ಬಸವನಬಾಗೇವಾಡಿ: ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಮ್ಮಿಕೊಂಡ ಶೋಷಿತ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೋಷಿತ ಸಮುದಾಯದಿಂದ ಬಂದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಬಗ್ಗೆ ಕೀಳು ಭಾಷೆ ಬಳಸಿರುವುದು ಖಂಡನೀಯವಾಗಿದೆ. ಮುಖ್ಯಮಂತ್ರಿ ಅವರಿಗೆ ಘನತೆ ತರುವ ವಿಷಯವಲ್ಲ ಎಂದು ಭಾರತೀಯ ಜನತಾ ಪಕ್ಷದ ಮಹಿಳಾ ಮಂಡಲ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯನವರು ನಾನು ಸಂವಿಧಾನದ ಪರಿಪಾಲಕ, ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಂಡು ಭಾಷಣ ಮಾಡುವ ಇವರು ದೇಶದ ಘನವೆತ್ತ ರಾಷ್ಟ್ರಪತಿಗಳಿಗೆ ಅಸಂವಿಧಾನಿಕವಾಗಿ ಮಾತನಾಡುವುದು ಖಂಡನೀಯವಾಗಿದೆ. ಎಲ್ಲರನ್ನೂ ಪ್ರೀತಿಯಿಂದ ಕಂಡ ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಳ್ಳುವ ನೀವು ಈ ರೀತಿ ಮಾತನಾಡುವದು ಸರಿಯಾದ ಕ್ರಮವಲ್ಲ. ಇದು ಮಹಿಳಾ ವಿರೋಧಿ ಧೋರಣೆಯಾಗಿದೆ.
ತಾವು ಗ್ರಾಮೀಣ ಪ್ರದೇಶದ ಬಂದವರಾಗಿದ್ದು. ಹಿರಿಯರಿಗೆ ಈ ರೀತಿ ಮಾತನಾಡುವುದು ಸ್ವಾಭಾವಿಕ ಎಂದು ಹೇಳಿರುವುದು ತೀರಾ ಅಕ್ಷಮ್ಯ ಅಪರಾಧವಾಗಿದೆ. ತಾವು ರಾಜ್ಯದ ಮುಖ್ಯಮಂತ್ರಿ ಹಾಗೂ ಕಾನೂನು ಬಲ್ಲವರು ಈ ರೀತಿ ಮಾತನಾಡುವುದು ಸರಿಯೇ ಎನ್ನುವುದನ್ನು ಒಮ್ಮೆ ಆತ್ಮಾಲೋಕನೆ ಮಾಡಿಕೊಳ್ಳಬೇಕು. ಸಂವಿಧಾನದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಈ ರೀತಿ ಮಾತನಾಡುವುದು ಕ್ಷಮಿಸುವ ವಿಚಾರವಲ್ಲ. ಇನ್ನೊಮ್ಮೆ ರಾಜ್ಯದ ಜನತೆಯ ಹಾಗೂ ದೇಶದ ಜನತೆ ಕ್ಷಮೆಯನ್ನು ಕೇಳಬೇಕೆಂದು ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

