ನಿಡಗುಂದಿ: ತಾಲ್ಲೂಕಿನ ವಂದಾಲ ಬನಶಂಕರಿ ದೇವಿ ಜಾತ್ರೆಯ ಅಂಗವಾಗಿ ಮಂಗಳವಾರ, ಕನ್ನಡ ನಾಡಿನ ಗತವೈಭವ ನೆನಪಿಸುವ ಸಾಂಸ್ಕೃತಿಕ ಕಲೆಗಳಲ್ಲೊಂದಾದ ಗ್ರಾಮದೇವತೆ (ದ್ಯಾಮವ್ವ ತಾಯಿ) ಯ ಸೋಗಿನ ಮೆರವಣಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂದಾಗ ಜಾತ್ರೆಗೆ ಬಂದ ಯಾತ್ರಿಕರೆಲ್ಲ ಭಾವ ಪರವಶರಾಗಿ ಭಕ್ತಿಯಿಂದ ನಮಿಸಿದರು. ಗ್ರಾಮದೇವತೆಯ ವೇಶದಲ್ಲಿ ಮಲ್ಲಿಕಾರ್ಜುನ ಕುಪ್ಪಸ್ತ ಕಂಗೊಳಿಸಿದರೆ, ಪೂಜಾರರಾಗಿ ಗೌತಮ ಜಾಲಿಮಿಂಚಿ, ಸುದರ್ಶನ ಹೆಬ್ಬಾಳ, ಚಾಮರ ಬೀಸುವ ಅಂಗರಕ್ಷಕರಾಗಿ ರಾಘವೇಂದ್ರ ವಡವಡಗಿ, ಸಂದೀಪ ಕುಪ್ಪಸ್ತ, ಪೋತರಾಜನಾಗಿ ಬಸವರಾಜ ಇಂಗಳೇಶ್ವರ ಜನಮನ ಸೂರೆಗೊಂಡರು.
ಡೊಳ್ಳು ಕುಣಿತ ವಾದಕರಾಗಿ ಅಂಬರೀಶ್ ಹೆಬ್ಬಾಳ, ನವೀನ ಕೊಳ್ಳಿ, ವಿಜಯ ಪತಂಗೆ, ಶಂಕರ ಸರೂರ, ಸಂಗಮೇಶ ಜಾಲಿಮಿಂಚಿ, ಶಶಿಕುಮಾರ ಅರಳಿಚಂಡಿ, ಸಚಿನ ಪ್ಯಾಟಿಗೌಡ್ರ, ಮಹಾಂತೇಶ ತೆಳಗಡಿ ಗಮನ ಸೆಳೆದರು.
Subscribe to Updates
Get the latest creative news from FooBar about art, design and business.
Related Posts
Add A Comment

