿತ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬಹುದಾಗಿದೆ ಎಂದು ಹೇಳಿದರು.ಡಾ. ಮುರಗೇಶ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ. ಎಸ್. ಬೆಳಗಲಿ ಅಧ್ಯಕ್ಷತೆ ವಹಿಸಿದ್ದರು. ಬಂಜಾರಾ ಕಸೂತಿ ಸಂಸ್ಥೆ ಸಹ-ಸಂಸ್ಥಾಪಕಿ…
ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಗೆ ಹೊನ್ನುಟಗಿಯಲ್ಲಿ ಸಚಿವ ಡಾ.ಎಂ.ಬಿ.ಪಾಟೀಲ ಚಾಲನೆ ವಿಜಯಪುರ: ಬರಗಾಲ ನಿವಾರಣೆಗೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೃಷಿಯ ಸುಸ್ಥಿರತೆಗಾಗಿ ನವೀನ ಅಭಿವೃದ್ದಿಯ ಮೂಲಕ ಒಟ್ಟು ೬೧೬೬.೦೮ ಹೆಕ್ಟೇರ್ ಜಲಾನಯನ ಪ್ರದೇಶವನ್ನು ವಿಶ್ವ ಬ್ಯಾಂಕ್ ನೆರವಿನಿಂದ ಪುನಶ್ಚೇತನಗೊಳಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.ಜಿಲ್ಲೆಯ ಹೊನ್ನುಟಗಿಯಲ್ಲಿ ಕೃಷಿ ಇಲಾಖೆ, ಜಲಾನಯನ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವಿಜಯಪುರ ಇವರ ಸಹಯೋಗದಲ್ಲಿ ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೊನ್ನುಟಗಿ ಉಪಜಲಾನಯನ ಪ್ರದೇಶದಲ್ಲಿ ವಿಶ್ವ ಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿರುವ ಪುನಶ್ಚೇತನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಹೊನ್ನುಟಗಿ, ಹಡಗಲಿ, ಕುಮಟಗಿ, ಮದಭಾವಿ ಹಾಗೂ ಆಹೇರಿ ಗ್ರಾಮ ಪಂಚಾಯತಿಗಳು ಒಳಪಡಲಿದ್ದು, ಜಿಲ್ಲೆಯ ರೈತರ ಕಾಪಾಡುವಲ್ಲಿ ಜಿಲ್ಲೆಯ ರೈತರಿಗೆ ನೀರು ಒದಗಿಸುವದೇ ಆದ್ಯತೆಯಾಗಿದು, ಇಂತಹ ಕಾರ್ಯಕ್ರಮಗಳು…
ಹೊನವಾಡ: ಮಕ್ಕಳ ಸಾಧನೆಗೆ ಅಂಕಗಳಿಕೆಯೊಂದೆ ಅಂತಿಮವಲ್ಲ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕೆಂದು ಶಿಕ್ಷಕ ಐ ಎ ತೇಲಿ ಅಭಿಪ್ರಾಯ ವ್ಯಕ್ತಪಡಿಸಿದರು.ತಿಕೋಟಾ ತಾಲೂಕಿನ ಬಾಬಾನಗರದ ಮಹಾತ್ಮ ಗಾಂಧೀಜಿ ಹಿರಿಯ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವತಿಯಿಂದ ಹಮ್ಮಿಕೊಂಡ ಮಕ್ಕಳ ಸಂತೆ ಮತ್ತು ಆಹಾರ ಮೇಳ ಕಾರ್ಯಕ್ರಮದ ತಮ್ಮ ಅತಿಥಿ ಭಾಷಣದಲ್ಲಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ವೃದ್ಧಿಸುತ್ತವೆ ಎಂದು ಹೇಳಿದರು.