ತಿಕೋಟಾ: ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ತಾಳ್ಮೆ ಹಾಗೂ ಶೃದ್ದೆಯಿಂದ ಓದಿದರೆ ಜೀವನದಲ್ಲಿ ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ ಎಂದು ವಿಜಯಪುರ ಡಿವೈಎಸ್ಪಿ ಧೂಳಪ್ಪ ಎಸ್. ಧನಗರ ಹೇಳಿದರು.
ತಾಲ್ಲೂಕಿನ ಘೋಣಸಗಿ ಗ್ರಾಮದಲ್ಲಿ ರವಿವಾರ ಸಂಜೆ ಕೌಲಗುಡ್ಡದ ಸಿದ್ದಶ್ರೀ ಸಂಸ್ಥೆಯ ಕರಿಯೋಗಸಿದ್ದ ಪ್ರಾಥಮಿಕ ಶಾಲೆ ಹಾಗೂ ಸಿದ್ದರತ್ನ ಪ್ರೌಢ ಶಾಲೆಯ ದಶಮಾನೋತ್ಸವ ನಿಮಿತ್ಯ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡು ನಕಾರಾತ್ಮಕ ಚಿಂತನೆಗಳನ್ನು ದೂರಮಾಡಿ ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗುತ್ತದೆ. ಮಕ್ಕಳ ಮೇಲೆ ಮಾನಸಿಕವಾಗಿ ಒತ್ತಡ ಹೇರಬೇಡಿ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಗುರಿ ಮುಟ್ಟುವವರೆಗೆ ಪ್ರಯತ್ನ ನಿಲ್ಲಬಾರದು ಆಗ ಯಶಸ್ಸು ಸಿಗುತ್ತದೆ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಸಿದ್ದಯೋಗಿ ಅಮರೇಶ್ವರ ಮಹಾರಾಜರು, ಜೀವನದಲ್ಲಿ ಸೋಮಾರಿತನ ಅಳವಡಿಸಿಕೊಂಡರೆ ಸಾಧನೆ ಸಾಧ್ಯವಾಗುವದಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ನಮ್ಮ ಧ್ಯೆಯವಾಗಿದೆ. ಯಾವಾಗಲೂ ಮಕ್ಕಳ ಬಾಳಿಗೆ ಬೆಳಕಾಗುತ್ತೇನೆ. ಮಕ್ಕಳಿಗೆ ಕಠಿಣ ಆಗುವ ಗಣಿತ, ವಿಜ್ಞಾನ ಹಾಗೂ ಇಂಗ್ಲೀಷ ವಿಷಯಗಳ ಕುರಿತು ಪುನರ್ಮನನ ಮಾಡಿಸುತ್ತಾ ಶಿಕ್ಷಕರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬನಸಿದ್ದ ಮಹಾರಾಜರು, ಎಂ.ಬಿ.ಪಾಟೀಲ ಪೌಂಡೇಶನ್ ಕಾರ್ಯದರ್ಶಿ ಯಾಕುಬ ಜತ್ತಿ, ಸಂಪನ್ಮೂಲ ವ್ಯಕ್ತಿ ಸಿದ್ದಣ್ಣಾ ದಳವಾಯಿ, ಸಾಬು ಮಾಶ್ಯಾಳ, ರಾಜು ಕುರಿ, ಕರೆಪ್ಪ ಬಸ್ತಾಳ, ಮೆಲಗಿರಿ ಹೊಸಮನಿ, ಶ್ರೀಮಂತ ಕೊಟ್ಟಲಗಿ, ಬಸವರಾಜ ಖವಿ, ಮಲ್ಲಿಕಾರ್ಜುನ ಹಂಜಗಿ, ದುಂಡಪ್ಪ ಕುಮಟಗಿ, ಲೇಪು ಕೊಣ್ಣೂರ, ಸುರೇಶ ಕೊಣ್ಣೂರ, ಶ್ರೀಶೈಲ ಬಿರಾದಾರ, ಅಪ್ಪಾಸಾಬ ಮಗದರಿ, ಸಿದರಾಯ ಖವಿ, ಸೋಮನಿಂಗ ಖವಿ, ಸಿದ್ದು ಮುಚ್ಚಂಡಿ, ಸಂಜು ರಾಠೋಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

