ಹೊನವಾಡ: ಮಕ್ಕಳ ಸಾಧನೆಗೆ ಅಂಕಗಳಿಕೆಯೊಂದೆ ಅಂತಿಮವಲ್ಲ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕೆಂದು ಶಿಕ್ಷಕ ಐ ಎ ತೇಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಿಕೋಟಾ ತಾಲೂಕಿನ ಬಾಬಾನಗರದ ಮಹಾತ್ಮ ಗಾಂಧೀಜಿ ಹಿರಿಯ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವತಿಯಿಂದ ಹಮ್ಮಿಕೊಂಡ ಮಕ್ಕಳ ಸಂತೆ ಮತ್ತು ಆಹಾರ ಮೇಳ ಕಾರ್ಯಕ್ರಮದ ತಮ್ಮ ಅತಿಥಿ ಭಾಷಣದಲ್ಲಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ವೃದ್ಧಿಸುತ್ತವೆ ಎಂದು ಹೇಳಿದರು.
ಮಕ್ಕಳ ಸಂತೆ ಹಾಗೂ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಬಾಬಾನಗರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಂಸಾಬ್ ಎಳ್ಳಾಪುರ, ಮಕ್ಕಳನ್ನು ಕೇವಲ ಉದ್ಯೋಗಿಗಳನ್ನಾಗಿ ಮಾಡದೆ ಇಂಥ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಏರ್ಪಡಿಸುವುದರ ಮೂಲಕ ದೊಡ್ಡ ದೊಡ್ಡ ಉದ್ಯಮಿಗಳಾಗಿ ರೂಪಿಸುವಂತೆ ಶಿಕ್ಷಕರಿಗೆ ಕರೆ ಕೊಟ್ಟರು.
ವಿದ್ಯೆಯೇ ದೊಡ್ಡಪ್ಪ ಆರೋಗ್ಯವೇ ಅದರಪ್ಪ ಎನ್ನುವಂತೆ ಇಂತಹ ಸಂತೆ ಮತ್ತು ಆಹಾರ ಮೇಳಗಳಲ್ಲಿ ಜಂಕ್ ಆಹಾರಗಳಿಂದ ದೂರವಿದ್ದು ಆರೋಗ್ಯಕ್ಕೆ ಪೂರಕವಾಗುವಂತಹ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಮತ್ತು ಕೊಳ್ಳುವುದರಿಂದ ಸದೃಢ ಆರೋಗ್ಯದ ಕಡೆಗೆ ಗಮನ ಹರಿಸುವುದು ಅನಿವಾರ್ಯ ಎಂದು ಪ್ರಥಮ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ ಬೀರಪ್ಪ ಕಂಡೆಕಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ರಾಸಾಬ ಬಿರಾದಾರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷ ನಡೆಸಲು ಸಂಸ್ಥೆಯು ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತದೆ ಆದ್ದರಿಂದ ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳಿಗೆ ಹೆಚ್ಚು ಗಮನಹರಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಶಿಕ್ಷಕರಿಗೆ ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿಗಳಾದ ಅಮಿತ ಬಿ ಕೆ, ಮುಖ್ಯೋಪಾಧ್ಯಾಯರಾದ ರೋಹಿತ ತಳಕೇರಿ ಶಿಕ್ಷಕರಾದ ಅಜಿತ ಮಲಕಣ್ಣವರ, ಗುರುನಾಥ ಮುರುಡಿ, ರಾಣೇಶ ಗುದಗೇನವರ, ತೇಜಸ್ವಿನಿ ವಾಲಿಕಾರ, ಶ್ವೇತಾ ಆಕಳೆ, ಅಂಜನಾ ಲೋಣಿ ಇದ್ದರು.
ತೇಜಸ್ವಿನಿ ಮಾ ಆಕಳೆ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿಕಾತ್ರಾಳ ಸ್ವಾಗತಿಸಿದರು, ಲಕ್ಷ್ಮಿ ಲೋಣಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