ಮಕ್ಕಳ ಸಂತೆ ಹಾಗೂ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಬಾಬಾನಗರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಂಸಾಬ್ ಎಳ್ಳಾಪುರ, ಮಕ್ಕಳನ್ನು ಕೇವಲ ಉದ್ಯೋಗಿಗಳನ್ನಾಗಿ ಮಾಡದೆ ಇಂಥ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಏರ್ಪಡಿಸುವುದರ ಮೂಲಕ ದೊಡ್ಡ ದೊಡ್ಡ ಉದ್ಯಮಿಗಳಾಗಿ ರೂಪಿಸುವಂತೆ ಶಿಕ್ಷಕರಿಗೆ ಕರೆ ಕೊಟ್ಟರು.ವಿದ್ಯೆಯೇ ದೊಡ್ಡಪ್ಪ ಆರೋಗ್ಯವೇ ಅದರಪ್ಪ ಎನ್ನುವಂತೆ ಇಂತಹ ಸಂತೆ ಮತ್ತು ಆಹಾರ ಮೇಳಗಳಲ್ಲಿ ಜಂಕ್ ಆಹಾರಗಳಿಂದ ದೂರವಿದ್ದು ಆರೋಗ್ಯಕ್ಕೆ ಪೂರಕವಾಗುವಂತಹ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಮತ್ತು…
ಇಂಡಿ: ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಟ್ಟಣದ ದೇಸಾಯಿ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ಪರೇಡ್ ಮಾಡುವದರಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ ಶಾಸಕ ಯಶವಂತ್ರಾಯಗೌಡ ಪಾಟೀಲ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಟ್ರೋಫಿಯನ್ನು ವಿತರಿಸಿದರು.ಈ ಸಂದರ್ಭದಲ್ಲಿ ಮಕ್ಕಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕ ನಾಗರಾಜ ವಡ್ನಳ್ಳಿ ಹಾಗೂ ಮಕ್ಕಳಿಗೆ ನೃತ್ಯ ತರಬೇತಿ ನೀಡಿದ ಶಿಕ್ಷಕ ಮಲ್ಲಿಕಾರ್ಜುನ ಪಂಟೋಜಿ, ಮಹಿಬೂಬ ಮೋಮಿನ, ಸಂಸ್ಥೆಯ ಅದ್ಯಕ್ಷ ಎಸ್.ಎಸ್.ದೇಸಾಯಿ ಹಾಗೂ ಪ್ರಾಂಶುಪಾಲ ವಿದ್ಯುಲತಾ ಸುತಾರ, ಎಲ್ಲ ಸಿಬ್ಬಂದಿಗಳು ಅಭಿನಂದಿಸಿದರು.
ದೇವರಹಿಪ್ಪರಗಿ: ಕರ್ನಾಟಕ ಸಂಭ್ರಮ-೫೦ರ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಜ್ಯೋತಿ ಹೊತ್ತ ರಥಯಾತ್ರೆಗೆ ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ, ಬಿಳ್ಕೊಡಲಾಯಿತು.ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿ ಭಾನುವಾರ ತಾಲ್ಲೂಕು ಆಡಳಿತದ ಪರವಾಗಿ ಭವ್ಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಸಿಂದಗಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಂಪೀರ್ ವಾಲೀಕಾರ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಪೂಜೆ ಸಲ್ಲಿಸಿದರು. ನಂತರ ಮೆರವಣಿಗೆ ಮಡಿವಾಳ ಮಾಚಿದೇವ ದೇವಸ್ಥಾನ, ಮೊಹರೆ ಹಣಮಂತ್ರಾಯ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತ ತಲುಪಿತು.