Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನ ಅವ್ಯವಹಾರ ತನಿಖೆಗಾಗಿ ಮತ್ತು ಪಟ್ಟಣದ ಅಂಬೇಡ್ಕರ್ ವೃತ್ತದ ಡಾ.ಬಾಬಾಸಾಹೇಬ ಅಂಬೇಡ್ಕರ್ ಮೂರ್ತಿಯ ಅಪೂರ್ಣವಾದ ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದು, ಯಾವುದೇ ಕ್ರಮವಾಗದ ಹಿನ್ನೆಲೆ ಫೆ.೨ ರಂದು ಮುಖ್ಯಮಂತ್ರಿಗಳ ಆಗಮನದ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ಸಿದ್ಧರಾಗಿದ್ದೇವೆ ಎಂದು ಡಿ.ಎಸ್.ಎಸ್.ಮುಖಂಡ ಹರೀಶ ನಾಟೆಕಾರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದ ಗಾರ್ಡನ್ ನಲ್ಲಿ ವಿವಿಧ ಸಂಘಟನೆಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಕಾಂಗ್ರೇಸ್ ಪಕ್ಷಕ್ಕೆ ಅಧಿಕಾರ ಬಂದಾಗಿನಿಂದ ಪ್ರತೀ ಮಾತಿಗೆ ಡಾ.ಬಾಬಾ ಸಾಹೇಬರ, ಬಸವಣ್ಣನವರ ಹೆಸರು ಹೇಳುವ ಇವರು, ಮೂರ್ತಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗುತ್ತಿಲ್ಲ. ಸಿಎಂ ಬರಲು ಇನ್ನೂ ಎರಡು ದಿನ ಇದೆ. ಕೂಡಲೇ ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ದಿದ್ರೆ ನಾವು ಹೋರಾಟ ಮುಂದುವರೆಸುತ್ತೇವೆ. ನಮ್ಮನ್ನು ಬಂಧಿಸಿದರೂ ಜೈಲಿನಲ್ಲಿಯೇ ಧರಣಿ, ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದೇವೆ ಎಂದರು.ಮುಖಂಡ ಬಸವರಾಜ ಸಿದ್ದಾಪೂರ ಮಾತನಾಡಿ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರ, ದಬ್ಬಾಳಿಕೆ, ದುರ್ವರ್ತನೆ, ದೌರ್ಜನ್ಯ, ಎಸ್‌ಸಿಎಸ್‌ಟಿ ಅನುದಾನ ದುರ್ಬಳಕೆ, ಬ್ಯಾಂಕಿನ…
ವಿಜಯಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ೭೬ನೇ ಪುಣ್ಯತಿಥಿಯ ಅಂಗವಾಗಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಅಹಿಂಸಾಮೂರ್ತಿ, ಸರಳತೆಯ ಪ್ರತಿಪಾದಕ, ಜಗತ್ತಿನ ಹಲವಾರು ಮಹಾನ್ ಚಳುವಳಿಗಳಿಗೆ ಪ್ರೇರಕರಾಗಿದ್ದ ಮಹಾತ್ಮಾ ಗಾಂಧಿಯವರ ಕೊಡುಗೆಗಳನ್ನು ಯಾರೂ ಮರೆಯುವಂತಿಲ್ಲ. ಸತ್ಯ, ಶಾಂತಿ, ಅಹಿಂಸೆ, ಅಸ್ಪ್ರಶ್ಯತೆ ನಿವಾರಣೆಗಾಗಿ ಗಾಂಧಿಜಿಯವರು ಪಾಲಿಸಿದ ತತ್ವಗಳು ನಾವೆಲ್ಲರೂ ಸದಾ ಸ್ಮರಿಸುವಂತಾಗಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಬ್ಲಾಕ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ಅಶ್ಫಾಕ ಮನಗೂಳಿ, ಎಸ್‌ಟಿ ಘಟಕದ ಅಧ್ಯಕ್ಷರಾದ ದೇವಾನಂದ ಲಚ್ಯಾಣ, ಅಬ್ಬುಲ್‌ಪೀರಾ ಜಮಖಂಡಿ, ಫಿರೋಜ ಶೇಖ, ಅನಸೂಯಾ ನಿಂಬರಗಿ, ಆಸ್ಮಾ ಕಾಲೇಬಾಗ, ಶಮಿಮಾ ಅಕ್ಕಲಕೋಟ, ರುಬಿನಾ ಹಳ್ಳೂರ, ಕಾಶಿಬಾಯಿ ಹಡಪದ, ಗಂಗಾಬಾಯಿ ಕಣಮುಚನಾಳ, ಅಬುಬಕರ ಕಂಬಾಗಿ, ಕೃಷ್ಣಾ ಲಮಾಣಿ, ತಾಜುದ್ದೀನ ಖಲೀಫಾ,…
ಆಲಮಟ್ಟಿ: ಕರ್ನಾಟಕ ಸರ್ಕಾರದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಮೈಸೂರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ” ಪ್ರಾಚ್ಯ ಪ್ರಜ್ಞೆ’ ಕಾರ್ಯಕ್ರಮದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲ್ಲೂಕಿನ ಗಣಿ ಗ್ರಾಮದ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಗಣಿ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿ ವಿನಾಯಕ ಚಿತ್ರಗಾರ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ.ಆ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆ ಇಲ್ಲ. ಸ್ವಯಂ ಪ್ರೇರಣೆಯಿಂದ ಕಲಿತಿರುವ ವಿದ್ಯಾರ್ಥಿಗೆ ಮುಖ್ಯ ಶಿಕ್ಷಕ ರವಿ ಚಿನಗುಂಡೆ ಮಾರ್ಗದರ್ಶನ ನೀಡಿದ್ದಾರೆ.
