ಕೊಲ್ಹಾರ: ಸಮಾಜದಲ್ಲಿ ಇರುವ ಕುಟುಂಬ ವ್ಯವಸ್ಥೆಗಳ ಯಜಮಾನಿ ಮನೆಯನ್ನು ವಿದ್ಯಾಭ್ಯಾಸದ ಕೇಂದ್ರವನ್ನಾಗಿ ಪರಿವರ್ತನೆ ಮಾಡಿದರೆ ಸಮಾಜಕ್ಕೆ ಮಾದರಿಯ ವ್ಯಕ್ತಿಗಳನ್ನು ಉತ್ತಮ ಶಿಕ್ಷಣವಂತರನ್ನು ಸಮಾಜ ಸೇವಕರನ್ನು ಕೊಡಲು ಪ್ರೇರಣೆಯಾಗುತ್ತದೆ ಎಂದು ಸಚಿವ ಶಿವಾನಂದ ಎಸ್ ಪಾಟೀಲ ಹೇಳಿದರು.
ಪಟ್ಟಣದ ಎ.ಪಿ.ಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ, ಶಾಲೆಯಲ್ಲಿ ಪಾಲಕರಿಗಾಗಿ ನಡೆದ ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಣೆ ‘ಹಳೆ ಬೇರು ಹೊಸ ಚಿಗುರು’ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಮಾತೃ ಭಾಷೆ ಕನ್ನಡದ ಅಭ್ಯಾಸದ ಜೊತೆಗೆ ಆಂಗ್ಲ ಭಾಷೆಯನ್ನು ನಾವುಗಳು ಕಲಿಯುವದು ಅತೀ ಅವಶ್ಯಕವಾಗಿದ್ದು ಕನ್ನಡವನ್ನು ಅಧ್ಯಯನ ಮಾಡಿ ಅನ್ಯ ಭಾಷೆಯನ್ನು ಪ್ರೀತಿಸೋಣ ತತ್ವದ ಅಡಿ ನಡೆಯಬೇಕಾಗಿದೆ ಎಂದರು.
ಪಟ್ಟಣದ ಎ.ಪಿ.ಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ತಮ್ಮ ಮಾತೃ ಭಾಷೆಯ ಜೊತೆಗೆ ಇಂಗ್ಲೀಷ ಬೋಧನೆಯನ್ನು ತದೇಕಚಿತ್ತದಿಂದ ಆಲಿಸಿ ಮಾತನಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು, ಶೀಲವಂತ ಮಠದ ಕೈಲಾಸನಾಥ ಶ್ರೀಗಳು, ಕಾನಖಾಯೆ ಗಫಾರಿಯಾ ಆಶ್ರಮದ ಪೀಠಾಧಿಕಾರಿ ಡಾ||ಭಕ್ತಿಯಾರ ಖಾನ್ ಪಠಾಣ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಉಸ್ಮಾನ ಪಟೇಲ ಖಾನ್ನವರ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ.ಗು.ಸಿದ್ದಾಫೂರ, ರಫೀಕ ಬಂಡಾರಿ ಅವರನ್ನು ಗೌರವಿಸಲಾಯಿತು.
ಕಲ್ಲು ದೇಸಾಯಿ, ರಫೀಕ ಪಕಾಲಿ, ಚನಮಲ್ಲಪ್ಪ ಗಿಡ್ಡಪ್ಪಗೋಳ, ಚಂದ್ರಶೇಖರಯ್ಯ ಗಣಕುಮಾಋ, ಶ್ರೀಶೈಲ ಪತಂಗಿ, ಇಸ್ಮಾಯಿಲ್‌ಸಾಬ ತಹಶೀಲ್ದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರಾಚಾರ್ಯ ಶಂಕರ ಯಂಕಂಚಿ ಸ್ವಾಗತಿಸಿದರು. ಶಿಕ್ಷಕ ಬಳಗದವರು ಕಾರ್ಯಕ್ರಮ ನಡೆಸಿಕೊಟ್ಟರು.
Subscribe to Updates
Get the latest creative news from FooBar about art, design and business.
Related Posts
Add A Comment