ಅಂಬೇಡ್ಕರ್ ವೃತ್ತದಲ್ಲಿ ಸಭೆ ಜರುಗಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿ, ಕನ್ನಡ ನಾಡು, ನುಡಿ, ಸಾಂಸ್ಕೃತಿಕ ಪರಂಪರೆ, ಇತಿಹಾಸ ಮತ್ತು ಕನ್ನಡದ ಮಹತ್ವವನ್ನು ತಿಳಿಸಿದರು.ಸ್ಥಳೀಯ ವಿವಿಧ ಮಠಗಳ ಶ್ರೀಗಳ ಉಪಸ್ಥಿತಿಯಲ್ಲಿ ಸದಯ್ಯನಮಠದ ವೀರಗಂಗಾಧರಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ…
ವಿಜಯಪುರ: ನಮ್ಮ ಹಿರಿಯರು ಜಾನಪದ ಸಂಸ್ಕೃತಿಯಲ್ಲಿ ಬದುಕು ಕಟ್ಟಿಕೊಂಡು ಇಂದು ನಮಗೆಲ್ಲ ವಿಶಾಲವಾದ ಮತ್ತು ಮೌಲ್ಯಯುತವಾದ ಸಂಸ್ಕೃತಿಯನ್ನು ಬಿಟ್ಟುಹೋಗಿದ್ದಾರೆ. ಇಂದು ಜಾನಪದ ಸಂಸ್ಕೃತಿಯನ್ನು ಮುರಿದು ಕಟ್ಟಬೇಕಾದ ಅವಶ್ಯಕತೆಯಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಅಭಿಪ್ರಾಯಪಟ್ಟರು.ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳದ ನೀಲಕಂಠೇಶ್ವರ ದೇವಾಲಯದಲ್ಲಿ ಕನ್ನಡ ಜಾನಪದ ಪರಿಷತ್ ಹಿರೇಮುರಾಳ ವಲಯ ಘಟಕ ಉದ್ಘಾಟನೆ ಮಾಡಿ ಮಾತನಾಡುತ್ತಾ, ಸರಕಾರ ಜಾನಪದ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲ ಮಾಡಿದೆ. ಆದರೆ ಜಾನಪದ ಸಂಸ್ಕೃತಿ ಉಳಿಯಲು ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ವಿಶ್ವವಿದ್ಯಾಲಯ ಗ್ರಾಮ ಮಟ್ಟಕ್ಕೆ ಇಳಿಯಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ( ಪಡಗಾನೂರ) ಜಿಲ್ಲೆಯಲ್ಲಿ ಕ ಜಾ ಪ ಕಲಾವಿದರ , ಸಾಹಿತಿಗಳ ಸೇವೆ ಮಾಡುತ್ತಾ, ಕಲಾವಿದರಿಗೆ ಮಾಶಾಸನ, ಪ್ರಶಸ್ತಿ, ಸನ್ಮಾನ, ಮತ್ತು ಇಲಾಖೆಯ ನೆರವು ಒದಗಿಸುವ ಮೂಲಕ ಜಾನಪದ ಸಂಸ್ಕೃತಿ ಜೀವಂತವಾಗಿಡಲಾಗಿದೆ. ಹಿರೇಮುರಾಳ ವಲಯದಲ್ಲಿ ಇಂದಿನಿಂದ ಗಿರೀಶ…
ಮುದ್ದೇಬಿಹಾಳ: ರಾಜ್ಯದಲ್ಲಿ ಬರಗಾಲ ಆವರಿಸಿದ್ದು ನಮ್ಮ ಕ್ಷೇತ್ರದಲ್ಲಿ ಅತೀ ಹೆಚ್ಚಿದೆ. ನಾನು ಶಾಸಕನಾಗಿದ್ದಾಗ ಎಲ್ಲ ಕೆರೆಗಳಿಗೆ ನೀರು ತುಂಬುವ ಕೆಲಸ ಮಾಡಿದ್ದೆ. ನಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲ ಹಳ್ಳಿಗಳ ಕೆರೆಗಳಲ್ಲಿ ಯಾವಾಗಲೂ ನೀರು ತುಂಬಿರುತ್ತಿತ್ತು. ಇದರಿಂದ ಸುತ್ತಮುತ್ತಲಿನ ಅಂತರ್ಜಲ ಜಾಸ್ತಿಯಾಗಿರುತ್ತಿತ್ತು. ಇದರಿಂದ ಸುತ್ತು ಹಳ್ಳಿಗಳಿಗೆ ಅನುಕೂಲವಾಗಿ ರೈತರಲ್ಲಿ ವಿಶ್ವಾಸ ಮೂಡಿತ್ತು. ಆದರೆ ಇವತ್ತು ಚಿಮ್ಮಲಗಿ ಪೂರ್ವ ಕಾಲುವೆಗೆ ನೀರನ್ನೇ ಬಿಟ್ಟಿಲ್ಲ. ಸ್ವಲ್ಪ ಮಾತ್ರ ಬಿಟ್ಟಿದ್ದು ಇದರಿಂದ ಕೆರೆಗಳು ತುಂಬಲು ಸಾಧ್ಯವಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನೂ ಸರ್ಕಾರಕ್ಕೆ ಅವಕಾಶವಿದೆ. ಈ ಅವಕಾಶ ತಪ್ಪಿದರೆ ೬-೭ ತಿಂಗಳು ನೀರು ತುಂಬಲು ಸಾಧ್ಯವಿಲ್ಲ. ಕಾರಣ ಈ ಕೂಡಲೇ ಪೂರ್ವ ಕಾಲುವೆಗೆ ನೀರು ಬಿಡುವ ಮೂಲಕ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.ಪಟ್ಟಣದ ತಮ್ಮ ಫಾರ್ಮಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಮಾಧ್ಯಮದ ವರದಿಗಳನ್ನು ಗಮನಿಸಿದ್ದೇನೆ. ಅಭಿವೃದ್ಧಿಯ ಕುರಿತು…
ಕೊಲ್ಹಾರ: ಸಮಾಜದಲ್ಲಿ ಇರುವ ಕುಟುಂಬ ವ್ಯವಸ್ಥೆಗಳ ಯಜಮಾನಿ ಮನೆಯನ್ನು ವಿದ್ಯಾಭ್ಯಾಸದ ಕೇಂದ್ರವನ್ನಾಗಿ ಪರಿವರ್ತನೆ ಮಾಡಿದರೆ ಸಮಾಜಕ್ಕೆ ಮಾದರಿಯ ವ್ಯಕ್ತಿಗಳನ್ನು ಉತ್ತಮ ಶಿಕ್ಷಣವಂತರನ್ನು ಸಮಾಜ ಸೇವಕರನ್ನು ಕೊಡಲು ಪ್ರೇರಣೆಯಾಗುತ್ತದೆ ಎಂದು ಸಚಿವ ಶಿವಾನಂದ ಎಸ್ ಪಾಟೀಲ ಹೇಳಿದರು.ಪಟ್ಟಣದ ಎ.ಪಿ.ಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ, ಶಾಲೆಯಲ್ಲಿ ಪಾಲಕರಿಗಾಗಿ ನಡೆದ ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಣೆ ‘ಹಳೆ ಬೇರು ಹೊಸ ಚಿಗುರು’ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ನಮ್ಮ ಮಾತೃ ಭಾಷೆ ಕನ್ನಡದ ಅಭ್ಯಾಸದ ಜೊತೆಗೆ ಆಂಗ್ಲ ಭಾಷೆಯನ್ನು ನಾವುಗಳು ಕಲಿಯುವದು ಅತೀ ಅವಶ್ಯಕವಾಗಿದ್ದು ಕನ್ನಡವನ್ನು ಅಧ್ಯಯನ ಮಾಡಿ ಅನ್ಯ ಭಾಷೆಯನ್ನು ಪ್ರೀತಿಸೋಣ ತತ್ವದ ಅಡಿ ನಡೆಯಬೇಕಾಗಿದೆ ಎಂದರು.ಪಟ್ಟಣದ ಎ.ಪಿ.ಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ತಮ್ಮ ಮಾತೃ ಭಾಷೆಯ ಜೊತೆಗೆ ಇಂಗ್ಲೀಷ ಬೋಧನೆಯನ್ನು ತದೇಕಚಿತ್ತದಿಂದ ಆಲಿಸಿ ಮಾತನಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಈ ಸಂದರ್ಭದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು, ಶೀಲವಂತ ಮಠದ ಕೈಲಾಸನಾಥ ಶ್ರೀಗಳು,…