ನಿಡಗುಂದಿ: ತಾಲ್ಲೂಕಿನ ವಂದಾಲ ಬನಶಂಕರಿ ದೇವಿ ಜಾತ್ರೆಯ ಅಂಗವಾಗಿ ಮಂಗಳವಾರ, ಕನ್ನಡ ನಾಡಿನ ಗತವೈಭವ ನೆನಪಿಸುವ ಸಾಂಸ್ಕೃತಿಕ ಕಲೆಗಳಲ್ಲೊಂದಾದ ಗ್ರಾಮದೇವತೆ (ದ್ಯಾಮವ್ವ ತಾಯಿ) ಯ ಸೋಗಿನ ಮೆರವಣಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂದಾಗ ಜಾತ್ರೆಗೆ ಬಂದ ಯಾತ್ರಿಕರೆಲ್ಲ ಭಾವ ಪರವಶರಾಗಿ ಭಕ್ತಿಯಿಂದ ನಮಿಸಿದರು. ಗ್ರಾಮದೇವತೆಯ ವೇಶದಲ್ಲಿ ಮಲ್ಲಿಕಾರ್ಜುನ ಕುಪ್ಪಸ್ತ ಕಂಗೊಳಿಸಿದರೆ, ಪೂಜಾರರಾಗಿ ಗೌತಮ ಜಾಲಿಮಿಂಚಿ, ಸುದರ್ಶನ ಹೆಬ್ಬಾಳ, ಚಾಮರ ಬೀಸುವ ಅಂಗರಕ್ಷಕರಾಗಿ ರಾಘವೇಂದ್ರ ವಡವಡಗಿ, ಸಂದೀಪ ಕುಪ್ಪಸ್ತ, ಪೋತರಾಜನಾಗಿ ಬಸವರಾಜ ಇಂಗಳೇಶ್ವರ ಜನಮನ ಸೂರೆಗೊಂಡರು.ಡೊಳ್ಳು ಕುಣಿತ ವಾದಕರಾಗಿ ಅಂಬರೀಶ್ ಹೆಬ್ಬಾಳ, ನವೀನ ಕೊಳ್ಳಿ, ವಿಜಯ ಪತಂಗೆ, ಶಂಕರ ಸರೂರ, ಸಂಗಮೇಶ ಜಾಲಿಮಿಂಚಿ, ಶಶಿಕುಮಾರ ಅರಳಿಚಂಡಿ, ಸಚಿನ ಪ್ಯಾಟಿಗೌಡ್ರ, ಮಹಾಂತೇಶ ತೆಳಗಡಿ ಗಮನ ಸೆಳೆದರು.
ನಿಡಗುಂದಿ: ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಗಾಂಧಿಯವರ 76 ನೇ ಪುಣ್ಯ ತಿಥಿ ಆಚರಿಸಲಾಗುತ್ತಿದೆ ಎಂದು ಗ್ರಾಮದ ಹಿರಿಯರಾದ ಶಿವನಗೌಡ ಪಾಟೀಲ ಹೇಳಿದರು.ಅವರು ಪಟ್ಟಣದ ಹೊರವಲಯದ ಮಣಗೂರ ಸರ್ಕಾರಿ ಪ್ರೌಡಶಾಲೆಯಲ್ಲಿ ಮಂಗಳವಾರ ನಡೆದ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.1948 ಜನವರಿ 30 ರಂದು ಪ್ರಾರ್ಥನೆಗೆಂದು ಬಿರ್ಲಾ ಹೌಸ್ ಗೆ ತೆರಳಿದ್ದ ಅವರ ಮೇಲೆ ಗೋಡ್ಸೆ ಗುಂಡಿಕ್ಕಿದ ಪರಿಣಾಮ ಅವರು ಇಹಲೋಕ ತ್ಯಜಿಸಿದ್ದರು. ಜನವರಿ 30 ರಂದು ಗಾಂಧಿ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಮಡಿದ ಅಸಂಖ್ಯ ಹುತಾತ್ಮರಿಗೆ ನಮಿಸುವ ದಿನ ಎಂದರು.ಪ್ರಭಾರ ಮುಖ್ಯ ಶಿಕ್ಷಕ ಶಿವಪ್ಪ ಪೂಜೇರ, ಶಿಕ್ಷಕಿ ಪದ್ಮಾವತಿ ದಾಸರ ಮಾತನಾಡಿ, ದೇಶಕ್ಕಾಗಿ ಪ್ರಾಣತೆತ್ತ ಇನ್ನೀತರ ಮಹಾತ್ಮರ ಬಲಿದಾನವನ್ನು ಸ್ಮರಿಸಿದರು.ಎಸ್.ಬಿ. ಪಾಟೀಲ, ಟಿ.ನಿಂಗಪ್ಪ, ಯು.ಎಂ. ಪ್ರಧಾನಿ, ಸಿ.ಐ. ಪಾಟೀಲ, ಎನ್.ಬಿ. ಬಾಗವಾನ, ಆರ್.ಎನ್. ಮಂಡಿ ಇದ್ದರು.
ಮಹಾತ್ಮರ ಹುತಾತ್ಮ ದಿನದ ಸ್ಮರಣೆ – ವೀಣಾ ಹೇಮಂತಗೌಡ ಪಾಟೀಲ. ಮುಂಡರಗಿ ಒಬ್ಬ ವ್ಯಕ್ತಿ ಒಂದಿಡೀ ಸಮುದಾಯದ ಶಕ್ತಿಯಾದ. ಇಡೀ ದೇಶದ ಒಕ್ಕೊರಲಿನ ದನಿಗೆ ಕಹಳೆಯಾದ. ಆತನ ಅತಿ ಸಾಧಾರಣ ವಸ್ತ್ರವೊಂದರಲ್ಲೇ ಆತ ಅಸಾಧಾರಣ ಶಕ್ತಿಯಾದ. .ನಿರಾಯುಧನಾಗಿದ್ದ ಈತನಿಗೆ ಸರ್ವಾಯುಧಧಾರಿಗಳು ಶರಣಾದರು. ತೆಳುಕಾಯದ ಈತನ ದನಿಗೆ ಇಡೀ ಬ್ರಿಟಿಷ್ ಸಾಮ್ರಾಜ್ಯ ನಡುಗುತ್ತಿತ್ತು .ಯಾವುದೀ ಶಕ್ತಿ? ಯಾರು ಈ ವ್ಯಕ್ತಿ? ಖಡ್ಗದ ಝೇಂಕಾರವಿಲ್ಲದ, ಗುಂಡಿನ ಮೊರೆತವಿಲ್ಲದೆ, ಕೇವಲ ಅಹಿಂಸೆಯ ಬಲದಿಂದಲೇ ಸ್ವಾತಂತ್ರ್ಯ ಪಡೆದ ಭಾರತ ದೇಶದ ಹೆಮ್ಮೆಯ ಕುವರ ದಣಿವರಿಯದ ಸಂತ ….ಅವರೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಬಾಪು, ಮಹಾತ್ಮ ಗಾಂಧಿ .ಕೇವಲ ನಾಮಮಾತ್ರದಿಂದಲೇ ಇಡೀ ದೇಶದಲ್ಲಿ, ದೇಶದ ಜನತೆಯಲ್ಲಿ ರೋಮಾಂಚನ ಹುಟ್ಟಿಸುತ್ತಿದ್ದ ವ್ಯಕ್ತಿ ಗಾಂಧಿ. ಆತನಲ್ಲಿದ್ದ ಶಕ್ತಿ ಯಾವುದು?…ಅಹುದು , ಅದುವೇ ಆತನಲ್ಲಿದ್ದ ಅಂತಸ್ಸತ್ವ, ಸತ್ಯಸಂಧತೆ, ಅಹಿಂಸಾವಾದ ಮತ್ತು ಅಂತಿಮವಾಗಿ ಮಾನಸಿಕ ದೃಢತೆ.ತುಂಡು ಬಟ್ಟೆಯುಟ್ಟು ಒಂದಿಡೀ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ನಡುಗಿಸಿದ ಗಾಂಧೀಜಿಯವರಿಗಿದ್ದ ಅಂತಶಕ್ತಿಯ ಮೂಲಸೆಲೆ ಯಾವುದು ?ಅಹಿಂಸೆಯ ಮೂಲಕವೇ ದೇಶದ ಜನರನ್ನೆಲ್ಲ…