ಬಸವನಬಾಗೇವಾಡಿ: ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಮ್ಮಿಕೊಂಡ ಶೋಷಿತ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೋಷಿತ ಸಮುದಾಯದಿಂದ ಬಂದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಬಗ್ಗೆ ಕೀಳು ಭಾಷೆ ಬಳಸಿರುವುದು ಖಂಡನೀಯವಾಗಿದೆ. ಮುಖ್ಯಮಂತ್ರಿ ಅವರಿಗೆ ಘನತೆ ತರುವ ವಿಷಯವಲ್ಲ ಎಂದು ಭಾರತೀಯ ಜನತಾ ಪಕ್ಷದ ಮಹಿಳಾ ಮಂಡಲ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯನವರು ನಾನು ಸಂವಿಧಾನದ ಪರಿಪಾಲಕ, ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಂಡು ಭಾಷಣ ಮಾಡುವ ಇವರು ದೇಶದ ಘನವೆತ್ತ ರಾಷ್ಟ್ರಪತಿಗಳಿಗೆ ಅಸಂವಿಧಾನಿಕವಾಗಿ ಮಾತನಾಡುವುದು ಖಂಡನೀಯವಾಗಿದೆ. ಎಲ್ಲರನ್ನೂ ಪ್ರೀತಿಯಿಂದ ಕಂಡ ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಳ್ಳುವ ನೀವು ಈ ರೀತಿ ಮಾತನಾಡುವದು ಸರಿಯಾದ ಕ್ರಮವಲ್ಲ. ಇದು ಮಹಿಳಾ ವಿರೋಧಿ ಧೋರಣೆಯಾಗಿದೆ.ತಾವು ಗ್ರಾಮೀಣ ಪ್ರದೇಶದ ಬಂದವರಾಗಿದ್ದು. ಹಿರಿಯರಿಗೆ ಈ ರೀತಿ ಮಾತನಾಡುವುದು ಸ್ವಾಭಾವಿಕ ಎಂದು ಹೇಳಿರುವುದು ತೀರಾ ಅಕ್ಷಮ್ಯ ಅಪರಾಧವಾಗಿದೆ. ತಾವು ರಾಜ್ಯದ ಮುಖ್ಯಮಂತ್ರಿ ಹಾಗೂ ಕಾನೂನು ಬಲ್ಲವರು ಈ ರೀತಿ ಮಾತನಾಡುವುದು ಸರಿಯೇ ಎನ್ನುವುದನ್ನು…
ತಿಕೋಟಾ: ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ತಾಳ್ಮೆ ಹಾಗೂ ಶೃದ್ದೆಯಿಂದ ಓದಿದರೆ ಜೀವನದಲ್ಲಿ ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ ಎಂದು ವಿಜಯಪುರ ಡಿವೈಎಸ್ಪಿ ಧೂಳಪ್ಪ ಎಸ್. ಧನಗರ ಹೇಳಿದರು.ತಾಲ್ಲೂಕಿನ ಘೋಣಸಗಿ ಗ್ರಾಮದಲ್ಲಿ ರವಿವಾರ ಸಂಜೆ ಕೌಲಗುಡ್ಡದ ಸಿದ್ದಶ್ರೀ ಸಂಸ್ಥೆಯ ಕರಿಯೋಗಸಿದ್ದ ಪ್ರಾಥಮಿಕ ಶಾಲೆ ಹಾಗೂ ಸಿದ್ದರತ್ನ ಪ್ರೌಢ ಶಾಲೆಯ ದಶಮಾನೋತ್ಸವ ನಿಮಿತ್ಯ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡು ನಕಾರಾತ್ಮಕ ಚಿಂತನೆಗಳನ್ನು ದೂರಮಾಡಿ ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗುತ್ತದೆ. ಮಕ್ಕಳ ಮೇಲೆ ಮಾನಸಿಕವಾಗಿ ಒತ್ತಡ ಹೇರಬೇಡಿ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಗುರಿ ಮುಟ್ಟುವವರೆಗೆ ಪ್ರಯತ್ನ ನಿಲ್ಲಬಾರದು ಆಗ ಯಶಸ್ಸು ಸಿಗುತ್ತದೆ ಎಂದರು.ಸಾನಿಧ್ಯ ವಹಿಸಿ ಮಾತನಾಡಿದ ಸಿದ್ದಯೋಗಿ ಅಮರೇಶ್ವರ ಮಹಾರಾಜರು, ಜೀವನದಲ್ಲಿ ಸೋಮಾರಿತನ ಅಳವಡಿಸಿಕೊಂಡರೆ ಸಾಧನೆ ಸಾಧ್ಯವಾಗುವದಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ನಮ್ಮ ಧ್ಯೆಯವಾಗಿದೆ. ಯಾವಾಗಲೂ ಮಕ್ಕಳ ಬಾಳಿಗೆ ಬೆಳಕಾಗುತ್ತೇನೆ. ಮಕ್ಕಳಿಗೆ…