ದಿ.ಎಂ.ಸಿ ಮನಗೂಳಿ ೩ನೆಯ ಪುಣ್ಯ ಸ್ಮರಣೆ | ಆರೋಗ್ಯ ಉಚಿತ ಶಿಬಿರ | ಶಾಸಕ ಅಶೋಕ ಮನಗೂಳಿ ಅಭಿಮತ ಸಿಂದಗಿ: ದಿ. ಎಂ.ಸಿ.ಮನಗೂಳಿ ಕೇವಲ ನಮ್ಮ ಮನೆತನಕ್ಕೆ ಮಾತ್ರ ಸೀಮಿತವಾಗಿರದೆ ಇಡೀ ಮತಕ್ಷೇತ್ರಕ್ಕೆ ಆದರ್ಶವಾಗಿದ್ದರು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಭಾನುವಾರದಂದು ಪಟ್ಟಣದ ಎಚ್.ಜಿ. ಹೈಸ್ಕೂಲ್ ಆವರಣದಲ್ಲಿ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಇವರ ಮೂರನೇ ಪುಣ್ಯ ಸ್ಮರಣಾರ್ಥವಾಗಿ ಸಿಂದಗಿ ಮನಗೂಳಿ ಪ್ರತಿಷ್ಠಾನ ಹಾಗೂ ವಿಜಯಪುರದ ಬಿ.ಎಂ.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಮ್ಮ ತಂದೆಯವರು ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ವೈದ್ಯಕೀಯವಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಸಿಂದಗಿ ಮತಕ್ಷೇತ್ರದಲ್ಲಿ ಅವರು ಮಾಡಿದ ಕಾರ್ಯ ಜನತೆ ಅವರ ಮೇಲಿಟ್ಟ ಪ್ರೀತಿಯಿಂದ ಇಂದು ನಾನು ಶಾಸಕನಾಗಲು ಕಾರಣವಾಗಿದೆ ಎಂದರು.ಮನುಷ್ಯನಿಗೆ ಎಲ್ಲ ಸಂಪತ್ತು ಇದ್ದರೂ ಅದನ್ನು ಸವಿಯಬೇಕಾದರೆ ಆರೋಗ್ಯ ಉತ್ತಮವಾಗಿರಬೇಕು. ಜಗತ್ತು ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಸೂಕ್ಷ್ಮ ಅಂಗ…
ಬರಪರಿಹಾರದಲ್ಲಿ ಅನ್ಯಾಯ | ತೆರಿಗೆ ಪಾಲಿನಲ್ಲಿ ವಂಚನೆ | ಬಿಜೆಪಿ ಲೋಕಸಭಾ ಸದಸ್ಯರ ಬಾಯಿಗೆ ಬೀಗ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಬೆಂಗಳೂರು: ಬರಪರಿಹಾರದಲ್ಲಿ ಅನ್ಯಾಯ, ತೆರಿಗೆ ಪಾಲಿನಲ್ಲಿ ವಂಚನೆ, ಹಣಕಾಸು ಆಯೋಗದ ಅನುದಾನದಲ್ಲಿ ಮೋಸ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣ ನೀಡದೆ ಅನ್ಯಾಯ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಒಂದೇ ಎರಡೇ? ಹೀಗಿದ್ದರೂ ರಾಜ್ಯದ 25 ಬಿಜೆಪಿ ಲೋಕಸಭಾ ಸದಸ್ಯರು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.ಸೋಮವಾರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಬರಪೀಡಿತ ಪ್ರದೇಶದ ರೈತರಿಗೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಪರಿಹಾರದ ಹಣ ನೀಡದೆ ಕಳೆದ ಐದು ತಿಂಗಳಿನಿಂದ ಗೋಳಾಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲಾಗದ ರಾಜ್ಯದ ಪುಕ್ಕಲು ಬಿಜೆಪಿ ನಾಯಕರು ನಮ್ಮ ವಿರುದ್ಧ ”ಪರಿಹಾರ ಕೊಡಿ ಕುರ್ಚಿ ಬಿಡಿ” ಎಂಬ ನಾಟಕ ಪ್ರದರ್ಶನಕ್ಕೆ ಹೊರಟಿರುವುದು ಹಾಸ್ಯಾಸ್ಪದ ಮಾತ್ರವಲ್ಲ ನಾಡಿನ ರೈತರಿಗೆ ಬಗೆಯುತ್ತಿರುವ ದ್ರೋಹವಾಗಿದೆ…
ವಿಜಯಪುರ: ಅಂತಾರಾಷ್ಟ್ರೀಯ ಖ್ಯಾತಿಯ ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಲಮೇಲದ ವೈದ್ಯಸಾಹಿತಿ ಡಾ.ಸಮೀರ ಹಾದಿಮನಿಯವರು ಆಯ್ಕೆಯಾಗಿದ್ದಾರೆ.ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರುಸೃಷ್ಟಿಸುವ ಸಲುವಾಗಿ ರಾಜ್ಯ ಸರ್ಕಾರವು ಹಂಪಿ ಉತ್ಸವವನ್ನು ಆರಂಭಿಸಿದ್ದು, 2024ರ ಹಂಪಿ ಉತ್ಸವವು ಫೆಬ್ರವರಿ 2 ರಿಂದ 4ರವರೆಗೆ ಐತಿಹಾಸಿಕ ಪ್ರವಾಸಿ ತಾಣ ಹಂಪಿಯಲ್ಲಿ ನಡೆಯಲಿದೆ. ಉತ್ಸವದ ಪ್ರಯುಕ್ತ ಕವಿಗೋಷ್ಠಿಯು ವಿರೂಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಜರುಗುವುದು.ಡಾ.ಸಮೀರ ಹಾದಿಮನಿಯವರು ಈಗಾಗಲೇ ನವರಸಪುರ ಅಂತರಾಷ್ಟ್ರೀಯ ಉತ್ಸವ, ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ಸಮ್ಮೇಳನಗಳಲ್ಲಿ ಕವನವಾಚನ ಮಾಡಿದ್ದಾರೆ. ಉಪ್ಪು ನೀರಿನ ಸೆಲೆ, ಶ್ಲಾಘನೆ-ಖಂಡನೆ ಸೇರಿದಂತೆ ಐದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಕಾನಿಪ ಸಂಘದ ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ವಿತರಿಸಿದ ಸಚಿವ ಎಂ.ಬಿ.ಪಾಟೀಲ ಭರವಸೆ ವಿಜಯಪುರ: ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪತ್ರಕರ್ತರು ಸಮಯಕ್ಕೆ ಸರಿಯಾಗಿ ಆಹಾರ, ನಿದ್ರೆ ಮಾಡಲ್ಲ. ಅಂಥ ಪತ್ರಕರ್ತರಿಗೆ ಆರೋಗ್ಯ ಸೇವೆ ಕಲ್ಪಿಸಲು ಬಿಎಲ್ ಡಿಇ ಆಸ್ಪತ್ರೆ ಬದ್ಧವಾಗಿದೆ ಎಂದು ಬಿಎಲ್ ಡಿ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.ನಗರದ ಬಿಎಲ್ ಡಿಇ ಆಸ್ಪತ್ರೆಯ ಟ್ರಾಮಾ ಸೆಂಟರ್ ಸಭಾಂಗಣದಲ್ಲಿ ಸೋಮವಾರ ಬಿಎಲ್ ಡಿಇ ಆಸ್ಪತ್ರೆಯ ಆರೋಗ್ಯ ಭಾಗ್ಯ ಯೋಜನೆಯಡಿ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಫ್ಯಾಮಿಲಿ ಹೆಲ್ತ್ ಕಾರ್ಡ್ ವಿತರಿಸಿ ಅವರು ಮಾತನಾಡಿದರು.ಅದೆಷ್ಟೋ ಪತ್ರಕರ್ತರು ವಿಶ್ರಾಂತಿ ತೆಗೆದುಕೊಳ್ಳದೇ, ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಅಂಥ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗೆ ಸೇವಾ ಸೌಲಭ್ಯಗಳನ್ನು ಒದಗಿಸಲು ಬಿಎಲ್ ಡಿಇ ಆಸ್ಪತ್ರೆ ಮುಂದಾಗಿದೆ ಎಂದರು.ಪತ್ರಕರ್ತರ ಕಷ್ಟದ ಜೀವನ ಕಂಡಿದ್ದೇವೆ.…
